ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಜಿಎಸ್ಟಿ ತೆರಿಗೆ ನೀತಿಯಿಂದ ದೇಶದ ಅನೇಕ ಉದ್ಯಮಗಳು ಇದೀಗ ನಷ್ಟದ ಹಾದಿ ಹಿಡಿದಿವೆ. ಅದಕ್ಕೆ ಉದಾಹರಣೆ ಎಂದರೆ ದೇಶದ ಅತ್ಯಂತ ದೊಡ್ಡ ಬಿಸ್ಕೆಟ್ ತಯಾರಿಕಾ ಕಂಪನಿಯಾಗಿದ್ದ ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್ ನಷ್ಟದ ಸುಳಿಗೆ ಸಿಲುಕಿದೆ.
ಹೌದು, ಜಿಎಸ್ಟಿ ಹೊಡೆತಕ್ಕೆ ಪ್ರಖ್ಯಾತ ಬಿಸ್ಕೆಟ್ ಕಂಪೆನಿ ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್ ತನ್ನ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧಾರ ಮಾಡಿದೆ. ಜಿಎಸ್ಟಿ ಜಾರಿಯಾದಾಗಿನಿಂದ ಸತತವಾಗಿ ಪಾರ್ಲೆ ನಷ್ಟದಲ್ಲಿದೆ ಎನ್ನಲಾಗಿದೆ. ಪರಿಣಾಮವಾಗಿ 8 ಸಾವಿರದಿಂದ 10 ಸಾವಿರ ಉದ್ಯೋಗಿಗಳನ್ನು ಕೈಬಿಡಬೇಕಾಗಬಹುದು ಎಂದು ಕಂಪನಿಯ ಉತ್ಪಾದನೆ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್ ಶಾ ತಿಳಿಸಿದ್ದಾರೆ.

ಅಚ್ಚರಿ ಎಂದರೆ 2017ರಲ್ಲಿ ದೇಶದಲ್ಲಿ ಮೋದಿ ಸರ್ಕಾರ ಜಿಎಸ್ಟಿ ಜಾರಿಗೆ ತಂದ ಬಳಿಕ ಪಾರ್ಲೆಜಿ ಕಂಪನಿಗೆ ಗ್ರಾಮೀಣ ಭಾಗದಲ್ಲಿ ತೀರ ನಷ್ಟವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕಂಪನಿಗೆ ತೀವ್ರ ಹೊಡೆತ ಬಿದ್ದಿದ್ದು, ಈ ನಷ್ಟವನ್ನು ಸರಿದೂಗಿಸುವ 10,000 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಪಾರ್ಲೆ ಕಂಪನಿ ನಿರ್ಧರಿಸಿದೆ.