‘ಕಪಟ ನಾಟಕ ಪಾತ್ರಧಾರಿ’ಯ ಬ್ಯೂಟಿಫುಲ್ ಸಾಂಗ್ ಬಿಡುಗಡೆ !

0
136

ಕಪಟ ನಾಟಕ ದಾರಿ ಚಿತ್ರದ ಒಂದು ಹಾಡನ್ನು ಚಿತ್ರ ತಂಡ ಲೋಕಾರ್ಪಣೆ ಮಾಡಿದೆ!
ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ..” ಎನ್ನುವ ಹಾಡನ್ನು ಕವಲು ದಾರಿ ಖ್ಯಾತಿಯ ರಿಷಿ ಬಿಡುಗಡೆ ಮಾಡಿದ್ದಾರೆ !
ಇನ್ನು ಈ ಹಾಡು ಯೂಟ್ಯೂಬ್ನಲ್ಲಿ ಸಂಚಲನ ಸೃಷ್ಟಿಸಿದೆ.ಮೊದಲ ಬಾರಿ ಕೇಳಿದವರೆಲ್ಲ ಮತ್ತೊಮ್ಮೆ ಕೇಳಬೇಕು ಎನಿಸುತ್ತದೆ!
ಇನ್ನು ಚಿತ್ರಕ್ಕೆ ಆದಿಲ್ ನದಾಫ್ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ವೇಣು ಹಸ್ರಾಳಿ, ಕಿರಣ್ ಚಂದ್ರ ಹಾಡುಗಳನ್ನು ರಚಿಸಿದ್ದಾರೆ!
ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಚಿತ್ರದ ಒಂದು ಹಾಡು ಬಿಡುಗಡೆಯಾಗಿದ್ದು, ಈ ರೀತಿ ಕಮಾಲ್ ಮಾಡಿದ್ರೆ! ಇನ್ ಉಳಿದ ಹಾಡುಗಳು ಇನ್ಯಾವ ರೀತಿ ಮಾಡಬಹುದು ಎಂಬುದು ಕಾದು ನೋಡಬೇಕಾಗಿದೆ !

ಸಿನಿಮಾದ ವಿಶೇಷತೆ :-ಮತ್ತೆ ತೆರೆಯ ಮೇಲೆ ‘ಹುಲಿರಾಯ’ : ಈ ಬಾರಿ “ಕಪಟ ನಾಟಕ ಪಾತ್ರಧಾರಿ “2017 ರಲ್ಲಿ ಅರವಿಂದ್ ಕೌಶಿಕ್ ಅವರು ನಿರ್ದೇಶನ ಮಾಡಿದ್ದ ಸಿನಿಮಾ ಹುಲಿರಾಯ.. ಎಸ್ಎಲ್ಎನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗೇಶ್ ಕೋಗಿಲು ನಿರ್ಮಿಸಿದ್ದ ಹುಲಿರಾಯ ಚಿತ್ರದ ಮುಖಾಂತರ ಮೊದಲ ಬಾರಿಗೆ ಬಾಲು ನಾಗೇಂದ್ರ ಅವರು ನಾಯಕನಟನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು .. ಥ್ರಿಲ್ಲರ್ ಓರಿಯೆಂಟೆಡ್ ಸಿನಿಮಾ ಆಗಿದ್ದ ಹುಲಿರಾಯ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು ..

ಈ ಎರಡು ವರ್ಷಗಳ ಬಳಿಕ ನಾಯಕ ಬಾಲು ನಾಗೇಂದ್ರ “ಕಪಟ ನಾಟಕ ಪಾತ್ರಧಾರಿಯಾಗಿ” ತೆರೆ ಮೇಲೆ ಬರುತ್ತಿದ್ದಾರೆ .ಇನ್ನು ಚಿತ್ರವನ್ನು ನಿರ್ದೇಶನ ಮಾಡಿರುವುದು ‘ಕ್ರಿಶ್’. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿರುವ ಕ್ರಿಶ್ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ! ಲಾಂಗ್ ಗ್ಯಾಪ್ ನಂತರ ಸಂಗೀತ ಭಟ್ಟ್ ರವರು ಕಪಟ ನಾಟಕ ಪಾತ್ರಧಾರಿ ಮುಖಾಂತರ ಕನ್ನಡಕ್ಕೆ ರೀ ಎಂಟ್ರಿ ಕೊಡಲಿದ್ದಾರೆ..

ಈ ಜಗತ್ತಿನಲ್ಲಿ ಎಲ್ಲರದ್ದು ನಾಟಕವಾಗಿರುತ್ತದೆ.ಅವರವರ ಬದುಕಿನಲ್ಲಿ ಬರುವವರೇ ಪಾತ್ರಧಾರಿಗಳು. ಅದರಲ್ಲಿ ಪೋಷಕರು, ಸಹೋದರರು, ಸಹೋದರಿಯರು, ಸ್ನೇಹಿತರು, ಪೊಲೀಸರು, ಖಳರು ಎಲ್ಲರೂ ಇರಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಿದ್ದೇನೆ’ ಎಂದು ನಿರ್ದೇಶಕ ಕ್ರಿಶ್ ಹೇಳುತ್ತಾರೆ.

ಸೋಮಾರಿಯಾಗಿರುವ ಕಥಾನಾಯಕ ಬದುಕು ಕಟ್ಟಿಕೊಳ್ಳಲು ಆಟೋ ಚಾಲಕರಾಗಿ, ಆ ಮಧ್ಯೆ ಒಂದು ಪ್ರೀತಿಯೂ ಹುಟ್ಟಿಕೊಂಡು, ಅದರ ಜೊತೆಗೆ ಎದುರಾಗುವ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಈ ಚಿತ್ರದಲ್ಲಿ ನೋಡಬಹುದು.ಚಿತ್ರದಲ್ಲಿ ಸಂಗೀತ ಭಟ್, ಬಾಲು ನಾಗೇಂದ್ರ ಸೇರಿದಂತೆ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ಸುನೀಲ್ ಕುಲಕರ್ಣಿ ಮುಂತಾದವರು ನಟಿಸಿದ್ದಾರೆ. ಗರುಡ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಆದಿಲ್ ನದಾಫ್ ಸಂಗೀತ ನೀಡಿದ್ದಾರೆ.

LEAVE A REPLY

Please enter your comment!
Please enter your name here