ಉತ್ತಮ ನಿರ್ದೇಶಕ ಎಂದೇ ಹೆಸರಾದ ಸಂತೋಷ್ ಆನಂದ್ರಾಮ್ ಡೈರೆಕ್ಷನ್ ನಲ್ಲಿ ಬಹು ನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಕಾಂಬಿನೇಷನ್ ನ ಯುವರತ್ನ ಸಿನಿಮಾ ಈಗಾಗಲೇ ಪ್ರೇಕ್ಷಕರಿಗೆ ಕುತೂಹಲವನ್ನು ತರಿಸಿದೆ . ಹೊಂಬಾಳೆ ಫಿಲ್ಮ್ಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕುರಿತು ಹಲವು ಪ್ರಶ್ನೆಗಳು ಸಹ ಮೂಡಿದೆ. ಈ ಹಿಂದೆ ಇದೇ ಈ ಟೀಂನಿಂದ ಮೂಡಿಬಂದಿದ್ದ ರಾಜಕುಮಾರ ಸಿನಿಮಾ ಸಖತ್ ಹಿಟ್ ಆಗಿತ್ತು. ಹಾಗಾಗಿ. ಇದೀಗ ಯುವರತ್ನ ಮೂಲಕ ಅಂತದ್ದೇ ಮ್ಯಾಜಿಕ್ ನಿರೀಕ್ಷೆಯಲ್ಲಿದೆ ಎನ್ನುತ್ತಿದೆ ಚಂದನವನ.
ಈಗಾಗಲೇ ವಿಭಿನ್ನ ಪೋಸ್ಟರ್ಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ಸೌಂಡ್ ಮಾಡಿದೆ ಯುವರತ್ನ ಚಿತ್ರದ ಹೊಸ ಪೋಸ್ಟರ್. ಹೊಸ ವರ್ಷಕ್ಕೆ ದೊಡ್ಮನೆ ಅಭಿಮಾನಿಗಳಿಗೆ ಉಡುಗೊರೆ ರೂಪದಲ್ಲಿ ಬಂದಿರುವ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿಸುತ್ತಿದೆ. ಇನ್ನು ಈ ಪೋಸ್ಟರ್ ನಲ್ಲಿ ಪವರಸ್ ಸ್ಟಾರ್ ಪುನೀತದ ರಾಜ್ ಕುಮಾರ್ ಸಹ ಸ್ಟೈಲಿಶ್ ಅವತಾರದಲ್ಲಿ ಖಡಕ್ ಲುಕ್ನಲ್ಲಿ ಅಸ್ಥಿಪಂಜರವನ್ನ ಬೆನ್ನಿನ ಮೇಲೆ ಹೊತ್ತುಕೊಂಡು ದರ್ಶನ ಕೊಟ್ಟಿದ್ದಾರೆ.
ಇದರಲ್ಲಿ ಡೈನೋಸಾರ್ ಪಳೆಯುಳಿಕೆಯ ಕಲಾಕೃತಿ ಯನ್ನ ನೋಡಬಹುದು. ಈ ಪೋಸ್ಟರ್ನಲ್ಲಿ ಚಿತ್ರದ ಅಸಲಿ ಥೀಮ್ ಹೇಳೋಕ್ಕೆ ಪ್ರಯತ್ನಿಸಿದ್ದಾರೆ ಎನ್ನಬಹುದು. ಯುವರತ್ನ ಶಿಕ್ಷಣ ವ್ಯವಸ್ಥೆಯಲ್ಲಿರುವ ಮಾಫಿಯಾ ಕುರಿತಾದ ಸಿನಿಮಾ. ಅಪ್ಪು ಸಿನಿಮಾದಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಲುಕ್ನಲ್ಲಿ ಕಾಲೇಜ್ ಸ್ಟೂಡೆಂಟ್ ಅವತಾರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಪೋಸ್ಟರ್ ನೋಡಿದ ಮೇಲೆ ಯುವರತ್ನ ಮೆಡಿಕಲ್ ಕಾಲೇಜ್ಗೆ ಸಂಬಂಧಿಸಿದ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ.
ಸೈನ್ಸ್ ಲ್ಯಾಬ್ನಲ್ಲೋ ಅಥವಾ ಮ್ಯೂಸಿಯಂನಲ್ಲೋ ನಡೆಯೋ ಫೈಟ್ ಸೀಕ್ವೆನ್ಸ್ ರೀತಿ ಪೋಸ್ಟರ್ ಕಾಣುತ್ತಿದ್ದು, ಯುವರತ್ನ ಮನುಷ್ಯನ ಅಸ್ಥಿಪಂಜರ ಹೊತ್ತಿರೋದು ನೋಡ್ತಿದ್ರೆ, ಅಸ್ಥಿಪಂಜರ ಮಾಫಿಯಾ ವಿರುದ್ಧ ಹೋರಾಡುವ ಸಣ್ಣ ಝಲಕ್ ಸಿನಿಮಾದಲ್ಲಿ ಇದ್ಯಾ ಅನ್ನೋ ಅನುಮಾನ ಮೂಡಿಸೋದು ಸುಳ್ಳಲ್ಲ. ಸದ್ಯ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಏಪ್ರಿಲ್ನಲ್ಲಿ ಯುವರತ್ನ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ ಎನ್ನುತ್ತಿದೆ ಚಂದನವನ.