ಮೋದಿಯವರೇ.. ಭಾರತದಲ್ಲೇ ಹೆಚ್ಚು ಸಮಯ ಕಳೆದು, ಆರ್ಥಿಕತೆಯನ್ನು ಸದೃಡಗೊಳಿಸಿ – ಅಮೇರಿಕಾದ ಅರ್ಥಶಾಸ್ತ್ರಜ್ಞ

0
218

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸಗಳನ್ನು ಕೈಬಿಟ್ಟು ಭಾರತದಲ್ಲಿಯೇ ಹೆಚ್ಚಿನ ಸಮಯ ಕಳೆಯಬೇಕು. ವಿದೇಶಗಳನ್ನು ಸುತ್ತುವುದನ್ನು ಬಿಟ್ಟು, ಭಾರತದ ಆರ್ಥಿಕತೆಯತ್ತ ಗಮನ ಕೇಂದ್ರಿಕರಿಸಬೇಕು. ಕುಸಿಯುತ್ತಿರುವ ಆರ್ಥಿಕತೆ ಹಾಗೂ ಜನರ ನಡುವೆ ಹೆಚ್ಚುತ್ತಿರುವ ಕಂದಕಗಳನ್ನು ಸರಿಪಡಿಸಲು ಶ್ರಮಿಸಬೇಕು. ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ವಿದೇಶಿಗರಿಗೆ ಹೇಳುತ್ತಾ ಸಮಯ ವ್ಯರ್ಥ ಮಾಡುವುದನ್ನು ಬಿಡಬೇಕು ಎಂದು ನ್ಯೂಯಾರ್ಕ್ ನಗರದ ಎಲ್‍ಐಯು ಪೋಸ್ಟ್ ಎಂಬ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪನೋಸ್ ಮೌರ್ಡೌಕೌಟಸ್ ‘ಫೋಬ್ರ್ಸ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಮೋದಿಗೆ ಸಲಹೆ ನೀಡಿದ್ದಾರೆ.

ಪನೋಸ್ ಮೌರ್ಡೌಕೌಟಸ್ ಮೋದಿ ಸರ್ಕಾರದ ಅನೇಕ ನೀತಿಗಳನ್ನು ಟೀಕಿಸಿದ್ದು, ಮೋದಿ ಜಗತ್ತಿನ ಪ್ರಬಲ ನಾಯಕರ ಜತೆ ಮಾತನಾಡುತ್ತಿರುವಾಗ ಅತ್ತ ಭಾರತ ದೇಶದ ಅರ್ಥವ್ಯವಸ್ಥೆ ತೀವ್ರವಾಗಿ ಕುಸಿಯುತ್ತಿದೆ. ಭಾರತದ ಆರ್ಥಿಕ ಪ್ರಗತಿಯ ಪ್ರಮಾಣ ಶೇಕಡಾ 8ರಿಂದ ಶೇಕಡಾ 5ಕ್ಕೆ ಇಳಿಕೆಯಾಗಿದೆ. ಈ ಕುರಿತು ಮೋದಿ ಹೆಚ್ಚು ಗಮನ ಹರಿಸಬೇಕು ಎಂದು ಪನೋಸ್ ಮೌರ್ಡೌಕೌಟಸ್ ತಮ್ಮ “ಮೋದಿ ಶುಡ್ ಸ್ಪೆಂಡ್ ಮೋರ್ ಟೈಮ್ ಎಟ್ ಹೋಮ್” ಎಂಬ ಶೀರ್ಷಿಕೆಯಲ್ಲಿ ಬರೆದ ತಮ್ಮ ಲೇಖನದಲ್ಲಿ ಅವರು ವಿವರಿಸಿದ್ದಾರೆ.

ಇನ್ನು ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 46.80ಗೆ ಏರಿಕೆಯಾಗಿದೆ. ಇನ್ನೊಂದೆಡೆ ಉದ್ದಿಮೆ ನಿರೀಕ್ಷೆ ಸೂಚ್ಯಂಕ 113.5 ಅಂಕಗಳಿಂದ ಎರಡನೇ ತ್ರೈಮಾಸಿಕದಲ್ಲಿ 112.8 ಅಂಕಗಳಿಗೆ ಕುಸಿದಿದೆ. ಇನ್ನು ಮೋದಿ ಸರ್ಕಾರದ ನೀತಿಗಳು ಜನರನ್ನು ತಲುಪಿಲ್ಲ, ರಿಸರ್ವ್ ಬ್ಯಾಂಕ್ ಮೇಲೆ ಸರಕಾರ ಸಾಧಿಸಿದ ಹಿಡಿತ ಹಾಗೂ ಜನರನ್ನು ಮುಷ್ಠಿಯಲ್ಲಿಟ್ಟು ಆಡಳಿತ ನಡೆಸುವ ಶೈಲಿ ಮೋದಿ ಸರ್ಕಾರದ ಹಿನ್ನಡೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here