ನಮ್ಮ ಭಾರತ ದೇಶದಲ್ಲಿ ಕೈದಿಗಳನ್ನು ನೇಣು ಹಾಕೋದಕ್ಕೆ ಎಷ್ಟು ಜನ ಇದ್ದಾರೆ ? ಹಾಗೂ ಅವರಿಗೆ ತಿಂಗಳಿಗೆ ಎಷ್ಟು ಸಂಬಳ ಕೊಡ್ತಾರೆ ? ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಕೈದಿಗಳನ್ನು ನೇಣಿಗೆ ಹಾಕುವ ಮುಂಚೆ ಅವರ ಕಿವಿಯಲ್ಲಿ ಒಂದು ಮಾತನ್ನು ಹೇಳ್ತಾರೆ ಅದು ಏನು ? ಈ ಎಲ್ಲ ಮಾಹಿತಿಯನ್ನು ತಿಳಿಸಿಕೊಡ್ತೀವಿ ಬನ್ನಿ..
ಒಬ್ಬ ಕೈದಿಯನ್ನು ನೇಣಿಗೆ ಹಾಕೋದಕ್ಕೆ ಅಂತ ಇರುವ ವ್ಯಕ್ತಿ ನಾ ಬೇರೆ ದೇಶದಲ್ಲಿ ಎಕ್ಸಿಕ್ಯೂಷನರ್ ಅಂತ ಕರೀತಾರೆ ಆದರೆ ನಮ್ಮ ಭಾರತದಲ್ಲಿ ಅವರನ್ನು ಜಲ್ಲಾದ್ ಅಂತ ಕರೀತಾರೆ ಇನ್ನು ಇವರು ಮಾಡುವ ಕೆಲಸ ಪ್ರಪಂಚದಲ್ಲೇ ಅತಿ ಕಷ್ಟಕರವಾದ ಕೆಲಸಗಳಲ್ಲಿ ಒಂದು ಅಂತಾನೇ ಹೇಳಬಹುದು, ಯಾಕೆಂದರೆ ಒಬ್ಬ ವ್ಯಕ್ತಿಯ ಜೀವ ತೆಗೆಯುವುದೆಂದರೆ ಅಷ್ಟು ಸುಲಭದ ಮಾತಲ್ಲ ಇನ್ನೂ ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿಗೆ ಆಗಲಿ ಅಥವಾ ಕೈದಿಗಳಿಗೆ ಆಗಲಿ ಮರಣದಂಡನೆ ಶಿಕ್ಷೆ ತೀರ್ಪು ಕೊಡುವುದು ತುಂಬಾನೇ ಅಪರೂಪ.
ಇನ್ನು ಈ ವಿಚಾರ ನಿಮಗೆ ಗೊತ್ತಿದೆಯೋ ಗೊತ್ತಿಲ್ಲವೋ ಅದೇನೆಂದರೆ ನಮ್ಮ ಭಾರತ ದೇಶದಲ್ಲಿ ಕೈದಿಗಳನ್ನು ನೇಣಿಗೆ ಹಾಕೋದಕ್ಕೆ ಅಂತ ಇರೋದು ಕೇವಲ ಇಬ್ಬರು ಮಾತ್ರ ಇನ್ನೂ ಇವರಿಗೆ ತಿಂಗಳಿಗೆ ಎಷ್ಟು ಸಂಬಳ ಕೊಡ್ತಾರೆ ಅಂತ ಗೊತ್ತಾದ್ರೆ ಅಯ್ಯೋ ಪಾಪ ಅನ್ಸುತ್ತೆ, ಯಾಕಂದ್ರೆ ಇವರಿಗೆ ಪ್ರತಿ ತಿಂಗಳು ಸಂಬಳ ಕೇವಲ 3000 ರೂಪಾಯಿ ಅಷ್ಟೆ ಆದರೆ ಯಾರಾದ್ರೂ ಉಗ್ರಗಾಮಿಗಳನ್ನು ಅಥವಾ ದೊಡ್ಡ ವ್ಯಕ್ತಿಗಳನ್ನು ನೇಣಿಗೆ ಹಾಕುದ್ರೆ ಮಾತ್ರ ಸ್ವಲ್ಪ ಜಾಸ್ತಿ ಹಣವನ್ನು ಸರ್ಕಾರ ಕೊಡುತ್ತೆ.
ಉದಾಹರಣೆಗೆ:-
1) ಇಂದಿರಾ ಗಾಂಧಿಯನ್ನು ಕೊಂದ ಆರೋಪಿಗಳನ್ನು ನೇಣಿಗೆ ಹಾಕಿದಾಗ ಇವರಿಗೆ ಕೊಟ್ಟಿದ್ದು 25000 ರೂಪಾಯಿ ಹಾಗೂ
2) 2008 ರ ಮುಂಬೈ ದಾಳಿಯ ಆರೋಪಿಯಾದ ಅಜ್ಮಲ್ ಕಸಬ್ ನ ಗಲ್ಲಿಗೇರಿಸಿದಾಗ ಇವರಿಗೆ ಕೊಟ್ಟಿದ್ದು 32000 ರೂಪಾಯಿಗಳು.

ಈಗ ಈ ಲೇಖನದ ಮೇನ್ ಟಾಪಿಗ್’ಗೆ ಬರೋಣ ಅದೇನಂದ್ರೆ ಯಾವುದೇ ಆರೋಪಿಯನ್ನು ನೇಣಿಗೆ ಹಾಕೋದಕ್ಕೆ ಮುಂಚೆ ಜಲ್ಲಾದ್’ಗಳು ಅವರ ಕಿವಿಯಲ್ಲಿ ಒಂದು ಮಾತನ್ನು ಹೇಳ್ತಾರೆ. ಅದೇನು ಅಂತ ನಿಮಗೆ ಗೊತ್ತಾ ಒಬ್ಬ ವ್ಯಕ್ತಿಯ ಜೀವ ತೆಗೆಯುವುದು ಅಂದ್ರೆ ಅಷ್ಟು ಸುಲಭ ಅಲ್ಲ ಆದ್ರೆ ಈ ಜಲ್ಲಾದ್’ಗಳ ಕೆಲಸಾನೆ ಕೈದಿಗಳ ಪ್ರಾಣ ತೆಗೆಯುವುದು ಅದಕ್ಕೆ ಅವರಿಗೆ ಈ ಪಾಪ ಪ್ರಜ್ಞೆ ಕಾಡ ಬಾರದು ಅನ್ನುವ ಕಾರಣಕ್ಕೆ ಕೈದಿಗಳ ಕಿವಿಯಲ್ಲಿ ಈ ಮಾತನ್ನು ಹೇಳಿ ಅವರನ್ನು ನೇಣಿಗೆ ಹಾಕ್ತಾರೆ,
ಇಷ್ಟಕ್ಕೂ ಆ ಮಾತುಗಳಾದರೂ ಏನು ಅಂದ್ರೆ ಹಿಂದೂವೊಂಕೋ ರಾಮ್ ರಾಮ್ ಔರ್ ಮುಸ್ಲಿಮೋಕೋ ಸಲಾಂ ಮೆ ಅಪ್ನೆ ಫರ್ಜ್ ಕೆ ಆಗೆ ಮಜುಬೂತರ್ ಮೇ ಆಪ್ ಕೆ ಸತ್ಯಕ್ಕೆ ರಹಾ ಪೇ ಚಲ್’ನೆ ಕ ಕಾಮ್ ನಾ ಕರ್ತ” ಅಂದ್ರೆ “ಹಿಂದೂಗಳಿಗೆ ಮತ್ತೆ ಮುಸ್ಲಿಮರಿಗೆ ನನ್ನ ವಂದನೆಗಳು ನನ್ನ ಕೈಗಳನ್ನು ನನ್ನ ಕೆಲಸದ ಕರ್ತವ್ಯ ಕಟ್ಟಿ ಹಾಕಿದೆ ನಿನಗೆ ಮುಂದಿನ ಜನ್ಮ ಅಂತ ಇದ್ರೆ ನೀನು ಸತ್ಯದ ದಾರಿಯಲ್ಲಿ ನಡೆಯಬೇಕು ಅಂತ ನಾನು ಆಶಿಸ್ತೀನಿ” ಎಂದು ಅವರ ಕಿವಿಯಲ್ಲಿ ಈ ಮಾತುಗಳನ್ನು ಹೇಳಿ ಅವರನ್ನು ನೇಣಿಗೆ ಹಾಕ್ತಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ)