ಹೊಸ ಸರಕಾರ ಮತ್ತು ಕಾಂಗ್ರೆಸ್ ಭಿನ್ನಮತ

0
223

ಪ್ರವಾಹದ ಅಬ್ಬರ ತಗ್ಗಿದ ಮರುಕ್ಷಣ ರಾಜಕೀಯ ಸುಂಟರಗಾಳಿ ಶುರುವಾಗಲಿದೆ.
2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದಾಗ ವಾತಾವರಣ ಭಿನ್ನವಾಗಿ ಅವರೇ ಹೈಕಮಾಂಡ್ ಆಗಿದ್ದರು ಆದರೀಗ ಹೈಕಮಾಂಡ್ ಬಲಶಾಲಿಯಾಗಿ ಯಡಿಯೂರಪ್ಪ ಕೊಂಚ ದುರ್ಬಲರಾಗಿದ್ದಾರೆ.

ಮಂತ್ರಿಗಳು ಯಾರ ಪೈಕಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇದೊಂದು ರೀತಿಯಲ್ಲಿ ಯಡಿಯೂರಪ್ಪ ಅವರಿಗೆ ವರವಾಗಿ ಪರಿಣಮಿಸಲಿದೆ. ಹೆಚ್ಚು ಕಮ್ಮಿ ಆದರೆ ಹೈಕಮಾಂಡ್ ಕಡೆ ಬೆರಳು ತೋರಿಸಿ ಸುಮ್ಮನಾಗಬಹುದು.

ಸಿ.ಎಮ್.ಉದಾಸಿ ಮತ್ತು ಉಮೇಶ್ ಕತ್ತಿಯಂತಹ ಹಲವಾರು ಹಿರಿಯರಿಗೆ ಹೈಕಮಾಂಡ್ ಸಚಿವ ಸಂಪುಟದಲ್ಲಿ ಜಾಗ ಕೊಟ್ಟಿಲ್ಲ.

ಅನರ್ಹಗೊಂಡ ಶಾಸಕರ ಭವಿಷ್ಯದ ಮೇಲೆ ಸದರಿ ಪ್ರಕ್ರಿಯೆ ಮುಂದುವರೆಯುತ್ತದೆ.
ಉಳಿದ ಸ್ಥಾನಗಳನ್ನು ಭಿನ್ನಮತದ ನಿವಾರಣಾ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ.

ಪ್ರವಾಹ ನಿರ್ವಹಣೆಯ ಜವಾಬ್ದಾರಿ ಹೊಸ ಸಚಿವರ ಮೇಲಿರುವಾಗ ಭಿನ್ನಮತದ ಕೂಗು ಜೋರಾಗುವ ಸಾಧ್ಯತೆ ಕಡಿಮೆ.

ಕಾಂಗ್ರೆಸ್ ಮತ್ತು ಭಿನ್ನಮತದ ಕಾರಣಗಳು

ಟೆಲಿಫೋನ್ ಕದ್ದಾಲಿಕೆ ಸಿಬಿಐ ತನಿಖೆಗೆ ವಹಿಸಿರುವುದು ಯಾರಿಗೆ ಲಾಭ ಎಂದು ಹೇಳುವುದು ಕಷ್ಟವಾದರೂ ವಿರೋಧ ಪಕ್ಷದ ನಡುಕಕ್ಕೆ ಕಾರಣವಾಗಿರುವದಂತು ನಿಜ.
ಸಿಬಿಐ ತನಿಖೆಯನ್ನು ಬೇಡವಾದವರ ವಿರುದ್ಧ ಬಳಸಿಕೊಳ್ಳುವ ಶಾ ತಂತ್ರ ಅನಿರೀಕ್ಷಿತವೇನಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ವಿರೋಧ ಪಕ್ಷದ ನಾಯಕರ ಆಯ್ಕೆಯ ಸಂದರ್ಭದಲ್ಲಿ ಭಿನ್ನಮತ ಸ್ಪೋಟಗೊಳ್ಳುತ್ತದೆ.

ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಗಳನ್ನು ಹತ್ತಾರು ಸಂದರ್ಭದಲ್ಲಿ ನೇರವಾಗಿ ಬೆಂಬಲಿಸಿದ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ, ಸಾಮರ್ಥ್ಯ ಹೊಂದಿದ್ದ ಡಿಕೆಶಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ದೇವೇಗೌಡರ ನಂತರದ ಪರ್ಯಾಯ ಒಕ್ಕಲಿಗ ಜನಾಂಗದ ಶಕ್ತಿಯಾಗಿ ಬೆಳೆಯುವ ಅವಕಾಶ ತಾವಾಗಿ ಹಾಳು ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತದೆ.

ಹಣ,ಜಾತಿ,ವಯಸ್ಸಿನ ಹುಮ್ಮಸ್ಸು ಹೊಂದಿದ್ದ ಡಿಕೆ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಪಕ್ಷದ ಶಾಸಕರನ್ನು ಅಲಕ್ಷಿಸಿ ಕುಮಾರಸ್ವಾಮಿಗಳ ಬೆನ್ನಿಗೆ ನಿಂತರೆಂಬ ಆಂತರಿಕ ಕೂಗು ಇಮ್ಮಡಿಸಿದೆ.

ಶಾಸಕರ ಮೇಲೆ ನಿಯಂತ್ರಣ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರನ್ನು ಸಂಪೂರ್ಣ ಕಡೆಗಣಿಸಿದರೆ ಪಕ್ಷಕ್ಕೆ ಆಪತ್ತು ತಪ್ಪಿದ್ದಲ್ಲ. ಅಕಸ್ಮಾತ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡದಿದ್ದರೆ? ಮುಂದಿನ ಸಂಕಷ್ಟದ ಬೆಳವಣಿಗೆಗಳನ್ನು ಕಾದು ನೋಡಬೇಕು ಅಷ್ಟೇ!

ನಾಯಕತ್ವದ ಕೊರತೆಯಿಂದ ತೊಳಲಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ತುಂಬ ಗೊಂದಲಕ್ಕೆ ಬಿದ್ದಿದೆ.
ರಾಷ್ಟ್ರೀಯ ನೆಲೆ ಉಳಿಸಿಕೊಳ್ಳಲು ಹರಸಾಹಸ ಪಡುವ ಅನಿವಾರ್ಯತೆ ಇರುವಾಗ ಸೋನಿಯಗಾಂಧಿ ಮತ್ತೆ ಅಧ್ಯಕ್ಷರಾಗಿರುವದೇ ಇದಕ್ಕೆ ಸಾಕ್ಷಿ.

ಕಾಶ್ಮೀರದ ಭಾವನಾತ್ಮಕ ವಿಷಯ ಬಿಜೆಪಿಗೆ ವರವಾಗಿರುವ ಅಬ್ಬರದಲ್ಲಿ ಕಾಂಗ್ರೆಸ್ ಮಂಕಾಗಿರುವುದು ಸಹಜ.
ರಾಜಕೀಯದ ಏರಿಳಿತಗಳನ್ನು ಎಲ್ಲ ಪಕ್ಷಗಳು ಅರಗಿಸಿಕೊಂಡು ಬೆಳೆಯುವುದು ಅನಿವಾರ್ಯ.
Now it is too early to decide anything…

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here