ಕಿತ್ತಳೆ ಹಣ್ಣು ತಿನ್ನುವವರು ಈ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಿ.!!

0
507

ಪ್ರಪಂಚದಲೇ ಅತ್ಯಂತ ಹೆಚ್ಚು ಸಿಟ್ರೆಸ್ ಅಂಶ ಹೊಂದಿರುವ ಹಣ್ಣೆಂದರೆ ಕಿತ್ತಳೆ ಹಾಗೂ ಪ್ರಪಂಚದಲೇ ಅಧಿಕ ಕಿತ್ತಳೆ ಬೆಳೆಯುವ ದೇಶವೆಂದರೆ ಬ್ರೆಜಿಲ್ ಮತ್ತು ಪ್ರಪಂಚದಲೇ ಅತಿ ಹೆಚ್ಚು ಇಷ್ಟಪಡುವ 3 ಫ್ಲೇವರ್ ಗಳ ಪಟ್ಟಿಯಲ್ಲಿ ಕಿತ್ತಳೆ ಹಣ್ಣು 3ನೇ ಸ್ಥಾನದಲ್ಲಿದೆ. ಮೊದಲ 2 ಸ್ಥಾನಗಳನ್ನು ಚಾಕಲೇಟ್ ಮತ್ತು ವೆನಿಲಾ ಪಡೆದುಕೊಂಡಿದೆ. ಈ ಹೈಬ್ರಿಡ್ ಬೆಳೆ ಬೆಳೆಯುವ ಕಾಲದಲ್ಲಿ ಎಲ್ಲಾ ಬಗೆಯ ಹಣ್ಣುಗಳು ಎಲ್ಲಾ ಕಾಲದಲ್ಲಿ ದೊರೆಯುವುದಾದರೂ! ಯಾವತ್ತಿಗೂ ನಾವು ಸೀಜನ್ ಹಣ್ಣುಗಳನ್ನು ತಿನ್ನುವುದೇ ಒಳ್ಳೆಯದು.

ಏಕೆಂದರೆ ಸೀಜನ್ ಹಣ್ಣುಗಳಲ್ಲಿ ಆಯಾ ಸೀಜನ್ ಗೆ ನಮ್ಮ ದೇಹವನ್ನು ರಕ್ಷಣೆ ಮಾಡುವ ಸಾಮರ್ಥ್ಯವಿರುತ್ತದೆ. ಬೇಸಿಗೆಯಲ್ಲಿ ಮೈಯನ್ನು ತಂಪಾಗಿಸುವ ಹಣ್ಣುಗಳೇ ಹೆಚ್ಚಾಗಿ ದೊರೆಯುತ್ತದೆ. ಇನ್ನೂ ಚಳಿಗಾಲದಲ್ಲಿ ಸೀಟ್ರೆಸ್ ಫುಡ್ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಚಳಿಯಿಂದ ರಕ್ಷಣೆ ಮಾಡುತ್ತದೆ. ಈ ಕಿತ್ತಳೆ ಹಣ್ಣಿನಲ್ಲಿ ಸಾಕಷ್ಪು ಉಪಯೋಗಗಳಿವೆ. ಈ ಸೀಟ್ರೆಸ್ ಹಣ್ಣಿನಲ್ಲಿ ಲೈವೇನೈಟ್ಸ್ ಅಂಶವಿದೆ.ಇದು ತ್ವಚೆ, ಶ್ವಾಸಕೋಶದ ಕ್ಯಾನ್ಸರ್,ಕರುಳಿನ ಕ್ಯಾನ್ಸರ್ ಹೀಗೆ ನಾನಾ ಬಗೆಯ ಕ್ಯಾನ್ಸರ್’ಗಳ ವಿರುದ್ದ ಹೋರಾಡಿ ದೇಹವನ್ನ ರಕ್ಷಣೆ ಮಾಡುತ್ತದೆ.

ಕಿತ್ತಳೆ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿತ್ತಳೆ ಜ್ಯೂಸ್ ಕುಡಿಯುವುದಾದರೆ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಹಾಕಿಕೊಂಡು ಕುಡಿಯುವುದು ಒಳ್ಳೆಯದು. ಇದರಲ್ಲಿ ಸೀಟ್ರೆಸ್ ಅಂಶ ಹಾಗೂ ನಾರಿನಾಂಶ ಅಧಿಕವಾಗಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ. ನಮ್ಮ ಹೃದಯ ಸರಿಯಾದ ರೀತಿಯಲ್ಲಿ ಮಿಡಿಯುವುದಕ್ಕೆ ಪೋಟ್ಯಾಷಿಯಂ ಅವಶ್ಯಕ. ಪೋಟ್ಯಾಷಿಯಂ ಕಡಿಮೆಯಾದರೆ ಹೃದಯದ ಬಡಿತ ಕಡಿಮೆಯಾಗುವುದು. ಕಿತ್ತಳೆ ಹಣ್ಣಿನಲ್ಲಿ ಪೋಟ್ಯಾಷಿಯಂ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಇದರಲ್ಲಿ ಕ್ಯಾರೋನೈಡ್ ಎಂಬ ಅಂಶವು ಸಹ ಇದೆ. ಇದು ವಿಟಮಿನ್ ‘ಎ’ ಆಗಿ ಪರಿವರ್ತನೆಗೊಂಡು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಯಾರಿಗೆ ರಕ್ತದೊತ್ತಡದ ಸಮಸ್ಯೆ ಇದೆಯೋ ಅವರು ದಿನ ಒಂದು ಕಿತ್ತಳೆ ಹಣ್ಣು ತಿನ್ನುವುದು ಒಳ್ಳೆಯದು ಯಾಕೆಂದರೆ ಇದರಲ್ಲಿರುವ ‘ಪ್ಲೇವೊನೈಡ್’ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ಇದು ಫ್ರಿರಾಡಿಕಲ್ ಅನ್ನು ಹೌಗಲಾಡಿಸಿ ತ್ವಚೆಯ ಆರೈಕೆಯನ್ನು ಹೆಚ್ಚಿಸುತ್ತದೆ. ಅಕಾಲಿಕ ನೆರಿಗೆ ಬೀಳುವುದನ್ನು ತಡೆಯುತ್ತದೆ. ಹೀಗೆ ಕಿತ್ತಳೆ ಹಣ್ಣಿನಿಂದ ಹತ್ತು ಹಲವಾರು ಉಪಯೋಗಗಳಿವೆ.

LEAVE A REPLY

Please enter your comment!
Please enter your name here