90 ಲಕ್ಷ ರೂಪಾಯಿ ಸಂಪಾದಿಸಿದ ಈರುಳ್ಳಿ ಬೆಳೆಗಾರ

0
264

ಕೆಲ ದಿನಗಳಿಂದ ಬೆಲೆ ಏರಿಕೆ ಕಂಡ ಈರುಳ್ಳಿ ಭಾರಿ ಸದ್ದು ಮಾಡುತ್ತಿದೆ. ಈ ಬಾರಿಯ ವರುಣನ ಆರ್ಭಟಕ್ಕೆ ಈರುಳ್ಳಿ ಫಸಲು ಕಳೆದುಕೊಂಡಿದ್ದ ಬಹುತೇಕ ರೈತರು ಕೈಕೈ ಹಿಸುಕಿಕೊಂಡಿದ್ದರು. ಕೆಲವರು ಅಳಿದುಳಿದ ಫಸಲನ್ನೇ ಮಾರಾಟ ಮಾಡಿ ಒಂದಷ್ಟು ಲಾಭ ಮಾಡಿಕೊಂಡರು. ಈ ಎಲ್ಲದರ ನಡುವೆ ರೈತರೊಬ್ಬರು ಈರುಳ್ಳಿ ಮಾರಾಟ ಮಾಡಿ ಬರೋಬ್ಬರಿ 90 ಲಕ್ಷ ರೂ. ಗಳಿಸಿದ್ದಾರೆ!

 

 

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ರೈತ ಎಲ್. ಮಲ್ಲಿಕಾರ್ಜುನ್ 20 ಎಕರೆಯಲ್ಲಿ 3,700 ಪಾಕೆಟ್ ಈರುಳ್ಳಿ ಬೆಳೆದು 90 ಲಕ್ಷ ರೂ. ಸಂಪಾದಿಸಿದ್ದಾರೆ. ಬಿತ್ತನೆ ವೇಳೆ ಮಳೆ ಕೈ ಕೊಟ್ಟರೂ ಟ್ಯಾಂಕರ್​ನೀರು ಬಳಸಿ ಬೆಳೆ ಉಳಿಸಿಕೊಂಡಿದ್ದರು. ನಿರೀಕ್ಷೆಗೂ ಮೀರಿ ಬೆಳೆ ಕೈ ಸೇರಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ. 20 ವರ್ಷಗಳಿಂದ ಈರುಳ್ಳಿ ಬೆಳೆಯುತ್ತಿದ್ದು, ಐದಾರು ವರ್ಷದ ಬಳಿಕ ಲಾಭದ ಮುಖ ಕಂಡಿದ್ದೇವೆ.

 

 

ಎಲ್ಲ ಖರ್ಚು ತೆಗೆದು 75 ಲಕ್ಷ ರೂ. ಲಾಭವಾಗಿದೆ. ಒಂದು ವೇಳೆ ಕಳೆದ ವಾರದ ದರ ಸಿಕ್ಕಿದ್ದರೆ ಕೋಟ್ಯಧೀಶನಾಗುತ್ತಿದ್ದೆ. ಆದರೂ ಒಂದಷ್ಟು ಸಾಲ ತೀರಿಸಿಕೊಂಡು ನೆಮ್ಮದಿಯಾಗಿದ್ದೇನೆ ಎನ್ನುತ್ತಾರೆ ಮಲ್ಲಿಕಾರ್ಜುನ್.

LEAVE A REPLY

Please enter your comment!
Please enter your name here