ಅರಮನೆ ನೋಡಲಷ್ಟೆ ಅಲ್ಲದೆ ಸಾವಿರಾರು ವಿದೇಶಿಗರು ಮೈಸೂರಿಗೆ ಬರೋದೇಕೆ..?

0
194

ಮೈಸೂರು ಅರಮನೆಗಳ ನಗರ, ಪಾರಂಪರಿಕ ನಗರ ಕಡಿಮೆ ಸಂಚಾರ ದಟ್ಟಣೆ ಹಚ್ಚ ಹಸಿರಿನ ಪರಿಸರ ಎಲ್ಲರಿಗೂ ಅಚ್ಚುಮೆಚ್ಚು. ದಕ್ಷಿಣ ಭಾರತವೇ ಅಲ್ಲದೇ ವಿಶ್ವಾದ್ಯಂತ ಮೈಸೂರು ಚಿರಪರಿಚಿತ. ಮೈಸೂರಿಗೆ ದೇಶಿ-ವಿದೇಶಿ ಪ್ರವಾಸಿಗರ ದಂಡೆ ಬರುತ್ತದೆ. ಆದರೆ ಕೇವಲ ಅರಮನೆ ನೋಡಲು ಅಲ್ಲದೇ ಈ ವಿದ್ಯೆ ಕಲಿಯಲೂ ಬರ್ತಾರೆ. ಆ ವಿದ್ಯೆ ಯಾವುದು..? ಗೊತ್ತಾ..

ಸಾಂಸ್ಕøತಿಕ ರಾಜಧಾನಿ ಮೈಸೂರು ವಿಶ್ವ ಭೂಪಟದಲ್ಲಿ ಈ ವಿದ್ಯೆಗೂ ರಾಜಧಾನಿ. ಹೌದು, ‘ಅಷ್ಟಾಂಗ ಯೋಗ ವಿನ್ಯಾಸ’ ಮೈಸೂರಿನ ಅಪೂರ್ವ ಕೊಡುಗೆ. ಇದು ವಿಶ್ವದೆಲ್ಲೆಡೆ ಪ್ರಸಿದ್ದಿಯಲ್ಲಿರುವ ಯೋಗ ಮಾದರಿಗಳಲ್ಲಿ ಮಹತ್ವದ್ದು. ಸರಳ ಮತ್ತು ಬಹು ಪ್ರಯೋಜನಕಾರಿ ಈ ಅಷ್ಟಾಂಗ ಯೋಗ. ನಗರದ ತುಂಬೆಲ್ಲಾ ಯೋಗಶಾಲೆಗಳು ಆಸಕ್ತರಿಗೆ ತೆರೆದಿವೆ. ಪ್ರವಾಸಿಗರ ಊರಾದ ಕಾರಣ ವಿದೇಶಿಗರು ಹೆಚ್ಚು ಹೆಚ್ಚು ಆಸಕ್ತರಾಗಿ ‘ಅಷ್ಟಾಂಗ ಯೋಗ’ ಅಭ್ಯಾಸಕ್ಕೆ ಮೈಸೂರಿಗೆ ಆಗಮಿಸುತ್ತಾರೆ.

ಇಲ್ಲಿನ ಯೋಗ ಪರಂಪರೆ ಶತಶತಮಾನಗಳದ್ದಾಗಿದೆ. ಟಿ.ಕೃಷ್ಣಮಾಚಾರ್ಯ ಮೊದಲ ಯೋಗ ಗುರುಗಳಾಗಿದ್ದರೇ ಅವರ ಶಿಷ್ಯಂದಿರಾಗಿ ಬಂದವರೇ ಪಟ್ಟಾಭಿ ಜೋಯಿಸ್ ಮತ್ತು ಬಿಕೆಎಸ್ ಅಯ್ಯಾಂಗಾರ್. ಇವರುಗಳು ಅಷ್ಟಾಂಗ ಯೋಗವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದವರು.

ಯದುವಂಶ ಮೈಸೂರಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿತ್ತು, ಯೋಗ ಪ್ರಚಾರ ಮತ್ತು ಯೋಗ ಪ್ರೋತ್ಸಾಹವೂ ಇವರಿಂದ ದೊರಕಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿಯೇ ಯೋಗ ಶಾಲೆ ಆರಂಭವಾಗಿತ್ತು. ಇಂದು ಮೈಸೂರು ವಿಶ್ವದಲ್ಲೇ ಅತಿಹೆಚ್ಚು ಯೋಗ ಕೇಂದೆಗಳನ್ನು ಹೊಂದಿರುವ ನಗರೂ ಆಗಿದೆ. ನಗರದ ವಿವಿಧ ಬಡಾವನೆಗಲ್ಲಿಒ ಯೋಗ ಕೇಂದ್ರಗಳು ನಿರಂತರ ಯೋಗ ತರಬೇvತಿ ನೀಡುತ್ತಿದ್ದರೆ, ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಪ್ರವಾಸಿಗರ ನಗರಿ ಮೈಸೂರು ಯೋಗಕ್ಕೆ ಉತ್ತಮ ತಾಣ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಮೈಸೂರಿನ ಅಹ್ಲಾದಕರ ವಾತಾವರಣ, ಚಾಮುಂಡಿ ಬೆಟ್ಟದ ಹಸಿರಿನ ಪೂರಕ ವಾತಾವರಣ. ಉತ್ತಮ ಸಾರಿಗೆ ಸಂಪರ್ಕ ಹಾಗೂ ಜಂಜಾಟವಿಲ್ಲದ ವಾತಾವರಣದಲ್ಲಿ ಯೋಗ ಕಲಿಕೆ ಪ್ರಶಸ್ತವಾಗಿರುತ್ತದೆ. ಇದೇ ಕಾರಣಕ್ಕೆ ವಿದೇಶಿಗರು ಮತ್ತು ದೇಶಿಯ ಯೋಗಾಸಕ್ತರರ ಮೊದಲ ಆಯ್ಕೆ ಮೈಸೂರು. ನುರಿತ ಯೋಗಪಟುಗಳ ಶಿಕ್ಷಣ ಮತ್ತು ವಾಸಕ್ಕೆ ಯೋಗ್ಯ ವಾತವರಣ ಇರುವುದರಿಂದಲೇ ಮೈಸೂರಿನಲ್ಲಿ ವಿದೇಶಿಗರು ದೀರ್ಘ ಕಾಲ ನೆಲಸುತ್ತಾರೆ, ಅಂಗಸಾಧನೆ ಮಾಡುತ್ತಾರೆ.

LEAVE A REPLY

Please enter your comment!
Please enter your name here