ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ನಂಬರ್ ಒನ್ ; ಕಿಂಗ್ ಕೊಹ್ಲಿ !

0
174

ಕಿಂಗ್ ಕೊಹ್ಲಿ, ಭಾರತ ತಂಡದ ಮೋಸ್ಟ್ ಅಗ್ರೆಸಿವ್ ನಾಯಕ.ಕೊಹ್ಲಿ ಕಣಕ್ಕಿಳಿದರೆ ಒಂದಲ್ಲ ಒಂದು ದಾಖಲೆಗಳು ಬರದೇ ಹಿಂದಿರುಗುತ್ತಾರೆ ಎನ್ನುವ ಮಾತುಗಳಿವೆ.. ವಿಶ್ವದ ನಂಬರ್ ವನ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ,ತಮ್ಮ ಆಟಿಟ್ಯೂಡ್, ಸ್ಟೈಲಿಶ್ ಮತ್ತು ಅಗ್ರೆಸಿವ್ ಕ್ಯಾಪ್ಟನ್ ಸಿಯಿಂದ, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ! ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿ ಅವರು ಲೆಜೆಂಡರಿ ಬ್ಯಾಟ್ಸ್ ಮನ್ ಗಳ ದಾಖಲೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ.ಇನ್ನು ಕೊಹ್ಲಿ ಕ್ರೀಸ್ ನಲ್ಲಿ ಇದ್ದರೆ ಬೌಲರ್ಗಳ ಎದೆಯಲ್ಲಿ ನಡುಕ ಶುರು ಆಗುವುದಂತೂ ಕಟ್ಟಿಟ್ಟ ಬುತ್ತಿ ! ದಾಖಲೆಗಳ ಸರದಾರ ಎಂದೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಸಹಿತ ಮತ್ತೊಂದು ದಾಖಲೆ ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ !
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ! ಈ ಮೂರು ಖಾತೆಯಲ್ಲೂ ಈ ಡೆಲ್ಲಿ ಡ್ಯಾಷರ್ ವಿರಾಟ್ ಕೊಹ್ಲಿ , 30 ಮಿಲಿಯನ್ ಅಂದರೆ ಬರೋಬ್ಬರಿ 3 ಕೋಟಿ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ!
ಈ ಮೂಲಕ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳೆಕೆಗೆ, ಕೋಹ್ಲಿ ಪಾತ್ರವಾಗಿದ್ದಾರೆ..!

ಇನ್ನು ಎರಡನೇ ಸ್ಥಾನದಲ್ಲಿ ಕ್ರಿಕೆಟ್ ದೇವರು, ಮುಂಬೈಕರ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ಇದ್ದಾರೆ..
ಸಚಿನ್ ಅವರು ಸಹಿತ ಟ್ವಿಟ್ಟರ್ ನಲ್ಲಿ 3 ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ,ಆದರೆ ಆದ್ರೆ ಟ್ವಿಟ್ಟರ್ ಹಾಗೂ ಇನ್​​​ಸ್ಟಾಗ್ರಾಮ್ನಲ್ಲಿ ಕೊಹ್ಲಿಗಿಂತ ಸಚಿನ್ ಹಿಂದಿದ್ದು, ಟ್ವಿಟ್ಟರ್​ನಲ್ಲಿ 2.8 ಕೋಟಿ ಹಾಗೂ ಇನ್ಸ್​ಟಾಗ್ರಾಂನಲ್ಲಿ 1.65 ಕೋಟಿ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇನ್ನು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ !.
ಇನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಟ್ವಿಟ್ಟರ್​ ಹಾಗೂ ಫೇಸ್ ಬುಕ್ ನಲ್ಲಿ ಕ್ರಮವಾಗಿ 2.05 ಹಾಗೂ ಕೋಟಿ 77 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ..ಹಾಗೂ ಇನ್ಸ್ಟಾ ಗ್ರಾಂನಲ್ಲಿ 1.54 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ!

ಈ ಮೂಲಕ ವಿರಾಟ್ ಕೊಹ್ಲಿ ಎಲ್ಲ ಮಾರ್ಗದಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದ್ದಾರೆ !
ಕ್ರಿಕೆಟ್ ರಸಿಕರ ಪಾಲಿಗೆ ವಿರಾಟ್ ಕೊಹ್ಲಿ ಅವರೇ ನಂಬರ್ ಒನ್ !

LEAVE A REPLY

Please enter your comment!
Please enter your name here