ಫ್ಲೈ ಓವರ್ ಕಟ್ಟಡ ಸಂಸದರಿಗೆ ಮಂತ್ರಿಸ್ಥಾನ ಕೊಟ್ಟಿದ್ದೀರಿ ! ಬಿಜೆಪಿ ಕಾರ್ಯಕರ್ತರ ಆಕ್ರೋಶ

0
258

ದಕ್ಷಿಣ ಕನ್ನಡದಲ್ಲಿ ಸಚಿವ ಸ್ಥಾನ ನೀಡಿಲ್ಲ ಎಂದು ಕರಾವಳಿ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.ಬ್ಲೂ ಫಿಲಂ ನೋಡಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದೀರಿ, ನಮ್ಮವರಿಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲ ?ಹದಿನೈದು ಜನ ಶಾಸಕರಿದ್ದರೂ, ಒಂದೇ ಒಂದು ಸ್ಥಾನ ಇಲ್ಲ, ಸತತವಾಗಿ ಆರು ಬಾರಿ ಶಾಸಕರಾದರೂ ಕೂಡ ಸಚಿವರನ್ನಾಗಿ ನೀವು ಮಾಡಿಲ್ಲ ಎಂದು ಕಾರ್ಯಕರ್ತರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಫ್ಲೈ ಓವರ್ ಕಟ್ಟಡ ಸಂಸದರಿಗೆ ನೀವು ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಿದ್ದೀರಿ.( ನಳಿನ್ ಕುಮಾರ್ ಕಟೀಲ್ ಅವರಿಗೆ ಫ್ಲೈ ಓವರ್ ಕಟ್ಟಿಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಟ್ರೋಲ್ ಸಹಿತ ಆಗಿದ್ದವು) ಇಂಥವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಿದ್ದೀರಿ ಆದರೆ ಹದಿನೈದು ಶಾಸಕರನ್ನು ನಾವು ನಿಮಗೆ ಕೊಟ್ಟಿದ್ದೇವೆ ಒಬ್ಬರೇ ಒಬ್ಬರಿಗೂ ಸಚಿವ ಸ್ಥಾನವನ್ನು ನೀವು ಕೊಟ್ಟಿಲ್ಲ.ಆರು ಬಾರಿ ಸತತವಾಗಿ ಗೆದ್ದು ಬಂದವರು ಇದ್ದಾರೆ ಅಂಥವರನ್ನು ಸಹಿತ ನೀವು ಕಡೆಗಣಿಸಿದ್ದೀರಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಳೆದ ಮೈತ್ರಿ ಸರ್ಕಾರದಲ್ಲಿ ಕೇವಲ ಒಬ್ಬ ಕಾಂಗ್ರೆಸ್ನ ಶಾಸಕರು ಇದ್ದರು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರು.ಆದರೆ ಬಿಜೆಪಿಯವರು ಯಾಕೆ ಹೀಗೆ ಮಾಡಿದ್ದಾರೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮಾತನಾಡುತ್ತಿದ್ದಾರೆ.ಅದರಲ್ಲೂ ಒಬ್ಬ ಶಾಸಕನೂ ಅಲ್ಲದ, ಒಬ್ಬ ಎಂ.ಎಲ್. ಸಿ. ನು ಅಲ್ಲದೆ ಲಕ್ಷ್ಮಣ ಸವದ್ದಿ ಗೆ ಆ ಭಾಗದಲ್ಲಿ ಸಚಿವ ಸ್ಥಾನ ಸಿಕ್ಕಿದೆ.

ನಮ್ಮಲ್ಲಿ ಹದಿನೈದು ಶಾಸಕರಿದ್ದಾರೆ ಅದರಲ್ಲೂ ಅರ್ಹತೆ ಇರುವಂತಹ ಸುಳ್ಯದ ಶಾಸಕ ಅಂಗಾರ್ ರವರು ಆರು ಬಾರಿ ಶಾಸಕರಾಗಿದ್ದಾರೆ.ಅವರಿಗೆ ಸಚಿವ ಸ್ಥಾನ ಕೊಡುವ ಎಲ್ಲಾ ನಿರೀಕ್ಷೆಗಳೂ ಇತ್ತು.ಕೊನೆಯ ಹಂತದಲ್ಲಿ ಅವರನ್ನು ತಪ್ಪಿಸುವ ಕೆಲಸ ಬಿಜೆಪಿ ಮಾಡಿದೆ.

ಸಣ್ಣ ಪುಟ್ಟ ಕೆಲಸವನ್ನು ಮಾಡದ ನಳಿನ್ ಕುಮಾರ್ ರವರಿಗೆ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟಿದ್ದೀರಿ. ಫ್ಲೈ ಓವರ್ ಕಟ್ಟದವರು ಪಕ್ಷ ಕಟ್ಟುತ್ತಾರೆ? ಎಂದು ಬಿಜೆಪಿ ಕಾರ್ಯಕರ್ತರೇ ಸಾಕಷ್ಟು ಟ್ರಾಲ್ ಮಾಡುತ್ತಿದ್ದಾರೆ..
(ಮಂಗಳೂರಿನಲ್ಲಿ ಫ್ಲೈ ಓವರ್ ಕಟ್ಟಿಲ್ಲ ಎಂದು ಮಂಗಳೂರಿನವರು ಸಾಕಷ್ಟು ಟ್ರೋಲ್ ಮಾಡಿದ್ದರು)

LEAVE A REPLY

Please enter your comment!
Please enter your name here