“ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಕಾಮಾಲೆ ಕಣ್ಣು”

0
69

ಬೆಂಗಳೂರು: ಪ್ರತಿಪಕ್ಷ ನಾಯಕರಿಗೆ ಕಾಮಾಲೆ ಕಣ್ಣು,ಹಳದಿ ಕನ್ನಡಕ ಹಾಕಿಕೊಂಡು ನೋಡುತ್ತಾರೆ.ವಿರೋಧ ಮಾಡಬೇಕು ಎಂದು ವಿರೋಧಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 724 ಕೋಟಿ ಎಸ್ ಟಿಆರ್ ಎಫ್,2669 ಕೋಟಿ ರೂ ಎನ್ ಡಿಆರ್ ಎಫ್ ನಿಧಿ ಬಿಡುಗಡೆ ಮಾಡಲಾಗಿದೆ.ಎನ್ ಡಿಎ ಸರ್ಕಾರದ ಅವಧಿಯಲ್ಲಿ 1332ಕೋಟಿ ಎಸ್ ಟಿಆರ್ ಎಫ್ ಹಾಗು 4279 ಕೋಟಿ ಎನ್ ಡಿಆರ್ ಎಫ್ ನಿಧಿ ಬಿಡುಗಡೆಯಾಗಿದೆ.ಕಾಂಗ್ರೆಸ್ ಸರ್ಕಾರದ ಅವಧಿಗಿಂತ ನಾಲ್ಕು ಪಟ್ಟು ಹೆಚ್ಚುವರಿ ಬಿಡುಗಡೆ ಮಾಡಲಾಗಿದೆ.ಪ್ರತಿಪಕ್ಷ ನಾಯಕರಿಗೆ ಕಾಮಾಲೆ ಕಣ್ಣು,ಹಳದಿ ಕನ್ನಡಕ ಹಾಕಿಕೊಂಡು ನೋಡುತ್ತಾರೆ. ವಿರೋಧ ಮಾಡಬೇಕು ಎಂದು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಅವರಿಗೆ ಯಾವುದೇ ಸಮಸ್ಯೆಗಳೇ ಇರಲಿಲ್ಲ‌.ನೆಮ್ಮದಿಯಾಗಿದ್ದರು.ಆದರೂ ಸಂತ್ರಸ್ತರಿಗೆ ಅವರ ಕಾಲದಲ್ಲಿ ಗಂಜಿಕೊಡುತ್ತಿದ್ದರು.ಯಡಿಯೂರಪ್ಪ ಕಾಲದಲ್ಲಿ ಸಮಸ್ಯೆಗಳು ಸಾಕಷ್ಟಿದೆ.ಕೊರೊನಾ ಸಂಕಷ್ಟದಲ್ಲೂ ನೆರೆ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ ಎಂದರು.

“ಕಾಂಗ್ರೆಸ್ ಅಂದರೆ ಗೂಂಡಾಗಿರಿ”

ನಮ್ಮದು ಬಿಜೆಪಿ ಅವರದ್ದು ಕಾಂಗ್ರೆಸ್‌.ಕಾಂಗ್ರೆಸ್ ಅಂದರೆ ಗೂಂಡಾಗಿರಿ.ಅವರು ಪೊಲೀಸ್ ಸ್ಟೇಷನ್ ನಲ್ಲೂ ಚುನಾವಣೆ ಮಾಡ್ತಾರೆ,ರೈಲ್ವೆ ಸ್ಟೇಷನ್ ನಲ್ಲೂ ಚುನಾವಣೆ ಮಾಡ್ತಾರೆ‌.ಆದರೆ ನಾವು‌ಮಾತ್ರ ಪೊಲಿಂಗ್ ಬೂತ್ ನಲ್ಲೇ ಮಾಡುತ್ತೇವೆ‌‌‌‌. ಆರ್.ಆರ್.ನಗರದ ಐವರು ಕಾರ್ಪೊರೇಟರ್ ಗಳು ಮತ್ತು ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ.ನಮಗೆ ಆರ್ ಆರ್ ನಗರದಲ್ಲಿ ಕಾರ್ಯಕರ್ತರು ಓವರ್ ಪ್ಲೋ ಆಗುತ್ತಿದ್ದಾರೆ‌‌‌.ಆದರೆ ಅವರು ಕನಕಪುರ,ಕುಣಿಗಲ್ ನಿಂದ ಕಾರ್ಯಕರ್ತರನ್ಬು ಕರೆದುಕೊಂಡು ಬರುತ್ತಿದ್ದಾರೆ‌ ಅಂದರೆ ಅವರ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಊಹಿಸಿ‌.ಅವರಿಗೆ ಆಗಲೇ ಸೋಲಿನ ವಾಸನೆ ಬಡಿದಿದೆ.ಅದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಭವಿಷ್ಯ ನುಡಿದರು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನೆರೆ‌ಪೀಡಿತ ಪ್ರದೇಶಗಳಲ್ಲಿ 12ಎನ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ.16 ದೋಣಿಗಳ ಬಳಕೆ ಮಾಡಲಾಗಿದೆ.ಬೀದರ್ ನಲ್ಲಿ ಎರಡು ಹೆಲಿಕ್ಯಾಪ್ಟರ್ ಗಳು ಸ್ಟಾಂಡ್ ಬೈ ಇವೆ. 230 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.ಈ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಣೆ.ಮೊಟ್ಟೆ,ಬಾಳೆಹಣ್ಣು,ಬೆಳಗ್ಗೆ ಕಾಫಿಟಿ,ಉಪಹಾರ,ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಮೆನುವಿನಲ್ಲಿ ಜೋಳದ ರೊಟ್ಟಿ ಚಪಾತಿ ಕೊಡುವಂತೆ ಆದೇಶಿಸಲಾಗಿದೆ.ಸರ್ಕಾರದ ವತಿಯಿಂದ ಟವಲ್,ಪೇಸ್ಟ್,ಬ್ರಷ್ ಹಾಗು ಬೆಡ್ ಶೀಟ್ ಕೊಡಲಾಗುತ್ತದೆ ಎಂದು ವಿವರಿಸಿದರು.

ಪ್ರವಾಹದಿಂದ ಆದ ನಷ್ಟವೆಷ್ಟು..?

ಪ್ರವಾಹದಿಂದ ಇದುವರಗೆ10 ಜನರ ಸಾವು,993 ಜಾನುವಾರು ಸಾವು,ಬೆಳೆಹಾನಿ- 6.3 ಲಕ್ಷ ಹೆಕ್ಟೇರ್,ಮನೆ ಹಾನಿ 12700.ಸಂಭವಿಸಿದೆ.ಪ್ರವಾಹದ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳಿಗೆ ನಾನು ಭೇಟಿಕೊಟ್ಟಿದ್ದೇನೆ. ಆಗಷ್ಟ್ ಸೆಪ್ಟಂಬರ್ ನಲ್ಲಿ 20ಜಿಲ್ಲೆಗಳಲ್ಲಿ ಮನೆ ಹಾನಿಗೆ 35.48 ಕೋಟಿ ರೂ.ಬಾಧಿತ ಕುಟುಂಬಗಳಿಗೆ ತಲಾ 10,000ದಂತೆ 12,300 ಕುಟುಂಬಗಳಿಗೆ ಪರಿಹಾರ ಪಾವತಿಸಲಾಗಿದೆ.ಉಳಿದವರಿಗೆ ಸಧ್ಯದಲ್ಲೇ ಬಾಕಿ ಪಾವತಿಸಲಾಗುತ್ತದೆ.ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ ನಲ್ಲಿ ಕನಿಷ್ಟ 20 ಕೋಟಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ.ನಿನ್ನೆಯೂ ಕೂಡ ಐದು ಜಿಲ್ಲೆಗಳಿಗೆ ಹೆಚ್ಚುವರಿಯಾಗಿ 20 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಕರಾವಳಿ ಭಾಗದಲ್ಲಿರುವ ಸುಮಾರು 3500 ಎಕರೆ ಕುಮ್ಕಿ ಜಮೀನನನ್ನು ಕೃಷಿಕರಿಗೆ ಕೊಡಬೇಕು ಎಂದು ನಿರ್ಧರಿಸಿದ್ದೇವೆ‌. ಬ್ರಿಟೀಷರ ಕಾಲದಲ್ಲಿ ಕೃಷಿಕರಿಗೆ ಬಳವಳಿಯಾಗಿ ನೀಡಿದ್ದ ಜಮೀನು ಇದು ಎಂದರು.

LEAVE A REPLY

Please enter your comment!
Please enter your name here