ಪರಂಗಿ ಹಣ್ಣಿನಲ್ಲಿ ಅತೀ ಹೆಚ್ಚು ಔಷಧಿಯ ಸತ್ವಗಳಿವೆ ಹಾಗೂ ಹಲವಾರು ರೀತಿಯ ಪ್ರಯೋಜನಗಳಿವೆ.ಅದು ಏನೆಂದು ತಿಳಿದುಕೊಳ್ಳೊಣ ಬನ್ನಿ.

0
456

ಪರಂಗಿ ಹಣ್ಣಿನಲ್ಲಿ ವಿಟಮಿನ್ ‘ಎ’ ಸತ್ವ ಹೆಚ್ಚಾಗಿದೆ, ಅದು ಬಹುಮುಖ್ಯವಾಗಿ ನಮ್ಮ ಕಣ್ಣಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರಿಯಾಗಿದೆ. ಇನ್ನು ಪರಂಗಿ ಹಣ್ಣು , ಪರಂಗಿ ಎಲೆಗಳು ಹಾಗೂ ಪರಂಗಿ ಬೀಜಗಳು ಔಷಧಿಯ ಗುಣಗಳನ್ನು ಹೊಂದಿವೆ. ಪರಂಗಿ ಹಣ್ಣಿನಲ್ಲಿ ಪ್ರೊಟೀನ್ , ವಿಟಮಿನ್ ಸಿ, ನಿಯಾಸಿನ್, ಕಬ್ಬಿಣ, ಕಾರ್ಬೋಹೈಡ್ರೇಟ್ ಹಾಗೂ ಫಾಸ್ಫರಸ್ ಖನಿಜಾಂಶಗಳು ತುಂಬ ಹೇರಳವಾಗಿ ಇರುತ್ತದೆ.

ಪರಂಗಿ ಹಣ್ಣಿನ ಸೇವನೆ ಇಂದ ಆಗುವ ಉಪಯೋಗಗಳು :

 1. ಕರುಳಿನ ಯಾವುದೇ ಸಮಸ್ಯೆಗಳಿದ್ದರೂ ಪರಂಗಿ ಹಣ್ಣಿನ ಸೇವನೆಯಿಂದ ನಿವಾರಣೆಯಾಗುತ್ತದೆ.
 2. ಪರಂಗಿ ಹಣ್ಣು ದೇಹದ ಉತ್ತಮ ಬೆಳವಣಿಗೆಗೆ ಪೂರಕವಾದ ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುತ್ತದೆ.
 3. ಪರಂಗಿ ಹಣ್ಣು ಬೊಜ್ಜು ಕರಗಿಸಲು ದಿವ್ಯ ಔಷಧ.
 4. ಪರಂಗಿ ಹಣ್ಣನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕ್ರಮೇಣವಾಗಿ ನಿವಾರಿಸುತ್ತ ಬರುತ್ತದೆ.
 5. ತಿಂಗಳಿಗೊಮ್ಮೆ ಪರಂಗಿ ಹಣ್ಣಿನ ಜೊತೆ ಅದರ ಬೀಜಗಳನ್ನು ಸೇವನೆ ಮಾಡಿದರೆ ಜಂತು ಹುಳು ನಿವಾರಣೆಯಾಗುತ್ತದೆ.
 6. ಗಾಯಗಳಿಗೆ ಅರೆಪಕ್ವ ಹಣ್ಣನ್ನು ತುರಿದು ಹಚ್ಚಿದರೆ ಗಾಯಗಳು ಬೇಗನೆ ವಾಸಿಯಾಗುತ್ತದೆ.
 7. ಅಂಗೈ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಥವಾ ಚರ್ಮ ಬಣ್ಣ ಕಳೆದುಕೊಂಡಿದ್ದರೆ ಪರಂಗಿ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅದು ನಿವಾರಣೆಯಾಗುತ್ತದೆ.
 8. ಕಜ್ಜಿ ಮತ್ತು ತುರಿಕೆಗಳಂತಹ ಚರ್ಮದ ಸಮಸ್ಯೆಗಳಿಗೆ ಪರಂಗಿ ಕಾಯಿಯ ರಸವನ್ನು ಲೇಪಿಸಿದರೆ ಉಪಶಮನವಾಗುತ್ತದೆ.
 9. ಇರುಳು ಕುರುಡುತನ ಪರಂಗಿ ಹಣ್ಣಿನ ನಿಯಮಿತ ಸೇವನೆಯಿಂದ ಕಡಿಮೆಯಾಗುತ್ತದೆ.
 10. ಪರಂಗಿ ಹಣ್ಣಿನ ಬೀಜವನ್ನು ಒಣಗಿಸಿ ಅದನ್ನು ಪುಡಿ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಮಹಿಳೆಯರ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.
 11. ಪರಂಗಿ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಡಯಾಬಿಟಿಸ್ ಕಾಯಿಲೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ.
 12. ಪರಂಗಿ ಕಾಯಿಯನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಬಹುದು.
  13.ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಆಗುವ ನೋವನ್ನು ಪರಂಗಿ ಹಣ್ಣಿನಲ್ಲಿರುವ ಫೈಬರ್ ಮತ್ತು ಪಪೇನ್ ಅಂಶಗಳು ಶಮನಗೊಳಿಸುತ್ತದೆ.
 13. ಪರಂಗಿ ಗಿಡದ ಎಲೆಗಳನ್ನು ಜ್ಯೂಸ್ ಮಾಡಿ ಕುಡಿದರೆ ನಮ್ಮ ದೇಹದಲ್ಲಿ ಕಾಯಿಲೆಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯ ಅಂಶಗಳನ್ನು ಹೆಚ್ಚಿಸುತ್ತದೆ.
 14. ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳು ಪರಂಗಿ ಗಿಡದ ಎಲೆಗಳ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತದೆ.

ಪರಂಗಿ ಹಣ್ಣಿನ ಬ್ಯೂಟಿ ಟಿಪ್ಸ್ :

 1. ತಲೆಕೂದಲು ಉದುರುವ ಸಮಸ್ಯೆ ಕಡಿಮೆಯಾಗಲು ಪರಂಗಿ ಹಣ್ಣಿನ ರಸದ ಜೊತೆಗೆ ಮೊಸರು ಬೆರೆಸಿ ಹೇರ್ ಪ್ಯಾಕ್ ತಯಾರಿಸಿ ತಿಂಗಳಿಗೊಮ್ಮೆ ತಲೆಯ ಬುಡಕ್ಕೆ ಹಚ್ಚಿ ಕಡಲೇಹಿಟ್ಟಿನಿಂದ ತೊಳೆಯಬೇಕು.
 2. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಪರಂಗಿ ಹಣ್ಣನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತ ಬಂದರೆ ಉಪಯುಕ್ತವಾಗುತ್ತದೆ.
 3. ಮುಖದಲ್ಲಿ ಜಿಡ್ಡಿನ ಅಂಶ ಹೆಚ್ಚಾಗಿದೆ ಎನ್ನುವವರು ಬ್ಲ್ಯಾಕ್ ಟೀ ಸೋಸಿ ಅದಕ್ಕೆ ಪರಂಗಿ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ತಣ್ಣೀರಿನಿಂದ ತೊಳೆಯುತ್ತಾ ಬಂದರೆ ಜಿಡ್ಡಿನ ಸಮಸ್ಯೆ ಕ್ರಮೇಣ ನಿವಾರಣೆಯಾಗುತ್ತದೆ.

 1. ಪ್ರತಿನಿತ್ಯ ಪರಂಗಿ ಹಣ್ಣನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಸನ್ ಬರ್ನ್ ಆಗುವುದನ್ನು ತಡೆಗಟ್ಟುತ್ತದೆ.
 2. ಪರಂಗಿ ಹಣ್ಣಿನ ಸಿಪ್ಪೆಗಳಿಂದ ಕೈ ಹಾಗೂ ಕಾಲುಗಳ ಮೇಲೆ ನಿಯಮಿತವಾಗಿ ನೇವರಿಸುತ್ತಾ ಬಂದರೆ ಚರ್ಮದ ಮೇಲಿರುವ ಕಪ್ಪು ಕ್ರಮೇಣ ಮಾಯವಾಗುತ್ತದೆ.

LEAVE A REPLY

Please enter your comment!
Please enter your name here