ನಾಗರ ಪಂಚಮಿ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳು !

0
153

ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವ ವಿಶೇಷ ಹಬ್ಬವೇ ನಾಗರಪಂಚಮಿ ..ಶ್ರಾವಣ ಮಾಸದ, ಶುಕ್ಲ ಪಕ್ಷದ, ಪಂಚಮಿ ದಿನ, ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ ! ನಾಗ ಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ, ಹೆಣ್ಣು ಮಕ್ಕಳ ಹಬ್ಬ, ನಾಗಪ್ಪನಿಗೆ ಹಾಲು ಎರೆದು ಆಚರಿಸುವಂತಹ ಹಬ್ಬ.. ಈ ಹಬ್ಬಕ್ಕೆ ಗರುಡ ಪಂಚಮಿ ಎನ್ನುವಂತಹ ಹೆಸರು ಸಹ ಇದೆ ..

ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆಯನ್ನು ಸಲ್ಲಿಸಲಾಗುತ್ತದೆ..
ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ಮತ್ತು ತಂಬಿಟ್ಟನ್ನು ನಾಗಪ್ಪನಿಗೆ ನೈವೇದ್ಯ ಮಾಡಲಾಗುತ್ತದೆ ..
ಅಣ್ಣ ತಂಗಿಯ ಪ್ರೀತಿ ಸಾರುವ ಈ ಹಬ್ಬದಲ್ಲಿ ಅಕ್ಕ- ತಮ್ಮಂದಿರು ಅಣ್ಣ- ತಂಗಿಯರ ಆಯಸ್ಸು, ಆರೋಗ್ಯ ಮತ್ತು ಸಫಲ ಸುಖವನ್ನು ನೀಡುವಂತೆ ನಾಗ ದೇವತೆಯಲ್ಲಿ ಪ್ರಾರ್ಥಿಸಿ ಕೊಳ್ಳುವ ದಿನವಾಗಿದೆ..
ಹುತ್ತಕ್ಕೆ ಹಾಲೆರೆದು ಹುತ್ತದ ಮಣ್ಣನ್ನು ಹೊಕ್ಕುಳಿಗೆ ಅಥವಾ ಬೆನ್ನಿಗೆ ಹಚ್ಚಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.

ನಾಗದೇವತೆಗಳಿಗೆ ಅನುಗ್ರಹ ಮತ್ತು ನಿಗ್ರಹ ಮಾಡುವಂತಹ ಸಾಮರ್ಥ್ಯ ಇರುವುದರಿಂದ ಪೂಜೆಗೆ ವಿಶೇಷವಾದ ಮಾನ್ಯತೆ ನೀಡಲಾಗಿದೆ ..
ಪೌರಾಣಿಕ ಹಿನ್ನೆಲೆಯ ಪ್ರಕಾರ ಶ್ರೀ ಕೃಷ್ಣನು ಯಮುನಾ ನದಿಯ ಆಳದಲ್ಲಿ ಕಾಳಿಯ ನಾಗನ ಮತನ ಮಾಡಿದ ದಿನ..ಅದೇ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.. ಬ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ ಚೆಂಡು ನದಿಯ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಬಾಲಕೃಷ್ಣನ ಜಾರಿ ನದಿಯಲ್ಲಿ ಬೀಳುತ್ತಾನೆ.. ಯಮುನಾ ನದಿಯಲ್ಲಿ ಕಾಳಿ ಎಂಬ ನಾಗ ವಾಸವಾಗಿದ್ದ,ಬಹಳ ವಿಷಪೂರಿತವಾದ ಸರ್ಪವದು.. ಕೃಷ್ಣನು ನದಿಯಲ್ಲಿ ಬಿದ್ದಾಗ ಆ ನಾಗ ದಾಳಿ ಮಾಡಿದ.. ಆಗ ಕೃಷ್ಣನು ನಾಗನ ವಿರುದ್ಧ ಹೋರಾಟ ಮಾಡುತ್ತಾನೆ ..ಈ ವೇಳೆ ಹಾವಿಗೆ ಕೃಷ್ಣನು ಸಾಮಾನ್ಯವಾದ ಬಾಲಕನಲ್ಲಿ ಎಂದು ಅರಿವಿಗೆ ಬರುತ್ತದೆ.. ಆಗ ನಾಗನು ನನ್ನನ್ನು ಕೊಲ್ಲಬೇಡ ಎಂದು ಕೇಳಿಕೊಳ್ಳುತ್ತಾನೆ ..ಕಾಳಿಯನ್ನು ಕ್ಷಮಿಸಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಹೇಳಿ ಹಾವನ್ನು ಬಿಟ್ಟು ಬಿಡುತ್ತಾನೆ.. ಕೃಷ್ಣನು ಕಾಳಿಯನ್ನು ಮಥನ ಮಾಡಿದ ದಿವಸ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ..

ಇನ್ನೊಂದು ಕತೆಯ ಪ್ರಕಾರ ತನ್ನ ತಂದೆ ಪರಿಚಿತ ರಾಜನ ಸಾವಿಗೆ ಕಾರಣ ಸರ್ಪವೆಂದು ತಿಳಿದು ರಾಜಜನಮೇಜೆಯ್ಯ ಭೂಲೋಕದಲ್ಲಿ ಸರ್ಪ ಸಂಕಲವನ್ನು ನಿರ್ನಾಮ ಮಾಡಲು ಸರ್ಪ ಯಜ್ಞವನ್ನು ಮಾಡಲು ನಿರ್ಧರಿಸುತ್ತಾನೆ.
ಈ ಯಜ್ಞಕ್ಕೆ ಎಲ್ಲ ಸರ್ಪಗಳು ಬಂದು ಬೀಳುತ್ತಾ ಇರುತ್ತವೆ.. ಈ ಸಂದರ್ಭದಲ್ಲಿ ಕೆಲವು ಸರ್ಪಗಳು ಪ್ರಾರ್ಥನೆ ಮಾಡಿಕೊಂಡಾಗ ಅವಸ್ಥಿ ಮುನಿಗಳು ಸರ್ಪ ಯಜ್ಞವನ್ನು ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಳ್ಳುತ್ತಾನೆ.. ರಾಜಾ ವರವನ್ನು ಕೇಳು? ಎಂದು ಹೇಳಿದಾಗ ಆಸ್ತಿಕ ಮುನಿಗಳು ಪ್ರಾಣಿ ಹಿಂಸೆ ಮಹಾಪಾಪ, ನೀವು ಮಾಡುತ್ತಿರುವ ಯಜ್ಞವನ್ನು ನಿಲ್ಲಿಸಿ ಎಂಬ ವರವನ್ನು ಕೇಳಿಕೊಳ್ಳುತ್ತಾನೆ.. ರಾಜನು ಮುನಿಗಳ ಮಾತಿಗೆ ಬೆಲೆ ಕೊಟ್ಟು ಯಜ್ಞ ನಿಲ್ಲಿಸುತ್ತಾನೆ.. ಹೀಗೆ ನಿಲ್ಲಿಸಲಾದ ದಿನವೇ ನಾಗರ ಪಂಚಮಿ ದಿನ ವೆಂದು ಕರೆಯಲಾಗುತ್ತದೆ …

LEAVE A REPLY

Please enter your comment!
Please enter your name here