ಮನೆ ಕೆಲಸದವರಿಗೆ ಒಂದು ಕೋಟಿ ಕೊಡಲು ಮುಂದಾದ ಯಜಾಮಾನನ ರೋಚಕ ಸ್ಟೋರಿ!

0
244

ಕಾಸಿದ್ದೋನೆ ಬಾಸು, ಹಣವೊಂದಿದ್ದರೆ ಹೆಸರು, ಗೌರವ ಎಲ್ಲವೂ ಸಿಗುತ್ತದೆ, ಪ್ರಪಂಚದಲ್ಲಿ ಹೆಸರಿಗಿಂತ ಹಣ ಮುಖ್ಯ, ಹೀಗೆಲ್ಲಾ ಯೋಚನೆ ಮಾಡುವ ಹಲವು ಮಂದಿ ನಮ್ಮ ಸುತ್ತಮತ್ತ ಇರುತ್ತಾರೆ. ದುಡ್ಡೆ ಪ್ರಪಂಚ ಎಂದು ಯೋಚನೆ ಮಾಡುವ ಈ ಸಮಾಜದಲ್ಲಿ, ಹಣಕ್ಕಿಂತ ಮಾನವೀಯತೆಯ ಮೌಲ್ಯಗಳು ಪ್ರೀತಿ ದೊಡ್ಡದು ಎಂಬುದನ್ನು ಸಾರಲು ಹೊರಟಿರುವ ಪ್ರಸಾದ್ ಮತ್ತು ಅವರ ಮಗನ ಮಾನವೀಯತೆಯ ಕಥೆ ಇದು..

 

 

ಸಾಂಸ್ಕತಿಕ ನಗರಿ ಮೈಸೂರಿನ ಮೂಲದವರಾದ ಪ್ರಸಾದ್ ಎಂಬುವವರು ವಿವಾಹವನ್ನಾಗಿ ಅಮೆರೀಕಾದಲ್ಲಿ ನೆಲೆಸಿದ್ದರು. ಈ ದಂಪತಿಗಳಿಗೆ ಒಂದು ಮುದ್ದಾದ ಮಗು ಜನ್ಮ ತಾಳಿತು. ಆದರೆ ಕೆಲಸದ ವಿಚಾರವೊ ಅಥವಾ ಬೇರೆ ಕಾರಣಕ್ಕೋ ತಮ್ಮ ಮಗನಿಗ ನಾಲ್ಕು ವರುಷವಿದ್ದಾಗ ಮೈಸೂರಿನ ತಮ್ಮ ಸಂಬಂಧಿಕರ ಮನೆಯಲ್ಲಿ ಒಂದು ವರುಷ ಇರಿಸಿ ಅಮೇರಿಕಾಗೆ ಹೊರಟು ಬಿಟ್ಟರು ಪ್ರಸಾದ್. ಹೀಗೆ ಬಿಟ್ಟ ಮಗುವನ್ನು ತುಂಬಾ ಹಾರೈಕೆಯಿಂದ ಪ್ರೀತಿಯಿಂದ ನೋಡಿಕೊಂಡಿದ್ದು, ಮನೆ ಕೆಲಸದವರಾದ ಶಾಂತಿ, ಆನಂದ್, ಮಮತ ಮತ್ತು ಸಂತೋಷ ಎಂಬುವರು..

 

ನಂತರ 11 ತಿಂಗಳು ಕಳೆದ ಮೇಲೆ ಅಮೇರಿಕಾದಿಂದ ತನ್ನ ಮಗನನ್ನು ನೋಡಲು ಪ್ರಸಾದ್ ಹಿಂದಿರುಗುತ್ತಾರೆ ಮತ್ತು ಮಗನನ್ನು ಅಮೇರಿಕಾಗೆ ಕರೆದುಕೊಂಡು ಹೋಗುತ್ತಾರೆ. ಆದರೆ 11 ತಿಂಗಳು ಬಹಳ ಆತ್ಮೀಯತೆಯಿಂದ, ತುಂಬಾ ಪ್ರೀತಿಯಿಂದ ನೋಡಿಕೊಂಡ ಶಾಂತಿ ಮತ್ತು ಇತರರನ್ನು. ಪ್ರಸಾದ್ ಅವರ ಮಗನಿಗೆ ಮರೆಯಲು ಸಾಧ್ಯವೇ ಆಗಲಿಲ್ಲ. ಅವರ ನಿಶ್ಕಲ್ಮಶ ಪ್ರೀತಿಯನ್ನು ನೆನೆದು ಯಾವಾಗಲೂ ಅಳುತ್ತಿದ್ದ.

 

 

ಇದೀಗ ಪ್ರಸಾದ್ ಅವರ ಪುತ್ರ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ಸುಮಾರು 15 ವರುಷ ಕಳೆದರು ಈ ಹುಡುಗ ಮಾತ್ರ ತನ್ನನ್ನು 11 ತಿಂಗಳು ಪ್ರೀತಿಯಿಂದ ಲಾಲಣೆ ಪೋಷಣೆ ಮಾಡಿದ ಶಾಂತಿ ಮತ್ತು ಇತರರನ್ನು ಮರೆಯಲಿಲ್ಲ, ಅಷ್ಟೇ ಅಲ್ಲದೆ ಆ ನಾಲ್ವರಿಗೆ ಏನಾದರು ಸಹಾಯ ಮಾಡುವಂತೆ ತನ್ನ ತಂದೆಯ ಬಳಿ ಕೇಳಿಕೊಂಡ. ಈ ಮಾತನ್ನು ಕೇಳಿದ ಪ್ರಸಾದ ಅವರು, 15 ವರುಷ ಕಳೆದರು,ತನ್ನನ್ನು ನೋಡಿಕೊಂಡವರನ್ನು ನನ್ನ ಮಗ ಮರೆತಿಲ್ಲ ಎಂದರೆ, ಅವರು ಇವನನ್ನು ಎಷ್ಟು ಪ್ರೀತಿಯಿಂದ ನೋಡಿಕೊಂಡಿರಬೇಕು ಎಂದು ಭಾವಿಸಿ ಶಾಂತಿ, ಆನಂದ್, ಮಮತ್, ಸಂತೋಷ್ ಅವರಿಗೆ ಸುಮಾರು 1 ಕೋಟಿ ಆರ್ಥಿಕ ನೆರುವು ನೀಡಲು ಮುಂದಾಗಿದ್ದು, ಅವರನ್ನು ಹುಡುಕುತ್ತಿದ್ದಾರೆ.

 

 

ಆದರೆ ಅವರೆಲ್ಲಿದ್ದಾರೆ ಎಂಬುದು ಮಾತ್ರ ಪ್ರಸಾದ್ ಅವರಿಗೆ ತಿಳಿದು ಬಂದಿಲ್ಲ, ಹುಡುಕುತ್ತಲೇ ಇದ್ದಾರೆ, ಶಾಂತಿ ಮತ್ತು ಇತರರೂ ಈಗಲೂ ಕೂಡ ಕಷ್ಟದಲ್ಲಿಯೇ ಇರಬಹುದು, ಮಗನ ಆಕ್ಷೇಪೆಯಂತೆ, ಅವರ ಕುಟುಂಬಕ್ಕೆ ಮತ್ತು ಅವರ ಮಕ್ಕಳ ವಿಧ್ಯಾಬ್ಯಾಸಕ್ಕೆ ಆರ್ಥಿಕ ನೆರವು ನೀಡಲು ಬಯಿಸಿದ್ದೇನೆ ಎಂದು ಹೇಳಿರುವ ಪ್ರಸಾದ್ ಅವರು, ಎಷ್ಟೇ ಹುಡುಕಿದರು ಆ ನಾಲ್ವರು ಸಿಗುತ್ತಿಲ್ಲ, ಆದ ಕಾರಣ ಪತ್ರಿಕಾ ಪ್ರಕಟಣೆ ಕೊಟ್ಟು ಅವರನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

 

ಆರ್ಥಿಕ ನೆರವು, ಹಣ ಒಂದು ಕಡೆಯಾದರೆ, 11 ತಿಂಗಳುಗಳ ಕಾಲ ಪ್ರಸಾದ್ ಅವರ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಲಾಲನೆ, ಪೋಷಣೆ ಮಾಡಿ ಪ್ರೀತಿಯಿಂದ ನೋಡಿಕೊಂಡಿದ್ದ ಶಾಂತಿ ಮತ್ತು ಇತರರು, ಈಗ ಅವನನ್ನು ನೋಡಿದರೆ ಬಹಳ ಸಂತೋಷ ಪಡಬಹುದು ಅನಿಸುತ್ತದೆ. ಆ ಕ್ಷಣ ಮಾತ್ರ ತುಂಬಾ ಅದ್ಭುತವಾಗಿರುತ್ತದೆ ದೇವರ ಕೃಪ ಕಟಾಕ್ಷದಿಂದ ಪ್ರಸಾದ್ ಅವರ ಕೈಗೆ ಈ ನಾಲ್ವರು ಸಿಗಲಿ ಎಂದು ಹಾರೈಸೋಣ.

LEAVE A REPLY

Please enter your comment!
Please enter your name here