ಪ್ರೀತಿಯ ಮಡದಿಗಾಗಿ  ನಿಖಿಲ್ ಕುಮಾರಸ್ವಾಮಿ ಮಾಡುತ್ತಿರುವ ಕೆಲಸ ಇದೇ ನೋಡಿ !

0
312

ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಸೆನ್ಸೇಷನಲ್ ತಾರಾ ಜೋಡಿ ಎಂದರೆ ಅದು ಕರುನಾಡ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಜೋಡಿ ಎಂದು ಹೇಳಿದರೆ ತಪ್ಪಾಗಲಾರದು. ಈ ರೀತಿಯಾಗಿ ಟ್ರೆಂಡ್ ಸೆಟ್ ಮಾಡಿದ್ದಾರೆ ಈ ಪತಿ-ಪತ್ನಿಯರು. ತಾವು ಹಂಚಿಕೊಳ್ಳುವ ಪೋಸ್ಟ್ ಗಳಿಂದ ಈ ಜೋಡಿಗಳು ಆಗಾಗ ಸುದ್ಧಿಯಲ್ಲಿಯೇ ಇರುತ್ತಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪ್ರೀತಿಯ ಮಡದಿಗಾಗಿ ಹೊಸ ಮನೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹವೂ ರಾಮನಗರದ ಬಳಿ ಅದ್ಧೂರಿಯಾಗಿ ನಡೆಯ ಬೇಕಿತ್ತು. ಆದರೆ ದೇಶದೆಲ್ಲೆಡೆ ಮಾರಣಾಂತಿಕ ಕಾಯಿಲೆ   ಕೊರೊನಾ ಸೋಂಕು ಹೆಚ್ಚಾಗಿರುವ  ಕಾರಣದಿಂದಾಗಿ ಗುರು ಹಿರಿಯರು ಅಂದುಕೊಂಡಂತೆ ನಡೆಸಲು ಸಾಧ್ಯವಾಗಲಿಲ್ಲ.  ಬದಲಿಗೆ ರಾಮನಗರದ ತೋಟದ ಮನೆಯಲ್ಲಿ ಸರಳವಾಗಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿಗಳ ವಿವಾಹ ಜರುಗಿತ್ತು.

ಇನ್ನು  ಬೆಂಗಳೂರಿನಲ್ಲಿ ಈ ಮಾರಣಾಂತಿಕ ಕಾಯಿಲೆಯ ಅಟ್ಟಹಾಸ ಜೋರಾಗಿದ್ದು, ಸಿನಿಮಾ ಹಾಗೂ ರಾಜಕೀಯ ಕೆಲಸಗಳು ಸ್ತಗಿತವಾಗಿದೆ. ಆದ ಕಾರಣದಿಂದಲೇ  ನಿಖಿಲ್  ಕುಮಾರಸ್ವಾಮಿ ಹಾಗೂ ರೇವತಿ ಅವರು ಬೆಂಗಳೂರನ್ನು ತ್ಯಜಿಸಿ, ಬಿಡದಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದಾರೆ.  ನಿಖಿಲ್ ಅವರಿಗೆ ಅಗತ್ಯವಿದ್ದರೆ ಮಾತ್ರ ಬೆಂಗಳೂರಿಗೆ ಹೋಗಿ ಬರುತ್ತಾರೆ. ಇದರ ಜೊತೆಗೆ ಈ ನವ ಜೋಡಿಗಳು ತಮ್ಮ ಬಿಡದಿಯ ತೋಟದಲ್ಲಿಯೇ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಪತಿಯ ಕೃಷಿ ಕಾಯಕಕ್ಕೆ ಪತ್ನಿ ರೇವತಿ ಅವರೂ ಸಹ ಸಾಥ್ ನೀಡುತ್ತಿರುವುದು, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ದುರಕುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ  ಆಕ್ಟಿವ್ ಆಗಿರುವ ನಿಖಿಲ್ , ಆಗಾಗ ಪತ್ನಿಯೊಂದಿಗಿನ ಫೋಟೋಗಳನ್ನು‌ ಹಂಚಿಕೊಳ್ಳುತ್ತಿರುತ್ತಾರೆ.‌ ಪ್ರತಿ ನಿತ್ಯ ಮಾಡುವ ಯೋಗ, ಜಿಮ್ ಪ್ರತಿಯೊಂದಕ್ಕೂ ಪತ್ನಿಯೇ ಟ್ರೈನರ್ ಎಂದು ತಮ್ಮ ಪತ್ನಿಯನ್ನು ಹೊಗಳಿ ಕೊಂಡಾಡುತ್ತಾರೆ ನಿಖಿಲ್ ಕುಮಾರಸ್ವಾಮಿ ಅವರು.  ಇದೀಗ ತಮ್ಮ ಪ್ರೀತಿಯ ಮಡದಿಗೆ ವಿಶೇಷ ಉಡುಗೊರೆಯೊಂದನ್ನು ನೀಡಲು ನಿಖಿಲ್ ತೀರ್ಮಾನಿಸಿದ್ದು, ನೂತನ ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮನೆಯೂ ಕೂಡ ಬಿಡದಿಯ ತೋಟದಲ್ಲಿಯೇ ನಿರ್ಮಾಣವಾಗುತ್ತಿದ್ದು, ಫಾರ್ಮ್ ಹೌಸ್ ನ ನಿರ್ಮಾಣಕ್ಕೆ ಮುಂದಾಗಿದ್ದಾರೆ  ಎಂಬುದು ವಿಶೇಷ.

ಇದರ ಜೊತೆಗೆ ಈಗಾಗಲೇ ತಮ್ಮ ಹೊಸ ಫಾರ್ಮ್ ಹೌಸ್ ನ ಭೂಮಿ ಪೂಜೆಯನ್ನು ಸಹ ನಿಖಿಲ್ ಹಾಗೂ ರೇವತಿ ಅವರು ನೆರವೇರಿಸಿದ್ದು, ಮನೆಯ ನಿರ್ಮಾಣದ ಸಂಪೂರ್ಣ ಜವಬ್ದಾರಿ ರೇವತಿ ಅವರದ್ದೇ ಆಗಿದೆ ಎಂಬುದು ವಿಶೇಷ.  ರೇವತಿ ಅವರು ಆರ್ಕಿಟೆಕ್ಟ್ ಆಗಿರುವುದರಿಂದ ಹೊಸ ಫಾರ್ಮ್ ಹೌಸ್ ನ ನಿರ್ಮಾಣದ ಜವಾಬ್ದಾರಿಯನ್ನು  ಅವರೇ ಸಂಪೂರ್ಣವಾಗಿ ತೆಗೆದುಕೊಂಡಿದ್ದು ಸಂಪೂರ್ಣ ಪ್ಲಾನ್ ಕೂಡ ಅವರದ್ದೇ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮನೆಯೂ  ಪರಿಸರ ಸ್ನೇಹಿ ಮನೆಯಾಗಿರಲಿದೆ ಎಂದು ತಿಳಿದುಬಂದಿದ್ದು, ಒಂದು ವರ್ಷದಲ್ಲಿ ಇದರ ನಿರ್ಮಾಣ‌ ಕಾರ್ಯ ಸಂಪೂರ್ಣ ಗೊಳ್ಳಲಿದೆಯಂತೆ.  ಮುಂದಿನ ವರ್ಷ ರೇವತಿ ಅವರ ಹುಟ್ಟುಹಬ್ಬಕ್ಕೆ ಈ ನೂತನ ಮನೆ ಸಿದ್ದವಾಗಿರಲಿದೆ.  ಮದುವೆಗೆ ಮುನ್ನ ಮಾಧ್ಯಮಗಳ ಮುಂದೆ  ನಿಖಿಲ್ ಅವರು ರೇವತಿ ಅವರ ಕನಸುಗಳಿಗೆ ಸಹಕಾರ ಮಾಡುತ್ತೇನೆ ಎಂದು ತಿಳಿಸಿದ್ದರು. ಇದೀಗ ಅವರ ಮಾತುಗನ್ನು ಉಳಿಸಿಕೊಂಡಿರುವ ನಿಖಲ್, ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡಬೇಕೆಂಬುದು ರೇವತಿ ಅವರ ಕನಸಾಗಿದ್ದು ಇದೀಗ ಅವರು ಅದಕ್ಕೆ ಜೊತೆಯಾಗಿ ನಿಂತಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ !

LEAVE A REPLY

Please enter your comment!
Please enter your name here