ಬೆಂಗಳೂರು: ಕೆ ಸೆಟ್ ತಾತ್ಕಾಲಿಕ ಕೀ ಉತ್ತರಗಳನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ್ದು, ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದ ಸುಮಾರು 30 ಕೀ ಉತ್ತರಗಳು ತಪ್ಪಾಗಿದೆ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ನಡೆದ ಕೆಸೆಟ್ (ಕರ್ನಾಟಕ ಸ್ಟೆಟ್ ಎಲಿಜಬೆತ್ ಟೆಸ್ಟ್) ಪರೀಕ್ಷೆಯ ಕೀ ಉತ್ತರಗಳನ್ನು ಕೆಸೆಟ್ ಸಂಸ್ಥೆ ಬಿಡುಗಡೆ ಮಾಡಿದೆ. ಆದರೆ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಕೀ ಉತ್ತರಗಳಲ್ಲಿ ಸರಿಸುಮಾರು 30 ಪ್ರಶ್ನೆಗಳ ಕೀ ಉತ್ತರ ತಪ್ಪಾಗಿದ್ದು ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದಾರೆ.. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ್ದರು ಸಹ ಒಂದು ಪ್ರಶ್ನೆಗೆ 1000ರೂಪಾಯಿ ನಿಗದಿ ಮಾಡಿದೆ. ಅಂದರೆ 30ಸಾವಿರ ರೂಪಾಯಿ ನೀಡಿ ಆಕ್ಷೇಪಣೆ ಸಲ್ಲಿಸಬೇಕಾಗಿದೆ.
ಈಗಾಗಲೇ ಕರೋನಾದ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಭ್ಯರ್ಥಿಗಳು ಅಷ್ಟು ದೊಡ್ಡ ಮೊತ್ತವನ್ನು ಹೇಗೆ ಭರಿಸಲು ಸಾಧ್ಯ? ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಬಹುತೇಕ ಪ್ರಶ್ನೆಗಳು ಬಹುಶಿಸ್ತಿನ ಮತ್ತು ಪ್ರಚಲಿತ ವಿದ್ಯಮಾನದ ಆಧಾರದಿಂದ ಆಯ್ಕೆಮಾಡಿದ್ದು ಅವುಗಳ ಉತ್ತರ ಯಾವುದೇ ಪುಸ್ತಕದಲ್ಲಿ ಮುದ್ರಣವಾಗಿರುವುದಿಲ್ಲ. ಇದನ್ನು ಗಮನಿಸಿ ಕೆಸೆಟ್ ಸಂಸ್ಥೆ ಕೀ ಉತ್ತರಗಳ ಮರು ಪರಿಶೀಲಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ. ಇಲ್ಲವಾದರೆ ಅರ್ಹ ಅಭ್ಯರ್ಥಿಗಳ ಬದಲು ಅನರ್ಹರ ಅಭ್ಯರ್ಥಿಗಳು ಅರ್ಹತೆ ಪಡೆಯಲಿದ್ದಾರೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಇತಿಹಾಸವನ್ನು ತಿರುಚುವ ಮತ್ತು ಮರು ಸೃಷ್ಟಿಸುವ ಆತಂಕಕ್ಕೆ ದೂಡಿರುವ ಕೆಸೆಟ್ ಕೀ ಉತ್ತರಗಳು.
ತಪ್ಪು ತಪ್ಪಾದ ಕೀ ಉತ್ತರಗಳನ್ನು ಬಿಡುಗಡೆ ಮಾಡಿ, ತಪ್ಪಿದಲ್ಲಿ ₹1000ನೀಡಿ ಆಕ್ಷೇಪಣೆ ಸಲ್ಲಿಸಿ. ಆಕ್ಷೇಪಣೆ ಸಲ್ಲಿಕೆ ಆಗದಿದ್ದರೆ ಇದೇ ಕೀ ಉತ್ತರಗಳನ್ನು ಅಂತಿಮಗೊಳಿಸಲಾಗುವುದು ಎಂದು ಕೆಸೆಟ್ ಸಂಸ್ಥೆ ಹೇಳಿದೆ. ಕೊರೊನಾ ಸಂದರ್ಭದಲ್ಲಿ ಅಷ್ಟೊಂದು ಹಣವನ್ನು ಪಾವತಿಸಿ ಆಕ್ಷೇಪಣೆ ಸಲ್ಲಿಸಲಾಗದೆ ಅಭ್ಯರ್ಥಿಗಳು ಏನಾದರೂ ಹಿಂದಕ್ಕೆ ಸರಿದರೆ, ಬಹುಶಃ ಈ ಕೀ ಉತ್ತರಗಳು ಹೊಸದಾದ ಇತಿಹಾಸವನ್ನು ಸೃಷ್ಟಿಸಲಿದೆ..
ಅಂಥಾ ಬದಲಾವಣೆಗಳು ಏನ್ ಆಗ್ಬಹುದು ಅಂತ ನೋಡೋದಾದ್ರೆ… ಉದಾಹರಣೆಗೆ
1. ಬುಲ್ಬುಲ್ ಕ್ಯಾನ್ ಸಿಂಗ್, ಮಲ್ಯಾಳಮ್ ಭಾಷ ಚಿತ್ರವಾಗೀಯೂ, ಸುದಾನಿ ಫ್ರಮ್ ನೈಜೀರಿಯಾ, ಅಸ್ಸಾಂ ಭಾಷ ಚಿತ್ರವಾಗೀಯೂ ಬದಲಾಗಲಿದೆ.
2. ಗಾಂಧಿ ಪ್ರಾರಂಭಿಸಿದ ಗುಜರಾತಿ ಭಾಷೆಯ ನವಜೀವನ್ ಪತ್ರಿಕೆಗೂ ಗಾಂಧಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಾಗುತ್ತದೆ.
3. ಮನ್ಸೂರೆ ನಿರ್ದೇಶನದ ನಾತಿಚರಾಮಿ ಬೇರೆಯವರ ಹೆಸರಿಗೆ ರೆಜಿಸ್ಟರಾಗುತ್ತದೆ.
4. ನುಡಿ ತಂತ್ರಾಂಶ ದೇಶಾದ್ಯಂತ ಬಳಕೆಯಾಗುವ ಬಹು ಭಾಷಾ ತಂತ್ರಾಂಶವಾಗಲಿದೆ.
5. ಕನ್ನಡ ಪತ್ರಿಕೋದ್ಯಮದ ಉಗಮ-ಆಗಮನಗಳೆ ಬದಲಾಗುವ ಅತೀದೊಡ್ಡ ಅಪರಾಧ ಜರುಗಲಿದೆ. ಹೇಳುತ್ತಾ ಸಾಗಿದರೆ ಇನ್ನು 30 ತಪ್ಪುಗಳು ಸಿಗಲಿವೆ.
ಇನ್ನೊಂದು ವಿಷಯ ಇಲ್ಲಿ, ಗ್ರೇಸ್ ಮಾರ್ಕ್ಸ್ ನೀಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ತಪ್ಪಾಗಿರುವುದು ಪ್ರಶ್ನೇಯೂ ಅಲ್ಲ ಹಾಗೂ ನೀಡಲಾಗಿರುವ 4ಆಯ್ಕೆಗಳೂ ಅಲ್ಲ. ತಪ್ಪಾಗಿರುವುದು ಬರೀ ಕೀ ಉತ್ತರಗಳು ಅಷ್ಟೇ, ಅದನ್ನು ಸರಿ ಪಡಿಸಿ ಮತ್ತೊಮ್ಮೆ ಪ್ರಕಟಿಸಿ ಎಂಬುದು ಅಭ್ಯರ್ಥಿಗಳ ಅಳಲು.