ಪಾಕ್ ಮೂರ್ಖತನ : ಫ್ರಾನ್ಸ್ ನಲ್ಲಿ ಇಲ್ಲದ ರಾಯಭಾರಿಯನ್ನು ಕರೆತರಲು ಹೋಗಿ ನಗೆಪಾಟಲೀಗೀಡು..!

0
99

ಒಂದಿಲ್ಲೊಂದು ಕಾರಣಗಳೀಂದ ಮುಖಭಂಗದ ಸುದ್ದಿಯಲ್ಲೇ ಮುಂಚೂಣಿಯಲ್ಲಿರುವ ಪಾಕಿಸ್ತಾನ ಫ್ರಾನ್ಸ್ ದೇಶದ ಮರ್ಯಾದೆ ತೆಗೆಯಲು ಹೋಗಿ ವಿಶ್ವದ ಮುಂದೆ ಮತ್ತೊಮ್ಮೆ ನಗೆಪಾಟಲಿಗೆ ಈಡಾಗಿದೆ.
ಫ್ರಾನ್ಸ್ ಅಧ್ಯಕ್ಷರ ಧರ್ಮನಿಂದನೇ ವಿರುದ್ಧ ಪಾಕಿಸ್ತಾನ ಪ್ರತಿಭಟನೆ ನಡೆಸುತ್ತಲೇ ಇದೆ. ಈ ಪ್ರತಿಭಟನೆಯ ಗಂಭೀರತೆಯನ್ನು ವಿಶ್ವದ ಮುಂದೆ ಸಾರಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಪಾಕ್‍ನ ಯೋಜನೆ ಮತ್ತೊಮ್ಮೆ ಕೈ ಕೊಟ್ಟು ಅವಮಾನ ಅನುಭವಿಸುವಂತಾಗಿದೆ.
ಫ್ರಾನ್ಸ್ ಅಧ್ಯಕ್ಷರ ಧರ್ಮನಿಂದನೆಯ ವಿರುದ್ಧ ಪ್ರತಿಭಟನೆಯ ಭಾಗವಾಗಿ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸರ್ವಾನುಮತದಿಂದ, ಫ್ರಾನ್ಸ್ ನಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ವಾಪಸ್ ಕೊಂಡು ಫ್ರಾನ್ಸ್ ಗೆ ತಿರುಗೇಟು ನೀಡಲು ಮುಂದಾಗಿತ್ತು. ಆದರೆ ಫ್ರಾನ್ಸ್ ನಲ್ಲಿ ಪಾಕಿಸ್ತಾನ ರಾಯಭಾರಿಯೇ ಇಲ್ಲ ಅನ್ನೋ ವಿಚಾರ ಅಸೆಂಬ್ಲಿಯ ಒಬ್ಬರಿಗೂ ತಿಳಿದೇ ಇಲ್ಲ ಎಂಬುದು ಪಾಕಿಸ್ತಾನದ ಮೂರ್ಖ ಆಡಳಿತವನ್ನು ವಿಶ್ವದೆದುರು ಮತ್ತೊಮ್ಮೆ ತೆರೆದಿಟ್ಟಂತಾಗಿದೆ.

ಉಗ್ರರಿಗೆ ಪೋಷಣೆ : ಗ್ರೇ ಪಟ್ಟಿಯಲ್ಲೇ ಪಾಕ್ ನಲುಗಾಟ!
ಫ್ರಾನ್ಸ್ ನ ಪ್ಯಾರಿಸ್‍ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಸದ್ಯಕ್ಕೆ  ಪಾಕ್‍ನ ಯಾವುದೇ ರಾಯಭಾರಿ ಇಲ್ಲ. 3ತಿಂಗಳ ಹಿಂದೆ ಪಾಕ್ ರಾಯಭಾರಿಯಾಗಿದ್ದ ಮೊಯಿನ್ ಉಲ್ ಹಕ್ ಅವರನ್ನು ಚೀನಾಗೆ ವರ್ಗಾವಣೆ ಮಾಡಲಾಗಿತ್ತು. ತದನಂತರ ಫ್ರಾನ್ಸ್ ಗೆ ರಾಯಬಾರಿಯನ್ನು ನೇಮಿಸುವ ವಿಚಾರದಲ್ಲಿ ಇಮ್ರಾನ್ ಖಾನ್ ಸರ್ಕಾರ ಯಾವುದೇ ಒಲವು ತೋರಿರಲಿಲ್ಲ. ಸದ್ಯಕ್ಕೆ ಇದಾವುದರ ಪರಿವೇ ಇಲ್ಲದೇ ಅಸೆಂಬ್ಲಿಯಲ್ಲಿ ಗಂಭೀರ ಚರ್ಚೆ ಆಡಿ ಕಾಲಹರಣದೊಂದಿಗೆ ಮರ್ಯಾದೆಯನ್ನು ಪಾಕ್ ಕಳೆದು ಕೊಂಡಿದೆ. ಅಲ್ಲದೇ ತಾನು ಉಗ್ರವಾದ ಭಯೋತ್ಪಾದನೆಯ ವಿರುದ್ಧ ಎಂದು ಹೇಳುವ ಪಾಕ್ ತೆರೆಮರೆಯಲ್ಲಿ ಉ’ಗ್ರರ ಪೋಷಣೆಯನ್ನು  ನಿರ್ಣಯದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಶಿ ಕೂಡ ಹಾಜರಿದ್ದರು. ಫ್ರಾನ್ಸ್ ರಾಯಬಾರಿ ಹುದ್ದೆ ಖಾಲಿ ಇರುವ ಕುರಿತು ತಮಗೆ ಮಾಹಿತಿ ಇದ್ದರೂ ಅಸೆಂಬ್ಲಿಯಲ್ಲಿ ಚರ್ಚೆ ನಡೆಯುವಾಗಲು ಅದರ ವಿವರ ಬಹಿರಂಗ ಪಡಿಸಿರಲಿಲ್ಲ. ಇದೆಲ್ಲದರ ನಡುವೆ ಫ್ರಾನ್ಸ್‍ನಲ್ಲಿರುವ ರಾಜತಾಂತ್ರಿಕ ಕಾರ್ಯಗಳನ್ನು ರಾಯಭಾರಿ ಕಚೇರಿ ಉಪಮುಖ್ಯಸ್ಥ ಮೊಹಮ್ಮದ್ ಅಮ್ಹದ್ ಅಜೀಜ್ ನೋಡಿಕೊಳ್ಳುತ್ತಿದ್ದಾರೆ ಎಂದು ಪಾಕ್ ಮಾಧ್ಯಮಕ್ಕೆ ಪಾಕ್ ಸರ್ಕಾರದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here