ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಸಾಕಷ್ಟು ಜನರು ಸಹಾಯ ಹಸ್ತ ಚಾಚಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ತಮ್ಮ ‘ಎಂಆರ್ಎಸ್’ ಪೌಂಡೇಶನ್ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದಾರೆ. ಅದೇ ರೀತಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘವೂ ಕೂಡಾ ಪ್ರವಾಹ ಸಂತ್ರಸ್ಥರಿಗೆ 2 ಕೋಟಿ ರೂ.ಗಳನ್ನು ಘೋಷಿಸಿದೆ.
ಇನ್ನು ನಿನ್ನೆ ಸಿಎಂ ಯಡಿಯೂರಪ್ಪನವರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯೂ ಭೀಕರ ರೂಪ ತಾಳಿದೆ. ಹೀಗಾಗಿ ಸಾಕಷ್ಟು ಜನರ ಬದುಕು ನಾಶವಾಗಿದೆ. 51 ತಾಲೂಕುಗಳು 503 ಗ್ರಾಮಗಳು ಮುಳುಗಡೆಯಾಗಿದ್ದು, ರಸ್ತೆ, ಸೇತುವೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಸಂಪನ್ಮೂಲ ನಾಶವಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಜನರ ಬದುಕು ಕಟ್ಟಿಕೊಡಲು ರಾಜ್ಯದ ಉದ್ಯಮಿಗಳು ಉದಾತ್ತ ನೆರವು ನೀಡಬೇಕೆಂದು ಸಿಎಂ ಯಡಿಯೂರಪ್ಪನವರ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಅನೇಕರು ನೆರವು ನೀಡಿದ್ದಾರೆ.