ನವೆಂಬರ್ ನಲ್ಲಿ ‘ಮುಖವಾಡ ಇಲ್ಲದವನು 84’ ಚಿತ್ರ ಬಿಡುಗಡೆ.

0
153

ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸೆನ್ಸಾರ್ ಕೂಡ ಮುಗಿದಿದೆ. ನವೆಂಬರ್ ನಲ್ಲಿ ತೆರೆಗೆ ಬರಲಿದೆ. ಕೆಲವು ಚಿತ್ರಗಳ ಶೀರ್ಷಿಕೆಯನ್ನು ಕೇಳಿದರೆ ಆ ಚಿತ್ರ ನೋಡಬೇಕೆಂಬ ಕುತೂಹಲ ಹುಟ್ಟಿಸುತ್ತದೆ. ಆ ಸಾಲಿಗೆ ಸೇರ್ಪಡೆಯಾಗಲಿದೆ ‘ಮುಖವಾಡ ಇಲ್ಲದವನು 84’ ಚಿತ್ರ.
‘ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವಯಾವ ರೀತಿ ಮುಖವಾಡ ಹಾಕುತ್ತಾನೆ’ ಎನ್ನುವುದೇ ಚಿತ್ರದ ಕಥಾಹಂದರ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖಿ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ನಲವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ತೆರೆಗೆ ಬರಲು ಸಂಪೂರ್ಣ ಸಿದ್ದವಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಸಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶಿವಕುಮಾರ್(ಕಡೂರ್) ಬರೆದಿದ್ದಾರೆ. ನಿರ್ದೇಶಕರ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಮುಂದಿನ ದಿನಗಳಲ್ಲಿ ಪತ್ರಿಕಾಗೋಷ್ಠಿ ಮೂಲಕ ನಿರ್ದೇಶಕರನ್ನು ಪರಿಚಯಿಸುವುದಾಗಿ  ನಿರ್ಮಾಪಕರು ತಿಳಿಸಿದ್ದಾರೆ.

ಮಧು ಆರ್ಯ, ವಿನಯ್ ಗೌಡ, ಗಿರೀಶ್ ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರುದ್ರೇಶ್ ಲಕ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಮಹಾರಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್ (ಕಡೂರ್), ರಚನ ಅಂಬಲೆ, ಅನುಶ್ರೀ, ಕಾವ್ಯ ಗೌಡ, ಸಿ. ಎಸ್. ಪಾಟೀಲ್, ಹರೀಶ್ ಸಾರಾ, ಆನಂದ್ ಕೋರಾ, ಜಯಸೂರ್ಯ ಹಾಗೂ ಚಿತ್ರದ ನಿರ್ಮಾಪಕ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here