ಆಕ್ರೋಶ ಮತ್ತು ಸಿಟ್ಟು ಸಂಸ್ಕೃತ, ಹಿಂದಿ, ಜೈನರ ಮೇಲಲ್ಲ.. ಉರ್ದು ಭಾಷೆಯ ಮೇಲೆ !??!!

0
153

ಕ್ರಿ.ಶ ೧೯೩೮ ರಲ್ಲಿ ಜಿನ್ನಾ ಮತ್ತು ಕಾಂಗ್ರೆಸ್ ನಡುವೆ ನಡೆದ ವಾದ ವಿವಾದದಲ್ಲಿ ತಮ್ಮ ಬೇಡಿಕೆಯನ್ನು ಬಹಿರಂಗಗೊಳಿಸುವಂತೆ ಜಿನ್ನಾರನ್ನು ಕೇಳಿದಾಗ ಅವರು ನಿರಾಕರಿಸಿದರು ಆದರೆ ಜಿನ್ನಾ ಮತ್ತು ಪಂಡಿತ ನೆಹರೂ ನಡುವೆ ನಡೆದ ಪತ್ರವ್ಯವಹಾರಗಳಲ್ಲಿ ಈ ಬೇಡಿಕೆಗಳು ಕಂಡು ಬಂದಿದ್ದು, ತಮ್ಮ ವಾದ ವಿವಾದಗಳ ಕಾಲದಲ್ಲಿ ಪಂಡಿತ ನೆಹರೂ ತಾವು ಜಿನ್ನಾ ಅವರಿಗೆ ಬರೆದ ಒಂದು ಪತ್ರದಲ್ಲಿ ಅವುಗಳನ್ನು ಪಟ್ಟಿ ಮಾಡಿದ್ದಾರೆ.

ಅವು ಈ ಕೆಳಗಿನಂತಿವೆ ನೋಡಿ :

  • ಕ್ರಿ.ಶ ೧೯೨೯ ರಲ್ಲಿ ಮುಸ್ಲಿಮ್ ಲೀಗ್ 14 ಬೇಡಿಕೆಗಳನ್ನು ರೂಪಿಸುತ್ತಾರೆ ಅವುಗಳಲ್ಲಿ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ ನೋಡಿ :

1.#ಉರ್ದು_ರಾಷ್ಟ್ರಭಾಷೆಯಾಗಬೇಕೆನ್ನುವುದು ಮುಸ್ಲಿಮರ ಅಪೇಕ್ಷೆ ಮತ್ತು ಅದಕ್ಕಾಗಿ ಉರ್ದುವಿನ ಬಳಕೆಗೆ ಆತಂಕ ಮತ್ತು ಧಕ್ಕೆಗಳುಂಟಾಗದಂತೆ ಶಾಸನಬದ್ಧ ರೂಪದ ಭರವಸೆಯನ್ನು ಅವರು ಬಯಸುತ್ತಾರೆ.

  1. ”ವಂದೇ ಮಾತರಂ” ವಾಕ್ಯವನ್ನು ಕೈಬಿಡುವುದು.
  2. ತ್ರಿವರ್ಣ ಧ್ವಜವನ್ನು ಬದಲಾಯಿಸಬೇಕು ಮತ್ತು ಮುಸ್ಲಿಂ ಲೀಗ್ ಧ್ವಜಕ್ಕೆ ಸಮಾನ ಗೌರವ ಕೊಡಬೇಕು.
  3. ಮುಸ್ಲಿಮರಿಗೆ ಗೋಹತ್ಯೆ ಸ್ವಾತಂತ್ರ್ಯವಿರಬೇಕು.

ಹೀಗೆ ಇದರ ಜೊತೆ ಇನ್ನೂ ಹತ್ತು ಬೇಡಿಕೆಗಳನ್ನು ರೂಪಿಸಿರುತ್ತಾರೆ.

ಇವರ ಈ ಬೇಡಿಕೆಗಳ ಕುರಿತು ಅಂಬೇಡ್ಕರವರು ಬರಹಗಳಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸುತ್ತಾರೆ.

”ಈಗ ಮುಸ್ಲಿಮರು ಇಟ್ಲರನ ಭಾಷೆಯನ್ನು ಮಾತನಾಡುತ್ತಿದ್ದಾರೆ. ಇಟ್ಲರ್ ಜರ್ಮನಿಯಲ್ಲಿ ವರ್ತಿಸುವ ಹಾಗೆ ಇವರೂ ತಮಗೆ ಸೂರ್ಯಗ್ರಹದಲ್ಲಿ ಸ್ಥಾನ ದೊರೆಯಬೇಕು ಎನ್ನುತ್ತಿದ್ದಾರೆ. ಏಕೆಂದರೆ ಅವರ ಪ್ರತಿಶತ ೫೦ರ ಬೇಡಿಕೆಯು ಇತರ ಅಲ್ಪ ಸಂಖ್ಯಾತರನ್ನು ಯಾವ ಗಣನೆಗೂ ತೆಗೆದುಕೊಳ್ಳದೆ, ತಮಗಾಗಿಯೇ ಡಾಯಿಷ್ ಲ್ಯಾಂಡ್ ಯಬರ್ ಆಪ್ಲಸ್ ( ಜರ್ಮನ್ ರಾಷ್ಟಗಿತೆ ) ಮತ್ತು ತಿಬೇನ್ಸ್ರಾಯ್ (ಸೂರ್ಯನ ಕೆಳಗೆ ಒಂದು ನೆಲೆ) ಕೇಳುವ ಹಕ್ಕಿಗಿಂತ ಯಾವ ರೀತಿಯಲೂ ಬೆರೆಯಾಗಿಲ್ಲ.

ಉರ್ದು ರಾಷ್ಟ್ರಭಾಷೆಯಾಗಬೇಕು ಎನ್ನುವ ಅವರ ಬೇಡಿಕೆ ಕೂಡ ಅಷ್ಟೇ ಅತಿಯಾದುದು. ಉರ್ದು ಇಂಡಿಯಾದ ತುಂಬಾ ಮಾತನಾಡುವ ಭಾಷೆಯಾಗಿಲ್ಲ. ಅಷ್ಟೇ ಅಲ್ಲ. ಅದು ಎಲ್ಲಾ ಮುಸಲ್ಮಾರ ಭಾಷೆ ಕೂಡ ಆಗಿಲ್ಲ. ೬೮ ಮಿಲಿಯನ್ ಮುಸ್ಲಿಮರಲ್ಲಿ, ೨೮ ಮಿಲಿಯನ್ ಜನ ಉರ್ದು ಮಾತನಾಡುತ್ತಾರೆ. ಉರ್ದು ರಾಷ್ಟ್ರೀಯ ಭಾಷೆಯಾಗಬೇಕು ಎನ್ನುವ ಸೂಚನೆಯ ಅರ್ಥ 28 ಮಿಲಿಯನ್ ಮುಸ್ಲಿಮರಾಡುವ ಭಾಷೆಯನ್ನು (ವಿಶೇಷತಃ) 40 ಮಿಲಿಯನ್ ಮುಸ್ಲಿಮರ ಮೇಲೆ ಮತ್ತು ಸಾರ್ವತ್ರಿಕವಾಗಿ ೩೨೨ ಮಿಲಿಯನ್ ಭಾರತೀಯರ ಮೇಲೆ ಹೇರಬೇಕು ಎಂದಾಯಿತು.

[ಬಾಬಾ ಸಾಹೇಬ್ ಅಂಬೇಡ್ಕರರ ಸಮಗ್ರ ಬರಹ ಮತ್ತು ಭಾಷಣಗಳು. ಸಂಪುಟ ೬. ಪುಟ ೬೨೨-೬೨೩]

ಇಂದು ಭಾರತದಲ್ಲಿ ಸನಾತನಿಗಳು ಬಹುಸಂಖ್ಯಾತವಾಗಿರುವುದರಿಂದಲೇ ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳೂ ಜೀವಂತವಾಗಿದೇ. ಒಂದು ವೇಳೆ ಮುಸ್ಲಿಮರು ಭಾರತದಲ್ಲಿ ಬಹುಸಂಖ್ಯಾತರಾದ ದಿನ ಎಲ್ಲಾ ಪ್ರಾದೇಶಿಕ ಭಾಷೆಗಳೂ ಕೊನೆ ಉಸಿರೆಳೆಯಬೇಕಾಗುತ್ತದೆ ಆದ್ದರಿಂದ ನಮ್ಮ ವೈರತ್ವ ಸಿಟ್ಟು, ಆಕ್ರೋಶ ಇರಬೇಕಾದ ಸಂಸ್ಕೃತ, ಹಿಂದಿ, ಜೈನರ ಮೇಲಲ್ಲ ಉರ್ದುವಿನ ಮೇಲೆ ಎಂದು
ಕನ್ನಡಿಗರು ಅರ್ಥಮಾಡಿಕೊಳ್ಳುಬೇಕು!

LEAVE A REPLY

Please enter your comment!
Please enter your name here