ಮತ್ತೊಂದು ದಾಖಲೆಯನ್ನು ಮುಡಿಗೇರಿಸಿಕೊಂಡ ‘ರನ್ ಮಿಷನ್’..!

0
365

ಸದ್ಯ ವೆಸ್ಟ್ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಟಿ – ಟ್ವೆಂಟಿ ಸರಣಿಯನ್ನು ಗೆದ್ದುಕೊಂಡಿದ್ದೆ.. ಆಡಿದ ಮೂರು ಪಂದ್ಯದಲ್ಲಿ, ಮೂರು ಪಂದ್ಯವನ್ನು ಗೆದ್ದು ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ !

ಗುರುವಾರದಿಂದ ಆರಂಭವಾದ 3 ಏಕದಿನ ಸರಣಿಯಲ್ಲಿ,ಮೊದಲ ಪಂದ್ಯ ಮಳೆಯ ಆಹುತಿಗೆ ಡ್ರಾ ಆಗಿತ್ತು !

ಆದರೆ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೋಹ್ಲಿ ಶತಕವನ್ನು ಗಳಿಸುವ ಮುಖಾಂತರ ಭಾರತ ಜಯಭೇರಿ ಭಾರಿಸಿದೆ.. ಅಲ್ಲದೆ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಒಂದು ವಿಶ್ವ ದಾಖಲೆಯನ್ನು ಬರೆದಿದ್ದಾರೆ !
ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಅವರ ವಿಶ್ವ ದಾಖಲೆಯನ್ನು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಳಿಸಿ ಹಾಕಿದ್ದಾರೆ..

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ,ಮೊದಲ ಓವರ್‌ನಲ್ಲೇ ಶೆಲ್ಡನ್‌ ಕಾಟ್ರೆಲ್‌ ಬೌಲಿಂಗ್‌ನಲ್ಲಿ ಶಿಖರ್‌ ಧವನ್‌ ಎಲ್‌ಬಿಡಬ್ಲ್ಯು ಬಲಗೆ ಬಿದ್ದು ಪೆವಿಲಿಯನ್‌ ಸೇರಿದ್ದರು. ನಂತರ ಅಂಗಣಕ್ಕಿಳಿದ ಕಿಂಗ್ ಕೊಹ್ಲಿ ರನ್ ಹೊಳೆಯನ್ನೇ ಹರಿಸಿದರು !ಜಾವೆದ್‌ ಮಿಯಾಂದಾದ್‌ ಅವರ 26 ವರ್ಷಗಳ ಸುದೀರ್ಘಾವಧಿಯ ವಿಶ್ವ ದಾಖಲೆಯನ್ನು ನುಚ್ಚುನೂರು ಮಾಡಿದರು!.
ಇನಿಂಗ್ಸ್‌ನ 5ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ, ಕಾಟ್ರೆಲ್‌ ಅವರ ಬೌಲಿಂಗ್‌ನಲ್ಲಿ ಒಂದು ರನ್‌ ಕದಿಯುವ ಮೂಲಕ ನೂತನ ದಾಖಲೆಗೆ ಬೇಕಿದ್ದ 19 ರನ್‌ಗಳನ್ನು ಗಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವ ದಾಖಲೆ ಟೀಮ್‌ ಇಂಡಿಯಾ ನಾಯಕನ ಮುಡಿಗೇರಿತು.

ಪಾಕ್‌ ತಂಡದ ಮಾಜಿ ನಾಯಕ ಮಿಯಾಂದಾದ್‌ ವೆಸ್ಟ್‌ ಇಂಡೀಸ್‌ ವಿರುದ್ಧ 64 ಇನಿಂಗ್ಸ್‌ಗಳಲ್ಲಿ 1930 ರನ್‌ಗಳನ್ನು ದಾಖಲಿಸಿದ್ದರೆ, ಕೊಹ್ಲಿ ಕೇವಲ 34 ಇನಿಂಗ್ಸ್‌ಗಳಲ್ಲಿ ಪಾಕಿಸ್ತಾನಿ ಕ್ರಿಕೆಟಿಗನ ದಾಖಲೆಯನ್ನು ಅಳಿಸಿಹಾಕಿದ್ದಾರೆ.

LEAVE A REPLY

Please enter your comment!
Please enter your name here