ಸಂವಿಧಾನ ಹರಿದು ಹಾಕಿದ ಪಿಡಿಪಿ ಸಂಸದರು..!

0
116

ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370, 35ಎ ವಿಧಿಗಳನ್ನು ರದ್ದುಗೊಳಿಸಿ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿ ಪಿಡಿಸಿ ಸಂಸದರು ಸಂವಿಧಾನವನ್ನು ಹರಿದುಹಾಕಿದ ಘಟನೆ ನಡೆದಿದೆ. ನಂತರ ಪಿಡಿಪಿ ಪಕ್ಷದ ಸದಸ್ಯರನ್ನು ಮಾರ್ಷಲ್‍ಗಳು ಹೊರ ಹಾಕಿದ್ದಾರೆ.

ಇನ್ನು ವಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ. ಮಸೂದೆ ಮಂಡಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪಿಡಿಪಿಯ ಮೀರ್ ಫಯಾಜ್ ಮತ್ತು ನಾಜಿ ಅಹ್ಮದ್ ಲಾವೇ ಅವರು ತಮ್ಮ ಬಳಿ ಇದ್ದ ಭಾರತೀಯ ಸಂವಿಧಾನದ ಪುಸ್ತಿಕೆಯನ್ನು ಹರಿದು ಹಾಕಿದರು. ಇದನ್ನು ಗಮನಿಸಿದ ಸಭಾಪತಿ ವೆಂಕಯ್ಯ ನಾಯ್ಡು ಅವರು ಪಿಡಿಪಿ ಸಂಸದರನ್ನು ಸದನದಿಂದ ಹೊರಹಾಕಿದರು.

370 ಮತ್ತು 35(ಎ) ರದ್ದುಗೊಂಡ ನಂತರ ವಿಶೇಷ ಸ್ಥಾನಮಾನ ರದ್ದಾಗಲಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಇನ್ನು ಮುಂದೆ ಕೇಂದ್ರಾಡಳಿತ ಪ್ರದೇಶವಾಗಿರಲಿವೆ. ಆದರೆ ಜಮ್ಮು-ಕಾಶ್ಮೀರದಲ್ಲ್ಲಿ ವಿಧಾನಸಭೆ ಇರುತ್ತದೆ. ಆದರೆ ಲಡಾಖ್‍ನಲ್ಲಿ ವಿಧಾನಸಭೆ ಇರುವುದಿಲ್ಲ ಎಂದು ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here