ಪೋಷಕರೇ PUBG ಆಡುವ ಮಕ್ಕಳ ಬಗ್ಗೆ ಇರಲಿ ಎಚ್ಚರ

0
194

ಇತ್ತೀಚಿನ ಆನ್‌ಲೈನ್ ಗೇಮ್’ಗಳಲ್ಲಿ ಪ್ರಮುಖವಾದ ಆಟ ಎಂದರೆ ಅದು PUBG ಎಂದೇ ಹೇಳಬಹುದು. ಸ್ಮಾರ್ಟ್ ಫೋನ್ ಬಳಸಿ ಆಡಬಹುದಾದ ಈ ಆಟಕ್ಕೆ ಹಲವಾರು ಯುವಕರು ಅದರಲ್ಲೂ, ಮಕ್ಕಳೇ ಹೆಚ್ಚು ಅಡಿಕ್ಟ್ ಆಗಿದ್ದಾರೆ.! ಎಂದರೆ ತಪ್ಪಾಗಲಾರದು. ಮಾನಸಿಕ ವೈದ್ಯರ ಬಳಿ ಹೆಚ್ಚು ಕೇಸ್ ಗಳು ಬರುತ್ತಿರುವುದು PUBG ಆಟಕ್ಕೆ ತುತ್ತಾಗಿರುವ ಮಕ್ಕಳೇ ಎಂಬುದನ್ನು ಖುದ್ದಾಗಿ ವೈದ್ಯರೇ ಖಚಿತ ಮಾಹಿತಿಯೊಂದಿಗೆ ಸ್ಪಷ್ಟಪಡಿಸಿದ್ದಾರೆ. ಹೌದು, ಪೋಷಕರು ಇಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಮೊಬೈಲ್ ನೀಡುವ ಮೂಲಕ ಬಹಳ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎನ್ನಬಹುದು. ಮಕ್ಕಳು ಈ PUBG ಗೇಮ್’ಗೆ ತೀರಾ ಆಕರ್ಷಣೆಗೆ ಒಳಗಾಗಿದ್ದು, ಮಾನಸಿಕ ರೋಗಕ್ಕೆ ಕೂಡ ತುತ್ತಾಗುತ್ತಿದ್ದಾರೆ. PUBG ಗೇಮ್ ಹಾನಿಕಾರಕ, ವ್ಯಸನಕಾರಕ ಮತ್ತು ಮಕ್ಕಳ ಗಮನ ಸೆಳೆಯುವ ಆಟವಾಗಿದೆ.

ಈಗಾಗಲೇ ಕೆಲ
ರಾಜ್ಯ, ದೇಶಗಳಲ್ಲಿ ಈ ಗೇಮ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಆದರೆ ಆಶ್ಚರ್ಯ ಸಂಗತಿಯೆಂದರೆ ಅತಿ ಹೆಚ್ಚು PUBG ಗೇಮ್’ಗೆ ಅಡಿಕ್ಟ್ ಆಗಿರುವ ಸಂಖ್ಯೆ ಕಂಡು ಬಂದಿರುವುದು ಭಾರತದಲ್ಲೇ ಎಂಬುದು ಎಲ್ಲರಿಗೂ ಶಾಕಿಂಗ್ ವಿಷಯ ಎನ್ನಬಹುದು.

LEAVE A REPLY

Please enter your comment!
Please enter your name here