ಕೊಲೆ ಮಾಡಿ ಶವದೊಂದಿಗೆ 3 ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಮಾಡಿದ ವಿಕೃತ ಕಾಮುಕ.!

0
246

ನಮ್ಮ ದೇಶದಲ್ಲಿ ಪ್ರತಿ ಆರು ನಿಮಿಷಕ್ಕೊಮ್ಮೆ ಅತ್ಯಾಚಾರ ಪ್ರಕರಣ ನಡೆಯುತ್ತಲೇ ಇದ್ದರೂ ಸರಿಯಾದ ಕಾನೂನು ಮಾತ್ರ ರೂಪಿತವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಇದಕ್ಕೆ ಪೂರಕವೆಂಬಂತೆ ಕಳೆದ ವಾರವಷ್ಟೇ ಹೈದರಾಬಾದ್ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಇದು ಮಾಸುವ ಮುನ್ನವೇ ಪುನಃ ಅದೇ ರೀತಿಯ ಪೈಶಾಚಿಕ ಕೃತ್ಯವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಇಂತಹ ವಿಕೃತರು ಇರುತ್ತಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಗಂಡ, ಹೆಂಡತಿ, ಮಗುವನ್ನು ಕೊಂದ ಹಂತಕ ತಾನು ಕೊಂದ ಮಹಿಳೆಯ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

 

ಹೌದು, ಉತ್ತರ ಪ್ರದೇಶದ ಅಜಂಗರ್ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪಿ 38 ವರ್ಷದ ನಾಸಿರುದ್ದೀನ್ ಎಂಬ ಆರೋಪಿಯನ್ನು ಈಗಾಗಲೇ ಖಾಕಿಪಡೆ ಬಂಧಿಸಿದೆ. ಗಂಡ-ಹೆಂಡತಿ ಮತ್ತು ಮಗುವನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದೆ.
ಎಲ್ಲರೂ ರಾತ್ರಿ ಮಲಗಿದ್ದಾಗ ಏಕಾಏಕಿ ಮನೆಗೆ ನುಗ್ಗಿ 30 ವರ್ಷದ ಮಹಿಳೆ ಹಾಗೂ ಆಕೆಯ ಗಂಡ ಮತ್ತು ಹಸುಗೂಸು 4 ತಿಂಗಳ ಮಗನನ್ನು ಕೊಲೆ ಮಾಡಿದ್ದ. ಅಲ್ಲದೇ ಪಾಪಿ ನಾಸಿರುದ್ದೀನ್ ನಂತರ ಆ ಮಹಿಳೆಯ ಶವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ.

 

ಅಷ್ಟೇ ಅಲ್ಲದೆ, ಪಕ್ಕದ ರೂಮಿನಲ್ಲಿ ಮಲಗಿದ್ದ ಆ ದಂಪತಿಯ 10 ವರ್ಷದ ಮಗಳ ಮೇಲೂ ಅತ್ಯಾಚಾರವೆಸಗಿದ್ದ. ನಂತರ ಕಲ್ಲಿನಿಂದ ಆ 10 ವರ್ಷದ ಹುಡುಗಿ ಮತ್ತು ಅವಳ ತಮ್ಮನ ತಲೆಗೆ ಹೊಡೆದು ಪರಾರಿಯಾಗಿದ್ದ. ಸದ್ಯಕ್ಕೆ ಆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ದೇಶವೇ ತಲೆ ತಗ್ಗಿಸುವಂತಹ ಇಂತಹ ವಿಕೃತ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಜಂಗರ್ ಎಸ್ಪಿ ತ್ರಿವೇಣಿ ಸಿಂಗ್, ಪಾಪಿಯು ಮಹಿಳೆಯ ಮೃತದೇಹದೊಂದಿಗೆ 3 ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ್ದ ನಾಸಿರುದ್ದೀನ್ ತನ್ನ ಮೊಬೈಲ್ನಲ್ಲಿ ಅದರ ವಿಡಿಯೋ ಸಹ ಮಾಡಿಕೊಂಡಿದ್ದ.

 

ಮನೆಗೆ ಹೋದ ನಂತರ ಆ ವಿಡಿಯೋವನ್ನು ತನ್ನ ಅತ್ತಿಗೆಗೆ ತೋರಿಸಿದ್ದ. ಆ ವಿಡಿಯೋ ನೋಡಿದ ಆತನ ಅತ್ತಿಗೆ ಆಘಾತಗೊಂಡಿದ್ದಳು. ಈ ಕೃತ್ಯ ಎಸಗುವ ಮೊದಲು ಡ್ರಗ್ಸ್ ಸೇವಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಹಾಗೇ, ತಾನು ಅತ್ಯಾಚಾರ ನಡೆಸಿದ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂದು ಕಾಂಡೋಮ್ಗಳನ್ನು ತೆಗೆದುಕೊಂಡು ಹೋಗಿದ್ದ. ಹತ್ಯೆ ನಡೆಸಲು ಚಾಕು ಮತ್ತು ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿದ್ದರ ಬಗ್ಗೆ ಆತ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here