‘ಒಡೆಯ’ನಿಂದ ತೊಂದರೆಯಾಗುತ್ತಿದ್ದೆಯಾ?

0
648

ಕನ್ನಡ ಚಿತ್ರರಂಗದಲ್ಲಿ ಈ ವರ್ಷ ತೆರೆಕಂಡ ಸ್ಟಾರ್ ಸಿನಿಮಾಗಳ ಪೈಕಿ ದರ್ಶನ್ ಅಭಿನಯದ ಯಜಮಾನ ಮತ್ತು ಕುರುಕ್ಷೇತ್ರ ಸಿನಿಮಾಗಳು ಶತದಿನೋತ್ಸವವನ್ನು ಬಾರಿಸಿದ್ದು, ಇದೀಗ ಮತ್ತೊಂದು ಸಿನಿಮಾ ಒಡೆಯ ಕೂಡ ಶತ ದಿನೋತ್ಸವವನ್ನು ಭಾರಿಸುವ ನಿರೀಕ್ಷೆಯಲ್ಲಿದೆ. ಹೌದು, ಈ ವರ್ಷ ತೆರೆಕಂಡ ಸ್ಟಾರ್ ನಟರ ಸಿನಿಮಾಗಳಲ್ಲಿ ದರ್ಶನ್ ಸಿನಿಮಾಗಳೆ ಅಗ್ರಸ್ಥಾನ.. ಯಾಕೆಂದರೆ ಬೇರೆ ಯಾವ ನಟರ ಸಿನಿಮಾವು ಅಂದುಕೊಂಡಂತೆ ಹಿಟ್ ಆಗಿಲ್ಲ. ಆದುದರಿಂದ ಈ ವರ್ಷ ಚಿತ್ರರಂಗದಲ್ಲಿ ದರ್ಶನ್ ಅವರದ್ದೇ ಹಬ್ಬ.

 

 

‘ಒಡೆಯ’, ದರ್ಶನ್ ಅಭಿನಯದ ಈ ವರ್ಷದ ಕೊನೆಯ ಸಿನಿಮಾ ಆಗಿದ್ದು, ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಈಗಾಗಲೇ ಥಿಯೇಟ್‌ರ್ ಹೌಸ್ ಫುಲ್ ಆಗಿರುವ ದೃಶ್ಯಗಳನ್ನು, ಥಿಯೇಟರ್‌ ಮುಂದೆ ಅಭಿಮಾನಿಗಳ ಹಬ್ಬವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ದರ್ಶನ್ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ‘ದರ್ಶನ್ ಮತ್ತು ಎಂ.ಡಿ.ಶ್ರೀಧರ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಸನಾ ತಿಮ್ಮಯ್ಯ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಸಂದೇಶ್ ಬ್ಯಾನರ್‌ನಲ್ಲಿ ಈ ಚಿತ್ರ ಮೂಡಿಬಂದ್ದಿದ್ದು, ಇದೊಂದು ಪಕ್ಕಾ ಅಭಿಮಾನಿಗಳ ಸಿನಿಮಾವಾಗಿದೆ.

 

 

ಐದು ವರ್ಷಗಳ ಹಿಂದೆ ತಮಿಳಿನಲ್ಲಿ ಅಜಿತ್ ಅಭಿನಯದ ‘ವೀರಂ’ ಸಿನಿಮಾದ ರಿಮೇಕ್ ಇದಾಗಿದ್ದರೂ ಕನ್ನಡದ ಸೊಗಡಿಗೆ ತಕ್ಕಂತೆ ಮತ್ತು ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ಎಂ. ಶ್ರೀಧರ್ ಅವರು ತಯಾರು ಮಾಡಿದ್ದು, ದರ್ಶನ್ ಅವರ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ !

 

 

ಆದರೆ ಯೋಚಿಸ ಬೇಕಾದಂತಹ ವಿಚಾರವೇನೆಂದರೆ, ಸಾಮಾನ್ಯವಾಗಿ ದರ್ಶನ್ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿದೆ ಎಂದರೆ ಚಿತ್ರಮಂದಿರದಲ್ಲಿ ಐದು ಪ್ರದರ್ಶನಗಳಾಗುತ್ತವೆ. (moring show 6 o’ clock)
ಈಗಾಗಲೇ ತೆರೆಕಂಡ ಕುರುಕ್ಷೇತ್ರ ಮತ್ತು ಯಜಮಾನ ಸಿನಿಮಾಗಳು ಕೂಡ ನಡುರಾತ್ರಿಯಲ್ಲಿ ಒಂದು ಶೋ ಮತ್ತು ಮುಂಜಾನೆ ಆರು ಗಂಟೆಗೆ ಒಂದು ಶೋ ಪ್ರಸಾರವಾಗುತ್ತಿತ್ತು ಆದರೆ ಅದೇಕೋ ಏನೋ ಒಡೆಯ ಮಾತ್ರ ಈ ರೀತಿ ಆಗಲಿಲ್ಲ.

 

 

ಸಾಮಾನ್ಯವಾಗಿ ಎಲ್ಲ ಚಿತ್ರವೂ ಪ್ರದರ್ಶನವಾಗುವಂತೆ ಮೊದಲ ಆಟ ಹತ್ತು ಗಂಟೆಗೆ ಪ್ರಸಾರವಾಯಿತು.. ಅಷ್ಟಲ್ಲದೆ ಈ ಚಿತ್ರವು ದರ್ಶನ್ ಅವರು ಅವರ ಗೆಳೆತನಕ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರದ ಯಾವ ಹಾಡುಗಳು ಕೂಡ ಮನಸ್ಸಿನಲ್ಲಿ ಉಳಿಯುವಂತಿಲ್ಲ ಎಂದು ಅವರ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು ! ಇದರ ನಡುವೆಯೂ ಸಿನಿಮಾ ಭರ್ಜರಿಯಾಗಿ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಈ ಒಡೆಯನ ಆರ್ಭಟಕ್ಕೆ ಕನ್ನಡದ ಸಾಕಷ್ಟು ಸಿನಿಮಾಗಳು ಥಿಯೇಟರ್ ನಿಂದ ಎತ್ತಂಗಡಿಯಾಗಿವೆ ಎನ್ನುವುದು ಬೇಸರದ ಸಂಗತಿ !

 

 

ಹೌದು, ಈಗಾಗಲೇ ತೆರೆ ಕಂಡಿದ್ದ ರಿಷಬ್ ಶೆಟ್ಟಿಯವರ ಎಳು ಕತೆ ಏಳು ನಿರ್ದೇಶಕರು, ಏಳು ಛಾಯಾಗ್ರಾಹಕರು, ಏಳು ಸಂಗೀತ ನಿರ್ದೇಶಕರನ್ನು ಹೊಂದಿದ್ದಂತಹ ಕಥಾ ಸಂಗಮ ಚಿತ್ರವು ಬಿಡುಗಡೆಯಾಗಿ ಉತ್ತಮ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿತ್ತು ಆದರೆ ಈ ಒಡೆಯನ ಆರ್ಭಟದಿಂದ ಕೆಲವೊಂದು ಸಿನಿಮಾ ಚಿತ್ರಮಂದಿರದಿಂದ ಎತ್ತಂಗಡಿಯಾಗುತ್ತಿದೆ.

 

 

ಇದರ ಜೊತೆಗೆ ಒಂದಿಷ್ಟು ಆಡಿಯನ್ಸ್ ನ ಸೆಟ್ ಮಾಡಿದ್ದಂತಹ ಅಳಿದು ಉಳಿದವರು, ಬಬ್ರು ಸಿನಿಮಾಗಳು ಕೂಡಾ ಮಲ್ಟಿಪ್ಲೆಕ್ಸ್ ನಲ್ಲಿ ಸ್ಕ್ರೀನ್ ಗಳನ್ನು ಕಳೆದುಕೊಂಡಿದೆ. ಇದರ ಜೊತೆಗೆ ಈಗಾಗಲೇ ಜನರನ್ನು ನಗೆ ಗಡಲಿನಲ್ಲಿ ತೆಲಿಸಿರುವಂತಹ ಹಾರರ್ ಕಮ್ ಕಾಮಿಡಿ ಸಿನಿಮಾ ಮನೆ ಮಾರಾಟಕ್ಕಿದೆ ಚಿತ್ರವು ಕೂಡಾ ಮಲ್ಟಿಪ್ಲೆಕ್ಸ್ ನಲ್ಲಿ ಬಿಟ್ಟರೆ ಇನ್ಯಾವ ಚಿತ್ರಮಂದಿರದಲ್ಲೂ ಕಾಣುತ್ತಿಲ್ಲ.. ಒಬ್ಬ ಸ್ಟಾರ್ ನಟರ ಸಿನಿಮಾದಿಂದ ಕನ್ನಡದ ವಿಶಿಷ್ಟ ಹಾಗೂ ವಿಭಿನ್ನ ಸಿನಿಮಾಗಳು ನೆಲಾ ಕಚ್ಚುತ್ತಿರುವುದು ಬೇಸರದ ಸಂಗತಿ !

LEAVE A REPLY

Please enter your comment!
Please enter your name here