” ಮುನಿರತ್ನಗೆ ಕಾಂಗ್ರೆಸ್ ತಾಯಿ ಮರೆತು ಹೋಗಿದೆ… ರಕ್ತ ಬದಲಾಗಿದೆ”..!

0
67

ಬೆಂಗಳೂರು: ನಿರ್ಮಾಪಕರಿಗೆ ಕಣ್ಣೀರು ಹಾಕೋದು ಗೊತ್ತು. ಹಾಕ್ಸೋದು ಇನ್ನೂ ಚೆನ್ನಾಗಿ ಗೊತ್ತಿದೆ.ಯಾವ್ಯಾವ ಟೈಂಲಿ ಯಾವ್ಯಾವ ಸೀನ್, ಯಾವಾಗ ಕಟ್ ಮಾಡ್ಬೇಕು, ಯಾವಾಗ್ ಜೋಡಿಸಬೇಕು ಅನ್ನೋದು ಅವರಿಗೆ ಗೊತ್ತಿದೆ. ಮುನಿರತ್ನಾಗೆ ಕಾಂಗ್ರೆಸ್ ತಾಯಿ ಮರೆತು, ರಕ್ತ ಬದಲಾಗಿದೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯ ಮಾಡಿದರು.

ಆರ್ ಆರ್ ನಗರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಮತ ಹಾಕುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿದ ಅವರು, ನಿರ್ಮಾಪಕರಿಗೆ ಕಣ್ಣೀರು ಹಾಕೋದು ಗೊತ್ತು. ಹಾಕ್ಸೋದು ಇನ್ನೂ ಚೆನ್ನಾಗಿ ಗೊತ್ತಿದೆ.ಯಾವ್ಯಾವ ಟೈಂಲಿ ಯಾವ್ಯಾವ ಸೀನ್, ಯಾವಾಗ ಕಟ್ ಮಾಡ್ಬೇಕು, ಯಾವಾಗ್ ಜೋಡಿಸಬೇಕು ಅನ್ನೋದು ಅವರಿಗೆ ಗೊತ್ತಿದೆ. ಮುನಿರತ್ನ ಅವರಿಗೆ ಸಾಕಷ್ಟು ಅನುಭವ ಇದೆ. ಈಗ ಡ್ರಾಮಾ ಶುರು ಮಾಡಿದ್ದಾರೆ. ಹೊಸ ಅವತಾರ ಶುರು ಮಾಡಿದ್ದಾರೆ. ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಇದೇ ಮುನಿರತ್ನ. ಇಂದು ಯಾಕ್ ಅವರಿಗೆ ಮರೆತೋಗಿದ್ಯಾ? ಆದ್ರೆ ಕ್ಷೇತ್ರದ ಜನರು ಮರೆತಿಲ್ಲ. ಯಾಕಂದ್ರೆ ಕಟ್ ಅಂಡ್ ಪೇಸ್ಟ್ ಮಾಡೋದು ಅವರ ಅಭ್ಯಾಸ. ಹೀಗಾಗಿ ಮರೆತೋಗಿರಬಹುದು. ನಿಮಗೆ (ಮುನಿರತ್ನ) ಯಾವಾಗ ಯಾರನ್ನ ಅಳಿಸಬೇಕು, ಯಾವಾಗ ಹೊದಿಯಬೇಕು ಅನ್ನೋದು ತುಂಬಾ ಚೆನ್ನಾಗಿ ಗೊತ್ತಿದೆ. ಜನ ನಿಮಗೆ ಬುದ್ದಿ ಕಲಿಸ್ತಾರೆ ಎಂದರು.

ಅವರಿಗೆ ಈಗ ಕಾಂಗ್ರೆಸ್ ತಾಯಿ ಮರೆತು ಹೋಗಿದೆ. ರಕ್ತ ಬದಲಾಗಿದೆ. ಕೆಂಪು ಹೋಗಿ ಈಗ ಕೇಸರಿ ಆಗಿದೆ. ಸಿನಿಮಾ ತೆಗೀಯೋರಿಗೆ ಯಾವಾಗ ಅಳಿಸಬೇಕು, ಯಾವಾಗ ಹೊದೆಸಬೇಕು ಅನ್ನೋದು ಗೊತ್ತಿರ್ತದೆ. ಯಾರೇ ಏನೇ ಹೇಳಿಕೆ ನೀಡಿದ್ರೂ ಅದು ಬರೀ ರಾಜಕೀಯ ಹೇಳಿಕೆ ಮಾತ್ರ. ಆದರೆ ನಾವು ವೈಯಕ್ತಿಕ ನಿಂದನೆ ಮಾಡಲ್ಲ. ನಮಗೂ ಜವಾಬ್ದಾರಿ ಇದೆ ಎಂದರು.

ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಅನ್ನೋ ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಶೋಕ್ ಅವರಿಗೆ, ಮಂತ್ರಿ ಮಂಡಲದ ಒಕ್ಕಲಿಗ ಸಚಿವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ನೇರ ಫೈಟ್ ಅವರವರಿಗೆ ಇರಲಿ. ನೂರಿ ಕುಸ್ತಿ ಏನು ಅಂತಾ ಅವರನ್ನೇ ಕೇಳಿ ಹೇಳ್ತಾರೆ ಎಂದರು‌. ಇನ್ನು
ಅಶೋಕ್ ಅವರು ಏಸು ಪ್ರತಿಮೆ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ಚುನಾವಣಾ ಡ್ರಾಮಾ ಆದ್ಮೇಲೆ ಎಲ್ಲದಕ್ಕೂ ಉತ್ತರ ಕೊಡ್ತೀವಿ. ಈಗ‌ ಸದ್ಯಕ್ಕೆ ಕುಸುಮಾ ಮತ್ತು ಮುನಿರತ್ನ ವಿಚಾರ ಅಷ್ಟೆ ಎಂದರು.

LEAVE A REPLY

Please enter your comment!
Please enter your name here