ನಮ್ಮ ರೈತರ ಪರಿಸ್ಥಿತಿ ಯಾರಿಗೂ ಬೇಡ ಸ್ವಾಮಿ ..!

0
537

ಮುಖ್ಯಮಂತ್ರಿಗಳ ತವರು ಗ್ರಾಮದ ರೈತನ ಸ್ಥಿತಿ ಇದು. ನಮ್ಮ ರೈತರ ಪರಿಸ್ಥಿತಿ ಯಾರಿಗೂ ಬೇಡ ಸ್ವಾಮಿ ಎಂದು ಹೇಳಿ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ರೈತರ ಪ್ರಶ್ನೆ??? ಅದರಲ್ಲೂ ನೇರವಾಗಿ ಮಂಡ್ಯ ಜಿಲ್ಲಾ ಕೆ.ಆರ್.ಪೇಟೆ ತಾಲೂಕಿನ ದಂಡಾಧಿಕಾರಿಗಳಿಗೆ ರೈತ ಸಮುದಾಯದವರು ಪ್ರಶ್ನೆಯನ್ನು ಕೇಳಿದ್ದಾರೆ.

ಸ್ವಾಮಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಬೆಳೆ ಸಮೀಕ್ಷೆ ಮಾಡಲು ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಇಷ್ಟೊಂದು ಪರಿಹಾರದ ಹಣವನ್ನು ನೀಡಲು (1350ರೂಪಾಯಿ) ಸಮಿತಿಗೆ ಹೇಗೆ ಮನಸ್ಸು ಬಂತು???

  1. ಎಂದಾದರು ನೀವು ಬಾಳೆ ಗಿಡಗಳನ್ನು ಬೆಳೆದಿದ್ದೀರ???
  2. ಒಂದು ಎಕರೆ ಇಪತ್ತು ಕುಂಟೆಯಲ್ಲಿ ಇದ್ದ ಸರಾಸರಿ 280 ಬಾಳೆ ಗಿಡದ ಪ್ರತಿಫಲ ಬೇಡ, ರೈತನ ಶ್ರಮ ಏನ್ ಎನ್ನುವುದನ್ನು ತಿಳಿದಿದ್ದೀರ???
  3. ನಿಮ್ಮ ಮನೆಯ ಸಮಾರಂಭಗಳಿಗೆ ಬಾಳೆಗೊನೆಗಳನ್ನು ಖರೀದಿ ಮಾಡಿದ್ದೀರ???
  4. ಈ ದಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬಾಳೆ ಹಣ್ಣಿನ ಬೆಲೆ ಎಷ್ಟು ಎನ್ನುವುದು ನಿಮಗೆ ತಿಳಿದಿದೆಯೇ ???

ಪುಸ್ತಕಗಳನ್ನು ಓದಿ ನೀವು ಅಧಿಕಾರಿಗಳಾಗಿದ್ದೀರಿ, ನಿಮಗೆ ನಿಜವಾದ ರೈತನ ಪರಿಶ್ರಮ ತಿಳಿಯುವುದಿಲ್ಲ, ಆದರೂ ನೀವು ಕೊಟ್ಟಿರುವ ಆ ದೊಡ್ಡ ಮೊತ್ತದ ಹಣವನ್ನು ರೈತ ಬಚ್ಚಿಡಲು ಸಾಧ್ಯವಾಗದೇ ನಿಮಗೆ ಹಿಂತಿರುಗಿಸಿದ್ದಾರೆ, ಜೋಪಾನವಾಗಿ ಸರ್ಕಾರದ ಖಜಾನೆಗೆ ಹಿಂತಿರುಗಿಸಿ ನಿಮ್ಮ ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ ಎಂದು ತೀಕ್ಷ್ಣವಾಗಿ ರೈತ ಸಮುದಾಯದವರು ಸರ್ಕಾರದ ಈ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ರೈತನಿಗೆ ಆಗಿರುವ ಸಮಸ್ಯೆ ಏನು ಗೊತ್ತಾ???

ಸಿದ್ದೇಗೌಡ ಎನ್ನುವವರೂ ತಮ್ಮ ಒಟ್ಟು ಎರಡು ಎಕರೆ ಇಪ್ಪತ್ತು ಗುಂಟೆ ಜಾಗದ ಪೈಕಿ ಒಂದು ಎಕರೆ ಇಪತ್ತು ಗುಂಟೆ ಜಾಗದಲ್ಲಿ ಸರಿಸುಮಾರು 280 ಸಸಿಗಳನ್ನು ನೆಟ್ಟು ಬೇಸಾಯ ಮಾಡಿದ್ದರು ಆದರೆ, ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನಾಶವಾಗಿದೆ 280 ಬಾಳೆಗಿಡದ ಫಸಲು ರೈತನ ಕೈಗೆ ಬಂದಿದ್ದರೆ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಅಂದಾಜು 1,80,000 ರೂ.(ಒಂದು ಲಕ್ಷದ ಎಂಭತ್ತು ಸಾವಿರ ರೂಪಾಯಿ) ರೈತನ ಕೈ ಸೇರುತ್ತಿತ್ತು, ಅದರಲ್ಲಿ ಶೇಕಡಾ ಒಂದು ಭಾಗ ಅಂದರೂ ಸುಮಾರು 1800ರೂ.(ಒಂದು ಸಾವಿರದ ಎಂಟು ನೂರು ರೂಪಾಯಿ) ಆಗುತ್ತಿತ್ತು. ಅದನ್ನು ಕೊಡಲಾಗದ ಸರ್ಕಾರ ಯಾವ ಮಾನದಂಡದಲ್ಲಿ 1350 ರೂಪಾಯಿಯನ್ನು ನಿಗದಿಪಡಿಸಿ ರೈತನಿಗೆ ಪರಿಹಾರದ ಚೆಕ್ ಅನ್ನು ನೀಡಿದ್ದೀರಿ ದಯಮಾಡಿ ತಿಳಿಸಿ ಎಂದು ಕೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳ ತವರು ಗ್ರಾಮದ ರೈತನ ಬದುಕೆ ಹೀಗಾದರೆ, ರಾಜ್ಯದ ರೈತರ ಕಥೆ ಏನು ಸ್ವಾಮಿ???

ಇಂತಿ:- ನೊಂದ ರೈತ ಸಮುದಾಯ..

LEAVE A REPLY

Please enter your comment!
Please enter your name here