ಸದ್ಯದಲ್ಲೇ ಕನ್ನಡದಲ್ಲಿ ಸೆಟ್ಟೇರಲಿದೆ ನಮೋ ಚಿತ್ರ ! ಹೀರೋ ಯಾರು ಗೊತ್ತೇ ?

0
142

ಹೊಸ ವರ್ಷಕ್ಕೆ ಚಂದನವನಕ್ಕೆ ಲಗ್ಗೆ ಇಡಲು ಹಲವು ಹೊಸ ಚಿತ್ರಗಳು ಕ್ಯೂ ರೂಪದಲ್ಲಿ ನಿಂತಿದೆ. ಈಗ ಅದೇ ಸರತಿಯಲ್ಲಿ ಆ ಹೊಸ ತಂಡದ ಹೊಚ್ಚ-ಹೊಸ ಸಿನಿಮಾ ನಮೋ ಕೂಡ ಒಂದಾಗಿದೆ. ಈಗಾಗಲೇ ಟೈಟಲ್ ಮೂಲಕಾವೇ ಒಂದಷ್ಟು ಕುತೂಹಲವನ್ನು ತಿರಿಸಿರುವ ನಮೋ ಚಿತ್ರದ 2 ಹಾಡುಗಳು ರಿಲೀಸ್ ಆಗಿದ್ದು ಪ್ರೇಕ್ಷಕರನ್ನು ರಂಜಿಸುತ್ತಿದೆ. ಅರೇ ಇದೇನಪ್ಪಾ ಅಂತೀರಾ.

 

 

ಹೌದು, ನಮೋ ಎಂದ ಕೂಡಲೇ ನಮಗೆ ನೆನಪಾಗೋದೇ ಇದು ನರೇಂದ್ರ ಮೋದಿ ಬಯೋಪಿಕ್ ಚಿತ್ರನಾ ಎಂದು. ಆದರೇ ಈ ಚಿತ್ರಕ್ಕೂ ಪ್ರಧಾನಿ ಮೋದಿಗೂ ಯಾವುದೇ ಸಂಬಂಧ ಇಲ್ಲ. ಈ ಚಿತ್ರಕಥೆಯ ಒಟ್ಟಾರೆ ಸಾರಾಂಶ ಎಂದರೇ ಕಡಿಮೆ ಟೈಮ್ನಲ್ಲಿ, ಶಾರ್ಟ್ ಕಟ್ನಲ್ಲಿ ಶ್ರೀಮಂತನಾಗೋಕ್ಕೆ ಹೊರಡೋ ಯುವಕರ ತಂಡದ ಕಥೆ . ಒಟ್ಟಾರೆ ನಮೋ ವಾಕ್ಯದ ಅರ್ಥ ಚಿತ್ರತಂಡದ ಪ್ರಕಾದ ಕತ್ತಲಿನಿಂದ ಬೆಳಕಿನಡೆಗೆ ಎಂಬ ಅರ್ಥ ಹೊಂದಿದೆ.

 

 

ಡಿ ಬೀಟ್ಸ್ ಆಡಿಯೋ ಹಾಡುಗಳು ಬಿಡುಗಡೆಯಾಗಿದ್ದು, ಬೀಚ್ನಲ್ಲಿ ಹಾಡೊ ಪಾರ್ಟಿ ಸಾಂಗ್ ಎಂಜಾಯ್ ದ ಪಾರ್ಟಿ ಅಂತ ಶುರುವಾಗೋ ಈ ಹಾಡಿಗೆ ಸಾಯಿ ಸರ್ವೇಶ್ ಮ್ಯೂಸಿಕ್ ಮಾಡಿದ್ದು, ವಿನೋದ್ ದಯಾಳನ್ ಸಾಹಿತ್ಯ ಬರೆದಿದ್ದಾರೆ. ಇನ್ನೊಂದು ಹಾಡು ಓರೆ ನೋಟ ಬೀರಿ. ಈ ಹಾಡು ಮೆಲೋಡಿ ಸಾಂಗ್ ಆಗಿದ್ದು, ಚಿತ್ರದ ನಾಯಕ ಪುಟ್ಟರಾಜ ಸ್ವಾಮಿ, ನಾಯಕಿ ರಶ್ಮಿತಾ ಮೇಲೆ ಫೋಕಸ್ ಮಾಡಲಾಗಿದೆ. ನಮೋ ಚಿತ್ರಕ್ಕೆ ನಾಯಕ ಪುಟ್ಟರಾಜ ಸ್ವತ: ನಿರ್ದೇಶನ ಮಾಡಿದ್ದಾರೆ. ಈಗಾಗ್ಲೇ ಟೈಟಲ್ ಮೂಲಕವೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿರೋ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

LEAVE A REPLY

Please enter your comment!
Please enter your name here