ಸುಳ್ವಾಡಿ ದುರಂತಕ್ಕೆ ಒಂದು ವರ್ಷ.! ಅಲ್ಲಿನ ಜನರು ಏನು ಹೇಳುತ್ತಾರೆ ಗೊತ್ತಾ.?

0
136

ಸುಳ್ವಾಡಿ ಎಂಬ ಊರಿನ ಹೆಸರು ಕೇಳಿದರೆ ಸಾಕು ಪ್ರತಿಯೊಬ್ಬರಿಗೂ ಆ ಘಟನೆಯ ಚಿತ್ರಣ ಒಮ್ಮೆ ಕಣ್ಣುಮುಂದೆ ಬಂದು ಹೋಗುತ್ತದೆ. ಕಳೆದ ವರ್ಷ ನಡೆದ ಸುಳ್ವಾಡಿ ದೇವಾಲಯದ ವಿಶ್ವಪ್ರಸಾದ ದುರಂತ ಇವತ್ತಿಗೂ ಮರೆಯಲಾಗದ ದುರ್ಘಟನೆ ಎನ್ನಬಹುದು. ಈ ಒಂದು ವಿಷ ಪ್ರಸಾದ ದುರಂತಕ್ಕೆ ಇಂದು ಒಂದು ವರ್ಷ ಆಗಲಿದೆ ಅಂದರೆ ನಾಳೆ ಡಿಸೆಂಬರ್ 14ನೇ ತಾರೀಖು ಬಂದರೆ, ಘಟನೆ ಸಂಭವಿಸಿ ಒಂದು ವರ್ಷವಾಗಲಿದೆ.

 

 

ಹೌದು, ಚಾಮರಾಜನಗರದಲ್ಲಿರುವ ಸುಳ್ವಾಡಿ ಗ್ರಾಮದ ದೇವಾಲಯದಲ್ಲಿ ಕಳೆದ ವರ್ಷ ಪ್ರಸಾದವಾಗಿ ಸ್ವೀಕರಿಸುವ ಅನ್ನದಲ್ಲಿ ವಿಷ ಬೆರೆಸಿದ ಕಾರಣ ೧೭ ಮಂದಿ ಸಾವನ್ನಪ್ಪಿದ್ದು, ೧೧೦ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

 

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಸರ್ಕಾರ ದೇವಾಲಯಕ್ಕೆ ನಿರ್ಬಂಧ ಹೆರಿಸಿ, ಬೀಗವನ್ನು ಹಾಕಿದ್ದರು. ಈ ಘಟನೆಯಾದ ಬಳಿಕ ಭಕ್ತರು ಹಾಗೂ ಆ ಊರಿನವರು ಸದ್ಯ ಅತ್ತ ಹೋಗಿರಲಿಲ್ಲ. ಆದರೆ ಕೆಲ ಭಕ್ತರು ಘಟನೆ ನಡೆದು ಒಂದು ವರ್ಷ ಆಗಿರುವುದರಿಂದ ದೇವಾಲಯದ ಬೀಗ ಶೀಘ್ರದಲ್ಲೇ ತೆರೆಯಬೇಕು ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚ ಗತ್ತಿ ಮಾರಮ್ಮನ ದೇವಾಲಯದ ಬಾಗಿಲನ್ನು ದಯಮಾಡಿ ತೆರೆಯಬೇಕು ಅಲ್ಲಿಯವರೆಗೂ ನಾವು ಕುರಿ, ಕೋಳಿಯನ್ನು ಬಲಿ ಕೊಡುವುದಿಲ್ಲ. ಮುಡಿಯು ಕೊಡುವುದಿಲ್ಲ ಎಂದು ಹೇಳಿದ್ದಾರೆ.

 

 

ಕೆಲವರು ಆದ ಅನಾಹುತಕ್ಕೆ ಯಾರು ಹೊಣೆ, ಏನು ಮಾಡಲು ಸಾಧ್ಯವಾಗುವುದಿಲ್ಲ. ದೇವಾಲಯದ ಬಾಗಿಲು ತೆರೆಯುವುದು ಒಳ್ಳೆಯದು ಇಲ್ಲವಾದರೆ ನಾವು ಯಾವುದೇ ಕಾರಣಕ್ಕೂ ಹರಕೆಯನ್ನು ನೀಡುವುದಿಲ್ಲ ಎಂದು ಹೇಳಿದರು. ಒಂದಿಷ್ಟು ಜನ ಪ್ರಸಾದ ಮಾಡಿದರೆ ಬಾತ್ ತಯಾರಿಸುವುದು ಮಾತ್ರ ಬೇಡ ಎಂದು ಹೆದರಿ ಹೇಳುತ್ತಿದ್ದಾರೆ. ಯಾಕೆ ಎಂದರೆ ಬಾತ್ ಬಿಟ್ಟು ಬೇರೆ ಏನಾದರೂ ಸ್ವೀಕರಿಸೋಣ ಆದರೆ ಬಾತ್ ಯಾವುದೇ ಕಾರಣಕ್ಕೂ ಬೇಡ. ಅದರಿಂದ ಇಂದಿಗೂ ಹಲವರು ಅನೇಕ ರೋಗಗಳಿಂದ ಅನುಭವಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here