ನಾನ್‍ವೆಜ್ ತಿನ್ನೋರಿಗೆ ಇಲ್ಲಿದೆ ಒಂದೊಳ್ಳೆ ಟಿಪ್ಸ್..!

0
171

ಚಿಕನ್ ಮತ್ತು ಮಟನ್, ನಾನ್‍ವೆಜ್ ತಿನ್ನುವರ ಪಾಲಿಗೆ ಅದ್ಭುತ ಖಾದ್ಯಗಳು.  ಅನೇಕರು ಈ ಖಾದ್ಯಗಳನ್ನು ತಯಾರಿಸುವುದಕ್ಕಾಗಿ ಮನೆಯಲ್ಲಿ ಸಾಕಷ್ಟು ಹೊಸ-ಹೊಸ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ಮಾಂಸದ ಅಡುಗೆ ಮಾಡುವಾಗ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ ಮಾಂಸ ಸರಿಯಾಗಿ ಬೇಯಿಸುವುದು. ಚಿಕನ್ ಮತ್ತು ಮಟನ್‍ನಲ್ಲಿ ಮಾಂಸವನ್ನು ಸರಿಯಾಗಿ ಬೇಯಿಸಿದಾಗ ಮಾತ್ರ ಅದರ ರುಚಿ ಹೆಚ್ಚುತ್ತದೆ. ಹೀಗಾಗಿ ಮಾಂಸವನ್ನು ಬೇಯಿಸುವಾಗ ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ. ಆಗ ಮಾಂಸ ಸ್ಪಂಜಿನಂತೆ ಮೃದುವಾಗುವುದಲ್ಲದೇ, ಬೇಗನೆ ಬೇಯಿತ್ತದೆ. ನೀವು ಹಾಕುವ ಮಸಾಲೆ ಪದಾರ್ಥಗಳು ಮಾಂಸವನ್ನು ಸರಿಯಾಗಿ ಸೇರಿಕೊಂಡು ಅದ್ಭುತವಾದ ರುಚಿ ನೀಡುತ್ತವೆ.

LEAVE A REPLY

Please enter your comment!
Please enter your name here