ಭಾರತಕ್ಕೆ ಬಂತು 120 ಕಿ.ಮೀ ಮೈಲೇಜ್ ಕೊಡುವಂತ ವಿನೂತನ ಸ್ಕೂಟರ್.!

0
290

ನಮ್ಮ ಜನಸಾಮಾನ್ಯರಿಗೆ ಎರಡು ವಸ್ತುಗಳಲ್ಲಿ ಬಹಳ ಕುತೂಹಲ ಇರುತ್ತದೆ. ಒಂದು ಅಧುನಿಕ ತಂತ್ರಜ್ಞಾನದ ಮೂಲವಾದ ಮೊಬೈಲ್ ಮತ್ತೊಂದು ವಾಹನಗಳು. ಜನರು ಹೆಚ್ಚು ಅಕರ್ಷಿತ ಹಾಗೂ ಪುಳಕಿತವಾಗುವುದು ಮಾರುಕಟ್ಟೆಗೆ ಹೊಸ ಸ್ಮಾರ್ಟ್‍ಫೋನ್ ಅಥವಾ ಹೊಸ ವಾಹನಗಳು ಪ್ರವೇಶ ಮಾಡಿದರೆ ಜನರು ಅದರ ಜಾಲವನ್ನು ಹುಡುಕಿ, ತಡುಕಾಡಿ ತಿಳಿದುಕೊಳ್ಳುತ್ತಾರೆ.

 

 

ಪ್ರತಿ ಭಾರಿ ಹೊಸ ಹೊಸದಾದ ವಿಶಿಷ್ಟ ರೀತಿಯ ಫೀಚರ್ ಗಳನ್ನು ಒಳಗೊಂಡಿರುವ ದ್ವಿಚಕ್ರ ವಾಹನಗಳು ಹಲವು ಪ್ರತಿಷ್ಟಿತ ಕಂಪನಿಗಳಿಂದ ಮಾರುಕಟ್ಟೆಗೆ ಪರಿಚಿತವಾಗುತ್ತಿದೆ. ಅದೇ ರೀತಿಯಲ್ಲಿ ಚೀನಾದ ಪ್ರತಿಷ್ಟಿತ ದ್ವಿಚಕ್ರ ವಾಹನಗಳ ಕಂಪನಿಯಾದ ಬೆನ್ಲಿಂಗ್ ಎನರ್ಜಿ ಮತ್ತು ಟೆಕ್ನಾಲಜಿ ಹೊಸ ಎಲೆಕ್ಟ್ರಿಕ್ ಚಾಲಿತ ದ್ವಿಚಕ್ರ ವಾಹನವನ್ನು ಪರಿಚಯಿಸಿದೆ ಹಾಗೂ ಇದನ್ನು ನೂತನವಾಗಿ ಭಾರತದಲ್ಲಿ ಲಾಂಚ್ ಮಾಡುವ ಮೂಲಕ ಗ್ರಾಹಕರಿಗೆ ಪ್ರಸ್ತುತ ಪಡಿಸಿದ್ದಾರೆ.

 

 

ಈ ಒಂದು `ಔರಾ’ ಎಂಬ ಹೆಸರಿನಲ್ಲಿ ಪರಿಚಯವಾಗಿರುವ ಈ ಸ್ಕೂಟರ್ 2020 ರಲ್ಲಿ ರಸ್ತೆಗಿಳಿಯಲಿದೆ ಎಂದು ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ. 2020ರ ವರ್ಷದ ಮೊದಲ ವಿದ್ಯುತ್ ಚಾಲಿತ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿಗೆ ನಡೆದ ದೆಹಲಿಯ ದ್ವಿಚಕ್ರ ವಾಹನಗಳ ಬೃಹತ್ ಎಕ್ಸ್ಪೋದಲ್ಲಿ ಔರಾ ಸ್ಕೂಟರ್ ಗಳನ್ನು ಪ್ರದರ್ಶಿಸಲಾಯಿತು. ಈ ಒಂದು ವಿದ್ಯುತ್ ಚಾಲಿತ ವಾಹನದ ವಿಶೇಷತೆ ಏನೆಂದರೆ ಇದೊಂದು ಹೈಸ್ಪೀಡ್ ವಿಭಾಗದಲ್ಲಿ ಗುರುತಿಸಿಕೊಂಡಿದೆ.

 

 

ಸದ್ಯ ಸ್ಕೂಟರ್ ಔರಾವನ್ನು ಭಾರತೀಯ ಗ್ರಾಹಕರನ್ನು ಪ್ರಮುಖವಾಗಿ ಗಮನದಲಿಟ್ಟುಕೊಂಡು ಅವರ ಅಗತ್ಯಗಳನ್ನು ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಒಂದು ಸ್ಕೂಟರ್ ವಿಶೇಷಗಳು ಏನು ಎಂದರೆ.? ಬ್ರೇಕ್ ಡೌನ್ ಸ್ಮಾರ್ಟ್ ಅಸಿಸ್ಟೆಂಟ್ ಸಿಸ್ಟಂ ಅಳವಡಿಸಲಾಗಿದ್ದು, ಈ ಪ್ರಸ್ತುತ ತಂತ್ರಜ್ಞಾನದಿಂದ ನಿರ್ಮಿಸಿರುವ ಔರಾದಲ್ಲಿ ಸಮಸ್ಯೆ ಕಂಡು ಬಂದರೆ, ಸ್ಕೂಟರ್ ರಿಸಾರ್ಟ್ ನಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡು ಬರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಬಿಎಲ್ ಡಿಸಿ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, AH ಡಿಟ್ಯಾಚ್ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ನೀಡಲಾಗಿದೆ.

 

 

ವಿಶೇಷ ಎಂದರೆ ಈ ಸ್ಕೂಟರ್ ಗೆ ರಿಮೋಟ್ ಕೀಲೆಸ್ ಸಿಸ್ಟಮ್ ಇರಲಿದ್ದು, ಉಎಸ್ಬಿ ಚಾರ್ಜರ್ ಪೋರ್ಟ್ ಕೂಡ ಲಭ್ಯವಿದೆ. ಸ್ಕೂಟರ್ ಗೆ ರೇರ್ ವ್ಹೀಲ್ ಇಂಟಿಗ್ರೇಟೆಡ್ ಲಾಕಿಂಗ್ ಸಿಸ್ಟಂ ಮತ್ತು ಕಳ್ಳರ ಸೂಚನೆಯನ್ನು ನೀಡಲು ಆ್ಯಂಟಿ ಥೆಫ್ಟ್ ಅಲಾರಂ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಸ್ಕೂಟರ್ ನಾಲ್ಕು ಗಂಟೆ ನಿರಂತರವಾಗಿ ಚಾರ್ಜ್ ಮಾಡಿದರೆ, ೧೨೦ ಕಿ.ಮೀ ಮೈಲೇಜ್ ನೀಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ತೊಂಬತ್ತು ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗೂ ಇರಬಹುದು ಎಂಬ ಮಾಹಿತಿಯನ್ನು ಕಂಪನಿ ತಿಳಿಸಿದೆ.

LEAVE A REPLY

Please enter your comment!
Please enter your name here