ಒಕ್ಕಲಿಗ ಹೆಣ್ಣು ಮಕ್ಕಳ ಅವಹೇಳನ ವಿವಾದ ಸೃಷ್ಟಿಸಿದ ಗಾಯಕ ನವೀನ್ ಸಜ್ಜು..!

0
675

‘ಬಡ್ಡಿ ಮಗನ್ ಲೈಫು’ ಎಂಬ ಕನ್ನಡ ಚಿತ್ರಕ್ಕಾಗಿ ಗಾಯಕ ನವೀನ್ ಸಜ್ಜು ಹಾಡಿರುವ ಹಾಡು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನ ಸಾಹಿತ್ಯದಲ್ಲಿ ಒಕ್ಕಲಿಗೆ ಹೆಣ್ಣಿ ಮಕ್ಕಳನ್ನು ಅವಹೇಳನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮಧ್ಯೆ ಈ ಹಾಡನ್ನು ಯೂಟ್ಯೂಬ್‍ನಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

“ನವೀನ್ ಸಜ್ಜು ಹಾಡಿರುವ ‘ಏನ್ ಚಂದನ ತಕಾ’ ಹಾಡಿನಲ್ಲಿ ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ, ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯಕ್ಕೆ ಕ್ಷಮೆಯನ್ನು ಕೋರಬೇಕು.
ಕಲಾಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ” ಎಂದು ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಲಿಯ ಮಾಜಿ ಗೌರವ ಕಾರ್ಯದರ್ಶಿ ಬಾ.ಮಾ ಹರೀಶ್ ಟ್ವೀಟ್ ಮಾಡಿದ್ದಾರೆ.

ಇನ್ನು ಹರೀಶ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಗಾಯಕ ನವೀನ್ ಸಜ್ಜು, “ನಾನೊಬ್ಬ ಗಾಯಕ ಮಾತ್ರ. ಸಾಹಿತ್ಯವನ್ನು ಬೇರೊಬ್ಬರು ಬರೆದಿದ್ದಾರೆ, ಸಂಗೀತವನ್ನು ಬೇರೊಬ್ಬರು ನಿರ್ದೇಶಿಸಿದ್ದಾರೆ. ಹಾಡಿನ ಮೂಲಕ ಯಾವುದೇ ಹೆಣ್ಣು ಮಕ್ಕಳ ತೇಜೋವಧೆ ಮಾಡಿಲ್ಲ. ಇನ್ನು ಎಲ್ಲ ಜಾತಿಗಳಲ್ಲೂ ಗೌಡ್ರು ಇರುತ್ತಾರೆ. ಗೌಡ್ರು ಎಂದರೆ, ಯಜಮಾನ, ಮುಖ್ಯಸ್ಥ ಎಂದರ್ಥ. ಹಾಡಿನ ಮೂಲಕ ಯಾರನ್ನು ಅವಮಾನ ಮಾಡುವ ಉದ್ದೇಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here