ವಿಶ್ವವಿಖ್ಯಾತ ದಸರಾ ಹಿನ್ನೆಲೆ ಅರಮನೆಗೆ ಹೊಸ ರೀತಿಯಲ್ಲಿ ಬಲ್ಬ್ ಅಳವಡಿಕೆ..?

0
273

ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಇನ್ನೇನು ಕ್ಷಣಗಣನೆ ಆರಂಭಗೊಂಡಿದ್ದು, ಮೈಸೂರು ಜಿಲ್ಲೆ ಭರ್ಜರಿಯಾಗಿ ಸಿದ್ದಗೊಳ್ಳುತ್ತಿದೆ. ಗುರುವಾರದಂದು ದಸರಾಗೆ ಗಜಪಡೆಯ ಆಗಮನವಾಗಿದ್ದು, ಬೆಳ್ಳಗೆ 11 ಗಂಟೆ ಸುಮಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೋಳಲ್ಲು ಅರ್ಜುನ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಕ್ರಮ, ವಿಜಯ, ಲಕ್ಷ್ಮಿ ಮತ್ತು ರೋಹಿತ್ ಸೇರಿದಂತೆ ಒಟ್ಟು 17 ಗಜಪಡೆಗಳು ಮೆರವಣಿಗೆಯಲ್ಲಿ ಹಾಜರಾಗಲಿದೆ.

ಇನ್ನು ದಸರಾ ಪ್ರಯುಕ್ತ ಪ್ರತಿ ವರ್ಷ ಮೈಸೂರಿನ ಮುಖ್ಯ ನಗರಗಳಲ್ಲಿ ಆಯೋಜನೆಗೊಳ್ಳುವ ಆಹಾರ ಮೇಳ, ಪುಸ್ತಕ ಮೇಳ, ಪಂಜಿನ ಕವಾಯತ್ತು, ವಸ್ತು ಪ್ರದರ್ಶನ ಮತ್ತು ದಸರಾ ಮೆರವಣಿಗೆ ಶುರುವಾಗುವ ಮುನ್ನ ಮೈಸೂರಿನ ಬಯಲು ರಂಗಮಂದಿರ, ಮಾನಸ ಗಂಗೋತ್ರಿಯಲ್ಲಿ ಯುವ ದಸರಾ ನಡೆಯುತ್ತದೆ. ಸಿನಿಮಾ ನಟರು ಸೇರಿದಂತೆ ಕೆಲ ಗಣ್ಯ ವ್ಯಕ್ತಿಗಳು ಯುವ ಸಂಭ್ರಮಕ್ಕೆ ಬಂದು ದಸರಾಗೆ ಮತ್ತಷ್ಟು ಮೆರಗು ತರುತ್ತಾರೆ ಎಂದೆ ಹೇಳಬಹುದು.

ಮೈಸೂರಿನ ಆಂಬಾ ವಿಲಾಸ ಅರಮನೆ ನೋಡಲು ಎರಡು ಕಣ್ಣು ಸಾಲದು. ಅದರಲ್ಲೂ ಬಹು ವಿಶೇಷ ಎಂದರೆ ಕತ್ತಲಾದ ಮೇಲೆ ಅರಮನೆ ನೋಡಲು ಬಹಳ ರಮಣಿಯವಾಗಿರುತ್ತದೆ. ಯಾಕೆಂದರೆ ಅರಮನೆ ಸಂಪೂರ್ಣವಾಗಿ ಒಂದು ಲಕ್ಷ ಲೈಟ್ ಬಲ್ಬ್‍ಗಳಿಂದ ಜಗಮಗಿಸುತ್ತಿರುತ್ತದೆ. ಮೈಸೂರಿನ ಅರಮನೆಗೆ ಮರೆಗು ತರುವ ಬಲ್ಬ್‍ಗಳು ಈ ವರ್ಷ ಸರಿಯಾಗಿ ಕೆಲಸ ಮಾಡುತ್ತಿಲ್ಲಾ ಎಂಬುದು ತಿಳಿದುಬಂದಿದ್ದು, ಸುಮಾರು 15000 ದಿಂದ 20,000 ಬಲ್ಬ್‍ಗಳು ಸರಿಯಿಲ್ಲದ ಕಾರಣ, ಅಷ್ಟು ಹಳೆಯ ಬಲ್ಬ್‍ಗಳನ್ನು ಹೊಸ ಬಲ್ಬ್‍ಗಳ ಮೂಲಕ ಬದಲಾಗಿಸಲಾಗುತ್ತಿದೆ.

ಅರಮನೆಗೆ ಎಲ್‍ಇಡಿ ಬಲ್ಬ್‍ಗಳ ಬದಲು ವಿಶೇಷ ಬಲ್ಬ್ ಆಳವಡಿಸಲಾಗಿದೆ, ಯಾಕೆಂದರೆ ಎಲ್‍ಇಡಿ ಬಲ್ಬ್ ಹೆಚ್ಚು ಪ್ರಮಾಣದ ಬೆಳಕನ್ನು ಕೊಡುವದಿಲ್ಲ, ಜೊತೆಗೆ ಹೆಚ್ಚು ವಿದ್ಯುತ್ ಬಳಕೆ ಮಾಡಲಿದೆ ಎಂದು ಅರಮನೆ ಡೆಪ್ಯೂಟಿ ನಿರ್ದೇಶಕರಾದ ಟಿ.ಎಸ್. ಸುಬ್ರಮಣ್ಯ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here