ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ‘ಯಶ್’ ರವರೆ “ನಂಬರ್ ಒನ್”!

0
132

‘ಯಶ್’, ಕನ್ನಡ ಚಿತ್ರರಂಗ ಕಂಡ ಓರ್ವ ಪ್ರತಿಭಾವಂತ ನಟ.. ಅನೇಕ ಏಳು ಬೀಳುಗಳನ್ನು ಗೆದ್ದು, ಚಿತ್ರರಂಗದಲ್ಲಿ ಯಾರ ಸಹಾಯವೂ ಪಡೆಯದೆ, ಇಡೀ ಭಾರತವೇ ತನ್ನತ್ತ ನೋಡುವಂತೆ ಮಾಡಿದ ‘ಅತ್ಯುತ್ತಮ ನಟ’.

ಯಶ್ ಅವರ ಹುಟ್ಟಿದ ಹೆಸರು ‘ನವೀನ್ ಕುಮಾರ್ ಗೌಡ’. ಹುಟ್ಟಿದ್ದು ಹಾಸನ ಜಿಲ್ಲೆಯ, ‘ಭುವನಹಳ್ಳಿ’ ಗ್ರಾಮದಲ್ಲಿ. ಆದರೆ ವಿದ್ಯಾಭ್ಯಾಸ ಮಾಡಿದ್ದು ನೆಲೆಸಿದ್ದು ಮೈಸೂರಿನಲ್ಲಿ .

ಈಟಿವಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ‘ಮನೆಯೊಂದು ಮೂರು ಬಾಗಿಲು’, ‘ಪ್ರೀತಿ ಇಲ್ಲದ ಮೇಲೆ’, ‘ಸಿಲ್ಲಿಲಲ್ಲಿ’ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ‘ಯಶ್’, 2007 ರಲ್ಲಿ ‘ಜಂಭದ ಹುಡುಗಿ’ ಎಂಬ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು..

ತದನಂತರ 2008 ರಲ್ಲಿ ‘ಮೊಗ್ಗಿನ ಮನಸ್ಸು’ ಎಂಬ ಚಿತ್ರದಲ್ಲಿ ತಮ್ಮ ಭಾವಿ ಪತ್ನಿಯಾಗಿದ್ದ ರಾಧಿಕಾ ಪಂಡಿತ್ ಅವರೊಂದಿಗೂ ಸಹ ಪೋಷಕ ಪಾತ್ರದಲ್ಲಿ ನಟಿಸಿದ್ದರು.. ಈ ಚಿತ್ರಕ್ಕೆ ಯಶ್ ಅವರಿಗೆ “ಅತ್ಯುತ್ತಮ ಪೋಷಕ ನಟ” ಎಂಬ ಫಿಲಂಫೇರ್ ಅವಾರ್ಡ್ ದೊರತಿದೆ..

ನಂತರ ಅದೇ ವರ್ಷದಲ್ಲಿ ರಾಖಿ ಎಂಬ ಚಿತ್ರದ ಮೂಲಕ ಪರಿಪೂರ್ಣ ನಾಯಕ ನಟರಾಗಿ ಹೊರಹೊಮ್ಮಿದರು ..
ನಂತರ ಬಂದ ‘ಕಳ್ಳರ ಸಂತೆ’, ‘ಗೋಕುಲ’, ‘ಮೊದಲಾಸಲ’, ‘ರಾಜಧಾನಿ’ ಎಂಬ ಚಿತ್ರಗಳು ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು !

ತದನಂತರ 2010 ರಲ್ಲಿ ತೆರೆ ಕಂಡಿದ್ದ ‘ಕಿರಾತಕ’ ಎಂಬುವ ಚಿತ್ರ, ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾವಾಗಿತ್ತು.! ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡುವ ಮುಖಾಂತರ ತಮ್ಮದೇ ಟ್ರೆಂಡ್ ಸೆಟ್ ಮಾಡಿಕೊಂಡರು !

ತದನಂತರ ಯಶ್ ಅವರು ಮುಟ್ಟಿದ್ದೆಲ್ಲವೂ ಚಿನ್ನವೇ ಎಂಬಂತೆ ‘ಲಕ್ಕಿ’, ‘ಜಾನು’, ‘ಗೂಗ್ಲಿ’, ‘ಡ್ರಾಮಾ’, ‘ರಾಜಾಹುಲಿ’ ‘ಗಜಕೇಸರಿ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’, ‘ಮಾಸ್ಟರ್ ಪೀಸ್’ ಹಾಗೂ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಬಂದರು ..

‘ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಕ್ಕಾಲ್ಲ, ನಮಗ್ ನಾವೇ ಹೀರೋ ಆಗಬೇಕು’ ಎಂಬುವ ಯಶ್ ಅವರ ರಾಜಾಹುಲಿ ಸಿನಿಮಾದ ಡೈಲಾಗ್ ಇವರ ವೃತ್ತಿ ಜೀವನದಲ್ಲಿ ನಿಜವಾಗಿದೆ !

2018 KGF chapter-1 ಬಿಡುಗಡೆ!!

‘ಕೆಜಿಎಫ್’, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ.ಈ ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಇಡೀ ಭಾರತ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿ ಮಾಡಿದೆ ! ಕರ್ನಾಟಕದಲ್ಲಿ ಪರಭಾಷಾ ಚಿತ್ರದ ಹಾವಳಿ ಎನ್ನುತ್ತಿದ್ದವರು ಬಾಯಲ್ಲಿ ಬೆರಳು ಇಟ್ಟುಕೊಳ್ಳುವಂತೆ ಈ ಸಿನಿಮಾ ಮಾಡಿದೆ !

ಪಂಚಭಾಷೆಯಲ್ಲಿ ಬಿಡುಗಡೆಯಾದ ಈ ಸಿನಿಮಾ, ಯಶ್ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟಿದ್ದೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ದೇಶ – ವಿದೇಶಗಳಲ್ಲೂ ಯಶ್ ಅವರ ಹೆಸರು ಕೇಳಿಬರುತ್ತಿದೆ !..

ಕೆಜಿಎಫ್ ಕನ್ನಡ ಚಿತ್ರರಂಗದ ಬಹುಕೋಟಿ ವೆಚ್ಚದ ಸಿನಿಮಾ ! ಈ ಸಿನಿಮಾ ಕನ್ನಡಕ್ಕೆ ಹೆಮ್ಮೆ ತಂದುಕೊಟ್ಟ ಸಿನಿಮಾ ಎಂದರ ತಪ್ಪಾಗಲಾರದು !.
ಕೆಜಿಎಫ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ. ಅವರ ಯಶಸ್ಸಿನ ಏರಿಕೆಯನ್ನು ಮಾಧ್ಯಮಗಳು ದಾಖಲಿಸಿವೆ ಮತ್ತು ಅವನ್ನು ಕರ್ನಾಟಕ ಜನಪ್ರಿಯ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ ..

ಇನ್ನು KGF chapter 2, ಹೊಸ ಅಧ್ಯಾಯ ಬರೆಯುವುದರಲ್ಲಿ ಎರಡು ಮಾತಿಲ್ಲ! ಸದ್ಯ ಇಡೀ ಭಾರತ ಚಿತ್ರರಂಗವೇ ಈ ಚಿತ್ರಕ್ಕಾಗಿ ಎದುರು ನೋಡುತ್ತಿದೆ.. ಇನ್ನು ಬಾಲಿವುಡ್ ನಟ ‘ಸಂಜಯ್ ದತ್’, ‘ಅಧೀರಾ’ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ !

ಇನ್ನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುವ ಮುಖಾಂತರ ತಮ್ಮ ಜನಪ್ರಿಯತೆ ಏನು ಎಂಬುದನ್ನು ರಾಜಕೀಯದವರೆಗೂ ತೋರಿಸಿಕೊಟ್ಟಿದ್ದಾರೆ !

ಇನ್ನು ‘ರಾಕಿ ಬಾಯ್’ ಹವಾ ದಿನದಿಂದ ದಿನಕ್ಕೆ ಜೋರಾಗ್ತಾನೇ ಇದೆ.
ಕೆಜಿಎಫ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಸ್ಟಾರ್ ಆದ ‘ಯಶ್’, ಅವರ ಸಿನಿಮಾದ ಡೈಲಾಗ್ ನಂತೆ ‘ನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ, ನಾನ್ ಬಂದ್ಮೇಲೆ ನಂದೇ ಹವಾ’ ಎಂಬುವ ಸಂಭಾಷಣೆ ಎಲ್ಲಾ ಸಮಯದಲ್ಲೂ ಯಶ್ ಅವರಿಗೆ ಸೂಟ್ ಆಗೋ ತರಹ ಕಾಣ್ತಾ ಇದೆ !

ಈ ನಡುವೆ ಸ್ಯಾಂಡಲ್ ವುಡ್ ಸ್ಟಾರ್ ನಟರನ್ನು ಹಿಂದಿಕ್ಕಿ ‘ನಾನೇ ನಂಬರ್ ಒನ್’ ಎಂದು ಯಶ್ ಹೇಳ್ತಾ ಇದ್ದಾರೆ! ಹೇಗೆ ಅಂತೀರಾ? ಒಬ್ಬ ನಟ ನಂಬರ್ ಒನ್ ಸ್ಟಾರ್ ಆಗಲು ಅವನ ಸಿನಿಮಾದ ಜೊತೆ ಅವನ ಫ್ಯಾನ್ಸ್ ಫಾಲೋಯರ್ಸ್ ಕೂಡಾ ಮುಖ್ಯವಾಗಿರುತ್ತದೆ.. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳ ಮುಖಾಂತರ ಯಾವ ಸ್ಟಾರ್ ನಂಬರ್ ಒನ್ ?ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.. ಈ ಸಾಲಿನಲ್ಲಿ ಯಶ್ ರವರೆ ನಂಬರ್ ಒನ್ !ಹೇಗೆ ಅಂತೀರಾ ?

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಯಶ್ ಅವರಿಗೆ ಒಂದು ಮಿಲಿಯನ್ ಫಾಲೋಯರ್ಸ್ ಪಡೆದಿದ್ದಾರೆ..! ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಒಂದು ಮಿಲಿಯನ್ ಫಾಲೋಯರ್ಸ್ ದಾಟಿದ ಏಕೈಕ ನಟ ಯಶ್ ಆಗಿದ್ದಾರೆ!

ಇನ್ನು ಎರಡನೇ ಸ್ಥಾನದಲ್ಲಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎರಡು ಲಕ್ಷ ಫಾಲೋವರ್ಸ್ ಹೊಂದಿದ್ದಾರೆ..

ಹಾಗೆ ಸುದೀಪ್ ನಾಲ್ಕು, ಲಕ್ಷ ಮತ್ತು ದರ್ಶನ್ ಎರಡು ಲಕ್ಷ ಫಾಲೋವರ್ಸ್ ಹೊಂದಿದ್ದಾರೆ!

ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಯಶ್ ಅವರದ್ದೇ ಹವಾ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ

LEAVE A REPLY

Please enter your comment!
Please enter your name here