ನಮ್ಮ ಒಂದು ಪರ್ಸ್ ಕಳ್ಳತನ ಆದರೆ ಜೀವ ಹೋದಂತಾಗುತ್ತದೆ,
ಇನ್ನೂ ಜೀವನ ಪೂರ್ತಿ ಕಷ್ಟಪಟ್ಟು ದುಡಿದು ಕಟ್ಟಿದ ಕನಸಿನ ಮನೆ ಧಬ್ ಎಂದು ಕಣ್ಣೆದುರೇ ಬಿದ್ದರೆ ಕಟ್ಟಿದ ಜೀವಕ್ಕೆ ಹೇಗಾಗಿರಬಾರದು!
ಮನೆ,ವಸ್ತುಗಳು ಕೇವಲ ಆಸ್ತಿಯಲ್ಲ ಅದರ ಜೊತೆಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ಬಂದ ಜನರು ಅದನ್ನೆಲ್ಲಾ ಬಿಟ್ಟು ಜೀವ ಉಳಿದರೆ ಸಾಕು ಎಂದು ಬರುವುದನ್ನ ನೋಡಿದರೆ ಜೀವ ಝಲ್ ಎನ್ನುತ್ತೆ.
ಮಕ್ಕಳಂತೆ ಬೆಳಸಿದ ಬೆಳೆ ನೀರಿನಲ್ಲಿ ಮುಳುಗಿರುವುದನ್ನ ನೋಡಲು ರೈತನಿಗೆ ಎಷ್ಟು ಕಷ್ಟ ಆಗಿರಬಹುದು ಎಂದು ಊಹಿಸಲೂ ಅಸಾಧ್ಯ.
ಪ್ರೀತಿಯಿಂದ ಸಾಕಿದ ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನ ನೋಡಿದರೆ ಹೃದಯ ಒಡೆದು ಹೋಗುತ್ತದೆ,
ನಾವು ನೀವು ನೋವನ್ನಾದರು ಹೇಳಬಹುದು ಆದರೆ ಪಾಪ ಮೂಕ ಪ್ರಾಣಿಗಳ ಗತಿ ಏನು!
ನೋಡ ನೋಡುತ್ತಲೇ ಊರಿಗೆ ಊರೇ ಕೊಚ್ಚಿ ಹೋಗಿರುವುದನ್ನ ಅರಗಿಸಿಕೊಳ್ಳಲಾಗದೇ ತತ್ತರಿಸಿ ಹೋಗಿರುವ ಸಂತ್ರಸ್ತರಿಗೆ ಆಹಾರ,ವಸತಿ ಜೊತೆಗೆ ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ,ಹೆದರಬೇಡಿ ಎಂದು ಧೈರ್ಯತುಂಬುವವರ ಅವಶ್ಯಕತೆಯೂ ಇದೆ.
ತಮ್ಮ ಕೈಲಾದಷ್ಟು ಸಹಾಯ ಮಾಡುವವರನ್ನ ನೋಡಿದರೆ ಮಾನವೀಯತೆ ಇನ್ನೂ ಉಳಿದಿದೆ ಎಂದು ಸಂತೋಷವಾಗುತ್ತದೆ.
ತಮ್ಮ ಜೀವವನ್ನೆ ಒತ್ತೆ ಇಟ್ಟು ಜನರನ್ನು ಕಾಪಾಡುತ್ತಿರುವ NDRF ಹಾಗೂ ರಕ್ಷಣಾ ಸೇನಾ ಸಿಬ್ಬಂದಿಗೆ ಎಷ್ಟು Thanks ಹೇಳಿದರು ಕಡಿಮೆಯೇ.
ಅವಶ್ಯಕತೆಗೂ ಮೀರಿ ಹಣ,ಆಸ್ತಿ ಎಂದು ಬೆನ್ನಟ್ಟಿ ಮಾನವೀಯ ಸಂಬಂಧಗಳು ಮುರಿದು ಹೋಗುತ್ತಿರುವಾಗ ಇಂತಹ ಪ್ರಕೃತಿ ವಿಕೋಪಕ್ಕೆ ತುತ್ತಾದ ಜೀವಗಳನ್ನ ನೋಡಿದರೆ ಎಲ್ಲವೂ ವಿಧಿಯಾಟ ಅನಿಸುತ್ತದೆ.
ಎಲ್ಲವನ್ನೂ ಕಳೆದುಕೊಂಡು ಕುಸಿದು ಹೋಗಿರುವ ಸಂತ್ರಸ್ತರಿಗೆ ಬಂದಿರುವ ಕಷ್ಟ, ನೋವುಗಳು ಬೇಗ ದೂರವಾಗಲಿ ಎಂದು ಪ್ರಾರ್ಥಿಸೋಣ…
#ಮುನ್ನುಡಿ_ಯಾಪಲಪರವಿ