ಮೋದಿ ಇಸ್ರೊಗೆ ಕಾಲಿಟ್ಟಿದ್ದೇ, ವಿಜ್ಞಾನಿಗಳಿಗೆ ಅಪಶಕುನ ಆಯಿತು..!

0
350

ಭಾರತದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-2 ವಿಫಲವಾಗಲು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯೇ ಕಾರಣ, ಅವರು ಪ್ರಚಾರ ಗಿಟ್ಟಿಸಲು ಬೆಂಗಳೂರಿನ ಬಂದರು, ಮೋದಿ ಇಸ್ರೊ ಕೇಂದ್ರಕ್ಕೆ ಕಾಲಿಟ್ಟದ್ದೇ ತಡ ಇಸ್ರೊ ವಿಜ್ಞಾನಿಗಳಿಗೆ ಅದು ಅಪಶಕುನ ಆಯಿತು. ಹೀಗಾಗಿ ಇಡೀ ಯೋಜನೆ ವಿಫಲವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಎಚ್‍ಡಿಕೆ, ‘ಚಂದ್ರಯಾನ-2’ ಎಂಬ ಯೋಜನೆಯನ್ನು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು 10ರಿಂದ 15 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದರು. ಇನ್ನು ಈ ಯೋಜನೆ ಮೋದಿ ಸರ್ಕಾರದಲ್ಲಿ ಪ್ರಾರಂಭವಾದದ್ದಲ್ಲ. ಚಂದ್ರಯಾನ-2 ಯೋಜನೆಗೆ 2008ರಲ್ಲಿಯೇ ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅನುಮೋದನೆ ನೀಡಿ ಅದೇ ವರ್ಷ ಹಣ ಬಿಡುಗಡೆ ಮಾಡಲಾಗಿತ್ತು.

‘ಚಂದ್ರಯಾನ-2’ ಯೋಜನೆಯ ಯಶಸ್ಸು ಸಲ್ಲಬೇಕಾಗಿರುವುದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ, ಆದರೆ ಅದರ ಶ್ರೇಯಸ್ಸನ್ನೆಲ್ಲ ತಾವೇ ಪಡೆದುಕೊಳ್ಳಲು ಈಗಿನ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದರು. ಮೋದಿ ಅವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟ ಗಳಿಗೆ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಎಂದು ಲೇವಡಿ ಮಾಡಿದರು. ಇನ್ನು ಪ್ರಧಾನಿ ಮೋದಿ ಅವರಿಗೆ ರಾಜ್ಯದ ಜನರಿಗೆ ಹಣ ಕೊಡಲು ಸಮಯವಿಲ್ಲ. ನೆರೆಗೆ ಪರಿಹಾರ ನೀಡಿಲು ಹಣದ ಕೊರತೆ ಇಲ್ಲ. ಆದರು ಸತಾಯಿಸುತ್ತಿದ್ದಾರೆ.

ರಷ್ಯಾ ದೇಶಕ್ಕೆ 2000 ಸಾವಿರ ಕೋಟಿ ಕೊಡುವ ಪ್ರಧಾನಿಗಳಿಗೆ, ನಮ್ಮ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಬಳಿ ನೆರೆ ಪರಿಹಾರದ ಬಗ್ಗೆ ಮಾಹಿತಿಯೇ ಇಲ್ಲ. ಈ ಪರಿಸ್ಥಿತಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೆ ‘ಎಲ್ಲೋಗಿದ್ದೀಯಾ ಕುಮಾರಸ್ವಾಮಿ’ ಎನ್ನುವವರು ಇದೀಗ ಎಲ್ಲೋಗಿದ್ದಾರೆ ಎಂದು ಕಿಡಿಕಾರಿದರು.

LEAVE A REPLY

Please enter your comment!
Please enter your name here