ನೆಹರು ಕುಟುಂಬದ ಬಗ್ಗೆ ವಿವಾದಾತ್ಮಕ ಕಮೆಂಟ್… ನಟಿ ಪೊಲೀಸರ ವಶಕ್ಕೆ.!

0
170

ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಕುಟುಂಬದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಕಮೆಂಟ್ ಮಾಡಿದ್ದ ಬಾಲಿವುಡ್ ನಟಿ ಪಾಯಲ್ ರೋಹತ್ಗಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಮೋತಿ ಲಾಲ್ ನೆಹರು, ಇಂದಿರಾಗಾಂಧಿ ಸೇರಿ ನೆಹರು ಕುಟುಂಬದ ಇನ್ನಿತರ ಸದಸ್ಯರ ಬಗ್ಗೆ ವಿಡಿಯೋವೊಂದಕ್ಕೆ ಪಾಯಲ್ ವಿವಾದಾತ್ಮಕ ಕಮೆಂಟ್ ಮಾಡಿದ್ದರು.

 

ಈ ಘಟನೆ ನಡೆದದ್ದು ಸೆಪ್ಟೆಂಬರ್‍ನಲ್ಲಿ. ಈ ಸಂಬಂಧ ಕಾಂಗ್ರೆಸ್ ಮುಖಂಡ ಚಾರ್ಮೇಶ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಸ್ ದಾಖಲಿಸಿದ್ದರು. ಈ ವಿಷಯದ ಬಗ್ಗೆ ವಿವರಣೆ ನೀಡುವಂತೆ ಪಾಯಲ್‍ಗೆ ನೋಟೀಸ್ ಜಾರಿ ಮಾಡಿದ್ದರೂ ಪಾಯಲ್ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಪಾಯಲ್ ಅವರನ್ನು ಗುಜರಾತ್‍ನಿಂದ ರಾಜಸ್ಥಾನಕ್ಕೆ ಕರೆತಂದಿದ್ದೇವೆ ಎಂದು ಎಸ್‍.ಪಿ ಮಮತಾ ಗುಪ್ತಾ ಮಾಹಿತಿ ನೀಡಿದ್ದಾರೆ. ಪಾಯಲ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಇಂದು ಕೋರ್ಟಿನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

 

ಈ ವಿಚಾರವಾಗಿ ಸ್ಪಂದಿಸಿರುವ ಪಾಯಲ್, ಗೂಗಲ್‍ನಿಂದ ಪಡೆದ ಮಾಹಿತಿ ಆಧಾರದ ಮೇಲೆ ನಾನು ಆ ಟ್ವೀಟ್ ಮಾಡಿದ್ದೆ. ಅಭಿವ್ಯಕ್ತಿ ಸ್ವಾತಂತ್ಯ್ರ ಒಂದು ತಮಾಷೆ ಅಷ್ಟೇ. ಆದರೆ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ನನ್ನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಗಾಂಧಿ ಕುಟುಂಬದವರು ರಾಜಸ್ಥಾನ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here