1 ಕೋಟಿ ದುಬಾರಿ ಸೆಟ್ ಹಾಕಿದ ನಿರ್ದೇಶಕ ಪವನ್ ಒಡೆಯರ್

0
256

‘ನಟ ಸಾರ್ವಭೌಮ’ ಚಿತ್ರದ ಸಕ್ಸಸ್ ಬಳಿಕ ನಿರ್ದೇಶಕ ಪವನ್ ಒಡೆಯರ್ ‘ರೆಮೋ’ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರವು ತನ್ನ ವಿಭಿನ್ನ ಶೀರ್ಷಿಕೆಯ ಮೂಲಕ ಸಾಕಷ್ಟು ಗಮನ ಸೆಳೆದಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸದ್ಯ ಈ ಚಿತ್ರದ ಬಹುಮುಖ್ಯ ದೃಶ್ಯಕ್ಕಾಗಿ ನಿರ್ದೇಶಕರು, 1 ಕೋಟಿ ದುಬಾರಿ ಸೆಟ್ ಹಾಕಿಸಿದ್ದಾರೆ. ಹೌದು, ವಿಜಯನಗರದ ಬಸ್ ನಿಲ್ದಾಣದ ಬಳಿಯಿರುವ ಕಟ್ಟಡವೊಂದರ ಟೆರಸ್ ಮೇಲೆ ಐಷಾರಾಮಿ ಕಚೇರಿಯ ಸೆಟ್ ಹಾಕಲಾಗಿದೆ.ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆ ಈ ಐಷಾರಾಮಿ ಕಚೇರಿ ನಿರ್ಮಿಸಲಾಗಿದ್ದು, ಸಂಪೂರ್ಣ ಗಾಜಿನ ಸೆಟ್ ರೂಪಿಸಲಾಗಿದೆ. ಪಕ್ಕದಲ್ಲೇ ಮೆಟ್ರೋ ಸಾಗುವುದರಿಂದ ಒಂದೊಳ್ಳೆ ಲೊಕೇಶನ್ ಇದಾಗಲಿದೆ.

ಇನ್ನು ಈ ಕುರಿತು ನಿರ್ದೇಶಕರು ಹೀಗೆ ಹೇಳಿದ್ದಾರೆ, ‘ನನ್ನ ಕಲ್ಪನೆಗೆ ತಕ್ಕಂತೆ ಕಲಾ ನಿರ್ದೇಶಕರಾದ ಗುಣ ಮತ್ತು ಕರಣ್ ರವರು ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸೆಟ್ ಹಾಕಿದ್ದಾರೆ. ಚಿತ್ರದಲ್ಲಿ ನಮ್ಮ ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆ ಒಂದು ಆಫೀಸ್ ಸೆಟ್ ಬೇಕಾಗಿತ್ತು. ಅದಕ್ಕಾಗಿ ಒಂದಿಷ್ಟು ಸ್ಕೆಚ್ ಹಾಕಿ ಈ ವಿಜಯನಗರದಲ್ಲಿ ಸೆಟ್ ಹಾಕ್ತಿದ್ದೀವಿ.

ಇನ್ನು ಚಿತ್ರಕ್ಕೆ ಇಶಾನ್ ನಾಯಕನಟರಾಗಿದ್ದು, ಇವರು ಈ ಹಿಂದೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬಂದಿದ್ದ ‘ರೋಗ್’ ಚಿತ್ರದಲ್ಲಿ ನಟಿಸಿದ್ದರು. ಅಂದ ಹಾಗೆ ಈ ಚಿತ್ರವು ಪ್ರೇಮಮಯ ಕಥೆಯನ್ನು ಒಳಗೊಂಡಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಸಿಆರ್ ಮನೋಹರ್ ನಿರ್ಮಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here