ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ನನ್ನ ತೀರ ಆಕ್ಷೇಪಣೆ ಇದೆ. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ತೋರಿಸುತ್ತಿದೆ. ನಮ್ಮ ರೈತರ ಬಗ್ಗೆ ಯಾವುದೇ ಕಾಳಜಿಯು ಇಲ್ಲ, ರೈತರ ಪರ ನಿಲ್ಲುವ ಸರ್ಕಾರ ಅಲ್ಲವೇ ಅಲ್ಲ.! ಪ್ರವಾಹ ಬಂದು 20 ದಿನಗಳ ಮೇಲೆ ಆಯ್ತು, ಆದರೂ ಕೇಂದ್ರ ಸರ್ಕಾರದಿಂದ ಒಂದು ಪೈಸೆ ಕೂಡ ಬಿಡುಗಡೆಯಾಗಿಲ್ಲ. ನೀವು ಕೇಂದ್ರ ಸರ್ಕಾರ 1,020 ಕೋಟಿ ಬಿಡುಗಡೆ ಮಾಡಿದೆ ಅಂದುಕೊಂಡರೆ ಅದು ತಪ್ಪು.

ಯಾಕೆಂದರೆ ಅದು ಬಿಡುಗಡೆ ಆಗಿರುವುದು ಈಗಿನ ಪ್ರವಾಹ ಪರಿಹಾರಕ್ಕಲ್ಲ, ಫೆಬ್ರವರಿ ತಿಂಗಳಲ್ಲಿ ಹಿಂದೆ ನೀಡಿದ್ದ ಮೆಮೊರಾಂಡಮ್ಗೆ ನೀಡಿದ್ದ ಹಣ, ಬರದ ಪರಿಸ್ಥಿತಿಗೆ ಅಲ್ಲ ಎಂಬುದು ನೀವು ತಿಳಿದುಕೊಳ್ಳಬೇಕಾಗಿದೆ. ಪ್ರವಾಹ ಪರಿಹಾರಕ್ಕೆ ಒಂದು ರೂಪಾಯಿ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ. ಸೆಂಟ್ರಲ್ ಟೀಂಮ್ ಇಗ ಅಧಿಕಾರಕ್ಕೆ ಬಂದಿದ್ದು, ಅವರು ಅಧ್ಯಯನ ಮಾಡಿ ಅದನ್ನು ಸರ್ಕಾರಕ್ಕೆ ಕಳುಹಿಸಿ, ಒಂದೊಂದು ವಿಭಾಗಕ್ಕೂ ಹೋಗಿ ಆನಂತರ ಹಣ ಬಿಡುಗಡೆ ಮಾಡುತ್ತಾರೆ. ಈ ವರ್ಷದಂತೆ 2005, 2009ರಲ್ಲಿ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಪ್ರಧಾನಿ ಮೋದಿ ಅವರು ಈ ಪರಿಸ್ಥಿತಿಗಳನ್ನು ಗಮನಿಸಿಲ್ಲ, ಪ್ರವಾಹದಿಂದ ಉಂಟಾದ ನಷ್ಟಗಳನ್ನು ವೈಮಾನಿಕ ಸಮೀಕ್ಷೆ ಮುಖಾಂತರದಲ್ಲಾದರು ಮಾಡಬಹುದಾಗಿತ್ತು,ಅದನ್ನು ಕೂಡ ಮಾಡಲಿಲ್ಲ.

ಮೋದಿ ಅವರು ವಿದೇಶ ಪ್ರವಾಸ ಮಾಡುತ್ತಾರೆ. ಅದಕ್ಕೆ ಅವರ ಬಳಿ ಪ್ರತ್ಯೇಕ ಸಮಯವಿದೆ, ಅದರೆ ಪ್ರವಾಹ ಪರಿಸ್ಥಿತಿ ಗಮನಿಸಲು ಸಮಯವಿಲ್ಲವಾ.? ಅವರು ವಿದೇಶ ಪ್ರವಾಸ ಕೈಗೊಳ್ಳಲ್ಲಿ ಅದರ ಬಗ್ಗೆ ನನಗೆ ಯಾವ ರೀತಿ ಬೇಸರವಿಲ್ಲ. ನಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು, ಅನಂತರ ಬೇರೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲ್ಲಿ. ಈ ಸರ್ಕಾರಕ್ಕೆ ನಮ್ಮ ರೈತರು, ಬಡವರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲ, ಕೇವಲ ಮಾತಿಗಷ್ಟೇ ಎಂದು ಮಾದ್ಯಮ ಮಿತ್ರರಿಗೆ ತಿಳಿಸಿದ್ದಾರೆ.