ಒಕ್ಕಲಿಗ ಸಮುದಾಯ ‘ಆರಾಧ್ಯ ದೈವ’ ಎಂದೇ ಖ್ಯಾತರಾದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಇಡೀ ಒಕ್ಕಲಿಗ ಸಮುದಾಯ ಗೌರವಿಸುವಂತ ಸ್ವಾಮೀಜಿಗಳು. ಸಮಾಜಸೇವೆಯ ಜೊತೆಗೆ ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರಿಗೂ ಸಲಹೆ ಸೂಚನೆಗಳನ್ನು ನೀಡುವುದು ಶ್ರೀಮಠದ ಪರಂಪರೆಯಲ್ಲಿದೆ. ಮಾಜಿ ಪ್ರಧಾನಿ ದೇವೇಗೌಡರ ಆದಿಯಾಗಿ ರಾಜ್ಯದ ಅನೇಕ ಪ್ರಭಾವಿ ರಾಜಕೀಯ ಮುಖಂಡರು ಆದಿಚುಂಚನಗಿರಿ ಮಠದ ಶ್ರೀಗಳ ಮಾತಿಗೆ ಮಣೆ ಹಾಕುತ್ತಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಡಿಕೆ ಶಿವಕುಮಾರ್ ಅವರು ಕೂಡಾ ಆದಿಚುಂಚನಗಿರಿ ಮಠದ ಭಕ್ತ. ಸಾಕಷ್ಟು ಸಲ ಶ್ರೀಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳಿಂದ ಮಾರ್ಗದರ್ಶನ ಪಡೆಯುತ್ತಾರೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಶ್ರೀಮಠಕ್ಕೆ ಭೇಟಿ ನೀಡಿದ್ದಾಗ ನಿರ್ಮಲಾನಂದ ಶ್ರೀಗಳು ಕೆಲ ವಿಷಯಗಳ ಕುರಿತು ಡಿಕೆಶಿಗೆ ಎಚ್ಚರಿಕೆ ನೀಡಿದ್ದರಂತೆ.
ಹೌದು, ನಿರ್ಮಲಾನಂದ ಶ್ರೀಗಳು ಈ ಮೊದಲೇ ನುಡಿದಂತೆ, “ನಿಮ್ಮ ಮೇಲೆ ರಾಜಕೀಯ ದಾಳಿ ನಡೆಯಬಹುದು. ರಾಜಕೀಯವಾಗಿ ನೀವು ಸಾಕಷ್ಟು ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದೀರಿ. ಒಕ್ಕಲಿಗ ಸಮುದಾಯದ ನಾಯಕತ್ವ ಮುಂದಿನ ದಿನಗಳಲ್ಲಿ ನಿಮ್ಮ ಕೈಯಲ್ಲಿರಲಿದೆ. ಹೀಗಾಗಿ ನಿಮಗೆ ರಾಜಕೀಯ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ. ಸ್ವಪಕ್ಷದವರೇ ನಿಮ್ಮನ್ನು ತುಳಿಯಲು ಯತ್ನಿಸಿದರು ಆಶ್ಚರ್ಯ ಪಡಬೇಕಿಲ್ಲ. ನಿಮ್ಮ ಸುತ್ತಲಿರುವ ಶತ್ರುಗಳ ಬಗ್ಗೆ ಸಾಕಷ್ಟು ನಿಗಾ ವಹಿಸಿ. ಇಲ್ಲದಿದ್ದರೆ ನಿಮಗೆ ಅಪಾಯ ಶತಃಸಿದ್ದ” ಎಂದು ಶ್ರೀಗಳು ಡಿಕೆಶಿಗೆ ಎಚ್ಚರಿಕೆ ನೀಡಿದ್ದರಂತೆ.

ಸದ್ಯ ಡಿಕೆಶಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ನೋಡಿದರೆ ನಿರ್ಮಲಾನಂದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಿದೆ. ಡಿಕೆಶಿಗೆ ಬಿಜೆಪಿಗಿಂತ ಕಾಂಗ್ರೆಸ್ನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದ ಡಿಕೆಶಿಗೆ ಇಡಿ ಪ್ರಕರಣದಿಂದ ರಾಜಕೀಯವಾಗಿ ಭಾರೀ ಹಿನ್ನಡೆಯಾಗಿದೆ. ಅವರ ಸುತ್ತಲಿರುವವರು ಅವರ ರಾಜಕೀಯ ಏಳಿಗೆಯನ್ನು ಸಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸತ್ಯ ಏನಿಸುತ್ತದೆ.