ನೇಪಾಳದೊಂದಿಗೆ ಕರುನಾಡಿಗಿದೆ ವಿಶೇಷ ನಂಟು

0
156

ಭಾರತದ ಹಿಮಾಲಯ ಪರ್ವತಗಳು ಮತ್ತು ಅದರ ತಪ್ಪಲಿನ ಭೂಪ್ರದೇಶ ಎಲ್ಲರಿಗೂ ಅಚ್ಚುಮೆಚ್ಚಿನ ತಾಣ. ಇದೇ ಹಿಮಾಲಯಗಳ ಬುಡದಲ್ಲಿರುವ ಮನೋಹರವಾದ ದೇಶ ನೇಪಾಳ. ಇಲ್ಲಿ ಪ್ರಾಚೀನ ಧರ್ಮಗಳ ಕುರುಹು ಇದ್ದು, ಪ್ರಖ್ಯಾತ ಶಿಖರ ಇರುವುದು ಇಲ್ಲಿಯೇ. ಏಷ್ಯಾ ಖಂಡದ ಹಿಮಾಲಯ ತಪ್ಪಲಿನಲ್ಲಿರುವ ನೇಪಾಳದ ಉತ್ತರಕ್ಕೆ ಹಿಮಪರ್ವತಗಳು ಚಾಚಿಕೊಂಡಿದ್ದರೆ ದಕ್ಷಿಣಕ್ಕೆ ಕೋಡುಗಲ್ಲುಗಳ ಶಿಖರಗಳ ಸಾಲು ನಿಂತಿವೆ. ಇವೆರಡರ ಮಧ್ಯೆ ಫಲವತ್ತಾದ ಭೂಮಿ ಇದೆ. ಇನ್ನು ಭಾರತಕ್ಕೆ ಹರಿದು ಬರುವ ಗಂಗಾ ನದಿ ಹರಿಯುವುದು ಇಲ್ಲಿಯೇ. ಜೊತೆಗೆ ಸಪ್ತಕೋಶಿ, ಸಾಲಿಗಂಡಕಿ ಮತ್ತು ಕರ್ನಾಲಿ ನದಿಗಳು ನೇಪಾಳದಲ್ಲಿ ನೀರಿನ ಮೂಲಗಳಾಗಿವೆ.

ಕ್ರಿಸ್ತ ಪೂರ್ವದಿಂದಲೂ ಭಾರತ ನೇಪಾಳಗಳು ಪರಸ್ಪರ ಸಂಬಂಧವನ್ನು ಹೊಂದಿತ್ತು. ಬೌದ್ಧ ಧರ್ಮ ಪ್ರಚಾರ ನಡೆಸಿದ ಅಶೋಕ ಇಲ್ಲಿ ನಿರ್ಮಿಇಸಿದ ಸ್ತೂಪಗಳು, ಸ್ತಂಭಗಳು ಇಲ್ಲಿವೆ. ಕ್ರಿ. ಪೂ300 ರಲ್ಲಿ ಬೌದ್ಧ ಮತ ಅನುಯಾಯಿಗಳಾದ ಕಿರಾತಿ ದೊರೆಗಳ ಆಳ್ವಿಕೆ ಕೊನೆಗೊಂಡು ಭಾರತೀಯ ಲಿಚ್ಚವಿಗಳು ನೇಪಾಳದಲ್ಲಿ ಆಳ್ವಿಕೆ ಶುರುಮಾಡಿದ್ದರು. 1769 ರವರೆಗೂ ನೇಪಾಳ ಹಿಂದೂ ರಾಷ್ಟ್ರವಾಗಿಯೇ ಇತ್ತು ಎನ್ನಲಾಗಿದೆ, ಮುಂದೆ ಗೂರ್ಖ ರಾಜವಂಶಜರು ಪ್ರವರ್ಧಮಾನಕ್ಕೆ ಬಂದು ತಮ್ಮ ರಾಜ್ಯ ಸ್ಥಾಪಿಸಿದ್ರು.

ಬ್ರಿಟಿಷ್ ವಸಾಹತು ಇಲ್ಲದೆ ಇಲ್ಲಿ ಬ್ರಿಟಿಷರ ಆಶ್ರಯದಲ್ಲಿ ರಾಜಮನೆತನಗಳು ಆಳ್ವಿಕೆ ಆರಂಭಿಸಿದ್ದವು. ಇದಕ್ಕೂ ಮುನ್ನಾ ಈಸ್ಟ್ ಈಂಡಿಯಾ ಕಂಪನಿಯ ವಿರುದ್ಧ ಘರ್ಷಣೆಗಳು ನಡೆದಿದ್ದವು. ಮುಂದೆ ಭಾರತದ ಸ್ವತಂತ್ರ ಚಳವಳಿಯಿಂದ ಸ್ಫೂರ್ತಿಗೊಂಡ ನೇಪಾಳವೂ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿತ್ತು. 1946 ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರ ಹೋರಾಟಗಳು ನಡೆದಿದ್ದವು. ರಾಜ ಪ್ರಭುತ್ವ ಮತ್ತೆ ಸ್ಥಾಪಿಸಲಾಯ್ತು, ಇಲ್ಲಿ ಮುಂದೆ ಮಾವೋವಾದಿ ಕಮ್ಯೂನಿಸ್ಟರ ಹೋರಾಟ ತೀವ್ರವಾಯ್ತು, ಉಗ್ರವಾದ ಪಸರಿಸಿತು, ದೇಶವೇ ಕಂಗಾಲಾಗಿ ಹೋಗಿತ್ತು.

ನೇಪಾಳ ಗೆರಿಲ್ಲಾ ಮದರಿಯ ಯುದ್ಧಗಳನ್ನು ಎದುರಿಸಬೇಕಾಯ್ತು, ರಾಜ ಕುಟುಂಬ ಒಮ್ಮೆಲೆ ಹತ್ಯೆಗಳು ನಡೆದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ದಶಕಗಳ ಕೆಳಗೆ ಇಲ್ಲಿ ರಾಜತ್ವ ಮುಗಿದು ಮಾವೋವಾದಿ ಸರ್ಕಾರ ರಚನೆಯಾಯ್ತು. ನೇಪಾಳ ರಾಜಧಾನಿ ಕಠ್ಮಂಡು ಪ್ರಸಿದ್ಧ ಪ್ರವಾಸಿ ಕ್ಷೇತ್ರ ಇಲ್ಲಿಗೆ ಭಾರತೀಯರು ಹೋಗಿ ಬರುವುದು ಸಾಮಾನ್ಯ ಸಂಗತಿ ಇಲ್ಲಿನ ಪ್ರಮುಖ ದೇವಾಲಯ ‘ಪಶುಪತಿನಾಥ ದೇವಾಲಯ’ದಲ್ಲಿ ಕರ್ನಾಟಕ ಮೂಲದವರು ಆರಾಧಕರು ಎಂದರೆ ನಂಬಲೇ ಬೇಕು. ನೇಪಾಳಕ್ಕೂ ಕರ್ನಾಟಕಕ್ಕೂ ಶತಮಾನಗಳ ಅವಿನಾಭಾವ ಸಂಬಂಧ ಇದೆ ಅನ್ನೊದೇ ವಿಶೇಷ.

LEAVE A REPLY

Please enter your comment!
Please enter your name here