ಪೈಲ್ವಾನ್ ಸಿನಿಮಾ ತೆಗಳಲು ಹೋಗಿ ತಮ್ಮ ಸಿನಿಮಾಗೆ ಬೈದ ಸಂಗೀತ ನಿರ್ದೇಶಕ!!

0
262

ಬಹು ನಿರೀಕ್ಷೆ ಮೂಡಿಸಿದ್ದ ಪೈಲ್ವಾನ್ ಸಿನಿಮಾ ಮೊನ್ನೆಯಷ್ಟೆ ಪಂಚ ಬಾಷೆಗಳಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಮೊದಲ ದಿನ ಸ್ಯಾಂಡಲ್‍ವುಡ್ ಗಲ್ಲಾಪೆಟ್ಟಿಗೆಯಲ್ಲಿ 10 ರಿಂದ 15 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ಸಿನಿಮಾ ತಜ್ಞರ ಲೆಕ್ಕಾಚಾರ. ಇನ್ನು ಕೆಲ ಸಿನಿ ಪ್ರೇಕ್ಷಕರಿಗೆ ಸಿನಿಮಾ ನಿರೀಕ್ಷೆ ಮೂಡಿಸಿದಷ್ಟು ಇಷ್ಟವಾಗಿಲ್ಲ. ಆದರೆ ಸಿನಿಮಾದಲ್ಲಿ ಸುದೀಪ್ ಅವರ ಅಭಿನಯ ಮತ್ತು ಕೆಲವು ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಈ ಮದ್ಯೆ `ಐ ಲವ್ ಯೂ’ ಚಿತ್ರದ ಸಂಗೀತ ನಿರ್ದೇಶಕರು ಪೈಲ್ವಾನ್ ಚಿತ್ರವನ್ನು ತೆಗಳುವ ಭರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದ್ದ ಚಿತ್ರಕ್ಕೆ ಬೈದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ದೊರಕಿತ್ತು. ಕಿರಣ್ ತೋಟಂಬೈಲೆ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ನೆನ್ನೆಯಷ್ಟೆ ಪೈಲ್ವಾನ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದು, ಸಿನಿಮಾ ವೀಕ್ಷಣೆ ಮಾಡಿದ ನಂತರ ತಮ್ಮ ಪೇಸ್‍ಬುಕ್ ಖಾತೆಯಲ್ಲಿ ಪೈಲ್ವಾನ್ ನೋಡಿ ಶಾಕ್ ಅಲ್ಲಿದ್ದೇವೆ, ಕೃಷ್ಣ ಅವರೇ ಯಾಕೆ ಸುಮ್ನೆ ಇಂತ ಸಿನಿಮಾ ಮಾಡಿ ಸುದೀಪ್ ಅವರನ್ನ ಇನ್ಸಲ್ಟ್ ಮಾಡ್ತೀರಾ’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಕಂಡ ಕಿಚ್ಚ ಅಭಿಮಾನಿಗಳು ನೀವು ಸಂಗೀತ ಸಂಯೋಜನೆ ಮಾಡಿದ್ದ ಸಿನಿಮಾ ಅತೀ ಕೆಟ್ಟದಾಗಿತ್ತು’ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಿರಣ್ ಅವರು ಐ ಲವ್ ಯೂ’ ಚಿತ್ರ ಚೆನ್ನಾಗಿದೆ ಎಂದು ಹೇಳಿದವರಾರು? ನಾನು ಸಂಗೀತ ಸಂಯೋಜನೆ ಮಾಡಿದ್ದ ಸಿನಿಮಾವೇ ನನಗೆ ಇಷ್ಟವಾಗಿಲ್ಲ. ಅದರಂತೆಯೇ ಪೈಲ್ವಾನ್ ಕೂಡ’ ಎಂದಿದ್ದಾರೆ ಮತ್ತು ಡಬ್ಬ ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಾರಿ ಚರ್ಚೆ ನಡೆಯುತ್ತಿದ್ದು, ತಾವು ಕೆಲಸ ಮಾಡಿದ ಸಿನಿಮಾ ಮೇಲೆ ಹೆಮ್ಮೆ ಇಲ್ಲ.! ಅಂದಮೇಲೆ ಬೇರೆ ಯಾವ ಸಿನಿಮಾಗಳಲ್ಲಿ ಕೆಲಸ ಮಾಡಲು ಇವರಿಗೆ ಅವಕಾಶ ಸಿಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ

LEAVE A REPLY

Please enter your comment!
Please enter your name here