ಲಿಂಗಾಯತರಿಗೆ ಸಚಿವ ಸ್ಥಾನ ಕೊಟ್ರೆ ಬೇರೆಯವರು ವಿಷ ಕುಡಿಬೇಕಾ..?! ಯಡ್ಡಿ ಗರಂ

0
270

ಯಡಿಯೂರಪ್ಪನವರು ಸಿಎಂ ಆದ ನಂತರ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಲಾಬಿ ಜೋರಾಗಿದೆ. ಉತ್ತರ ಕರ್ನಾಟಕದ ಪ್ರಬಲ ಸಮುದಾಯವಾದ ಲಿಂಗಾಯತರು ತಮಗೆ ಸಂಪುಟದಲ್ಲಿ ಹೆಚ್ಚಿನ ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಬೇಡಿಕೆಗೆ ಗರಂ ಆಗಿರುವ ಸಿಎಂ ಯಡಿಯೂರಪ್ಪ, “ಸಚಿವ ಸ್ಥಾನಗಳನ್ನೆಲ್ಲ ಲಿಂಗಾಯಿತರಿಗೆ ಕೊಟ್ಟರೆ ಬೇರೆಯವರು ವಿಷ ಕುಡಿಯಬೇಕಾ..!? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಲಿಂಗಾಯತ ಸಮುದಾಯದ 16 ಮಂದಿ ಶಾಸಕರಿದ್ದು, ಅವರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇಡಲಾಗಿದೆ. “4 ಸಚಿವ ಸ್ಥಾನ ಸಾಕಾ ಅಥವಾ 5 ಬೇಕಾ ಎಂದು ಪ್ರಶ್ನಿಸಿದ್ದಾರೆ. ಆಗ 4 ಸಚಿವ ಸ್ಥಾನಗಳು ಸಾಕು..” ಎಂದು ಸಮುದಾಯದ ಮುಖಂಡರು ಹೇಳಿದ್ದು, ಈ ವೇಳೆ ಯಡಿಯೂರಪ್ಪ, “ಎಲ್ಲಾ ಸಚಿವ ಸ್ಥಾನಗಳನ್ನು ನಿಮಗೆ ಕೊಟ್ಟರೆ ರಾಜೀನಾಮೆ ನೀಡಿದ 16 ಮಂದಿ ಶಾಸಕರು ವಿಷ ಕುಡಿಯಬೇಕಾ..?! ಎಂದು ಯಡಿಯೂರಪ್ಪ ಗರಂ ಆಗಿದ್ದಾರೆ.

LEAVE A REPLY

Please enter your comment!
Please enter your name here