ಯೋಗ್ಯತೆ ಇದ್ದವರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ : ಸಿ.ಟಿ.ರವಿ..!

0
2139

ಇಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸಚಿವ ಸಂಪುಟ ರಚನೆಗೆ ಮುಂದಾಗಿದ್ದಾರೆ. 17 ಸಚಿವರು ಪ್ರಮಾಣ ವಚನ ಸ್ವೀಕರಿಸಲು ಸಿದ್ದರಾಗಿದ್ದಾರೆ. ಸಿ.ಟಿ.ರವಿ ಕೂಡ ಸಂಪುಟ ರಚನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಕುರಿತು ಮಾತನಾಡಿದ ಅವರು ನನಗೆ ತುಂಬ ಖುಷಿಯಾಗುತ್ತಿದೆ, ಬಿಎಸ್‍ವೈ ಅವರು ತಮ್ಮ ಸ್ವಂತಿಕೆಯಿಂದ ಪಕ್ಷ ಕಟ್ಟಿದವರು, ಪಕ್ಷವನ್ನು ಬೆಳೆಸುವುದಕ್ಕೆ ಮುಂಚೂಣಿ ಸ್ಥಾನದಲ್ಲಿ ನಿಂತವರು.

ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು, ಆ ಆವಕಾಶವನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ ಅದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಅವರ ಪಕ್ಷದ ಸಾಮಾನ್ಯ ಕಾರ್ಯಕರ್ತ ನನಗೆ ಒಂದು ದೊಡ್ಡ ಜವಬ್ದಾರಿ ನೀಡಿದ್ದಾರೆ. ಬಿಎಸ್‍ವೈ ಅವರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದರು.

ಶ್ರೀರಾಮುಲು, ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ಲಕ್ಷ್ಮಣ್ ಸಾವಾಡಿ, ಸುರೇಶ್ ಕುಮಾರ್, ಸಿಸಿ.ಪಾಟೀಲ್, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಸಿ.ಟಿ.ರವಿ, ಶಶಿಕಲಾ ಜೊಲ್ಲೆ, ಆರ್.ಆಶೋಕ್, ಆಶ್ವಥ್ ನಾರಾಯಾಣ, ಗೋವಿಂದ ಕಾರಾಜೋಳ, ನಾಗೇಶ್, ಪ್ರಭು.ಜೆ.ಚೌಹಣ್ ಸೇರಿದಂತೆ ಒಟ್ಟು 17 ಶಾಸಕರು ಬಿಎಸ್‍ವೈ ಸೇನೆ ಸೇರಿಕೊಂಡಿದ್ದಾರೆ.

ಸಿ.ಟಿ.ರವಿ ಅವರು ಬಿಎಸ್‍ವೈ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಇನ್ನು ಹೆಚ್ಚು ಉತ್ಸಾಹಕನಾಗಿದ್ದೇನೆ, ನನ್ನ ಶಕ್ತಿ ಮೀರಿ ನಾನು ಕೆಲಸ ಮಾಡಲಿದ್ದೇನೆ ಎಂದರು. ಬಿಜೆಪಿ ಹಾಗೂ ಯಡಿಯೂರಪ್ಪನವರ ವಿರುದ್ಧ ಆಸಮಾಧಾನ ಪಡಿಸುವವರು ಬಗ್ಗೆ ಏನು ಹೇಳುತ್ತೀರಾ.? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಟಿ.ರವಿ, “ಯೋಗ, ಯೋಗ್ಯತೆ ಇದ್ದರೆ ಮಾತ್ರ ಸಚಿವ ಸ್ಥಾನ ಸಿಗಲಿದೆ, ನಿಮ್ಮ ಯೋಗ್ಯತೆಗೆ ತಕ್ಕ ಕಾಲ ಕೂಡಿ ಬಂದಾಗ ನಿಮಗೆ ಎಲ್ಲವೂ ಬಡ್ಡಿ ಸಮೇತ ದೊರೆಯಲಿದೆ” ಯೋಚಿಸಬೇಡಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here