ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?

0
165

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಚೆನ್ನಾಗಿ ಆಗಿದೆ. ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಬಿಡುಗಡೆಯಾಗಿದ್ದು, ಕರ್ನಾಟಕ ಒಂದರಲ್ಲಿಯೇ 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಕೆಲವು ಕಡೆಗಳಲ್ಲಿ ಬೆಳಗ್ಗೆ 5-30ಕ್ಕೆ ಪ್ರದರ್ಶನ ಕೂಡಾ ಕಂಡಿದೆ. ಮುಂಗಡ ಬುಕ್ಕಿಂಗ್ ಗೆ ಸುದೀಪ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಬರುತ್ತಿದೆ. ಬೆಂಗಳೂರಿನ ಒಂದೇ ಥಿಯೇಟರ್ ಒಂದರಲ್ಲಿ ಐದು ಪ್ರದರ್ಶನ ಕಂಡಿದೆ.

ಈ ಚಿತ್ರವು ರಾಜ್ಯದ ಮೂಲೆ, ಮೂಲೆಯಲ್ಲಿಯೂ ಬಿಡುಗಡೆಯಾಗುತ್ತಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು, ಕೆಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರಗಳು ಮತ್ತೆ ತೆರೆಯಲ್ಪಟ್ಟಿವೆ ಎಂದು ಚಿತ್ರದ ವಿತರಣೆ ಹಕ್ಕು ಪಡೆದಿರುವ ಕಾರ್ತಿಕ್ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ತಜ್ಞರ ಪ್ರಕಾರ ಸುದೀಪ್ ಅವರ ಹಿಂದಿನ ವಿಲನ್ ಚಿತ್ರದಷ್ಟು ಕಲೆಕ್ಷನ್ ಮಾಡುವಲ್ಲಿ ಪೈಲ್ವಾನ್ ಸೋತಿದೆ. ಬಿಡುಗಡೆಯಾದ ಮೊದಲ ದಿನ 10 ಕೋಟಿಯನ್ನು ಬಾಚಿಕೊಂಡಿದೆ ಎನ್ನಲಾಗುತ್ತಿದೆ.

ಆದರೆ, ಈ ವಿಚಾರವನ್ನು ನಿರ್ಮಾಪಕರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಬರುತ್ತಿದೆ. ವಾರಾಂತ್ಯದ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಬ್ಬುಲ್ಲಿ ಚಿತ್ರದ ನಿರ್ದೇಶಕ ಎಸ್ ಕೃಷ್ಣ ಪೈಲ್ವಾನ್ ಮೂಲಕ ಮತ್ತೆ ಸುದೀಪ್ ಜೊತೆಗೂಡಿದ ಈ ಸಿನಿಮಾ ಬಾಕ್ಸಿಂಗ್ ಹಿನ್ನೆಲೆವುಳ್ಳದಾಗಿದೆ. ಸುನೀಲ್ ಶೆಟ್ಟಿ ಸುದೀಪ್ ಅವರ ಮೆಂಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಕಾಂಕ್ಷಸಿಂಗ್ ನಾಯಕಿಯಾಗಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here