ನಿಖಿಲ್ ಅಭಿನಯಿಸಿರುವ ಅಭಿಮನ್ಯು ಪಾತ್ರದ ಬಗ್ಗೆ ಹಾಡಿಹೊಗಳಿದ ಮುನಿರತ್ನ..!

0
142

ವರಮಹಾಲಕ್ಷ್ಮೀ ಹಬ್ಬದ ಶುಭಸಂದರ್ಭದಲ್ಲಿ ಕುರುಕ್ಷೇತ್ರ ಚಿತ್ರ ರಿಲೀಸ್ ಆಗಲಿದೆ. ಈ ಕಾರಣಕ್ಕೆ ನಿನ್ನೆ ಬೆಂಗಳೂರಿನಲ್ಲಿ ಕುರುಕ್ಷೇತ್ರ ಚಿತ್ರ ತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದು, ಈ ವೇಳೆ ಮಾತನಾಡಿದ ಮುನಿರತ್ನ, ಅಭಿಮನ್ಯು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಕುರುಕ್ಷೇತ್ರ ಚಿತ್ರ ಯಾವಾಗ ರಿಲೀಸ್ ಆಗತ್ತೆ ಅನ್ನೋ ನಿರೀಕ್ಷೆ ಇತ್ತು, ಇದೀಗ ಆ ಟೈಮ್ ಬಂದಿದೆ. ಆಗಸ್ಟ್ 9ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಮತ್ತೆ ಹಿಂದೆ ತೆಗೆದುಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಅಲ್ಲದೇ, ಎಷ್ಟೇ ಲೇಟ್ ಆದ್ರೂ, ಬಿಡುಗಡೆ ತಡವಾದ್ರೂ ಎಲ್ಲದಕ್ಕೂ ಸಾಥ್ ನೀಡಿದವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ಅಂಬಿ ಅಭಿನಯದ ಭೀಷ್ಮನ ಪಾತ್ರದ ಬಗ್ಗೆ ಮುನಿರತ್ನ ಮಾತು

ಇನ್ನು ರೆಬೆಲ್ ಸ್ಟಾರ್ ಅಂಬರೀಷ್ ಬಗ್ಗೆ ಮಾತನಾಡಿದ ಮುನಿರತ್ನ, ಇದೇ ವೇದಿಕೆ ಮೇಲೆ ನಾವು ಅಂಬರೀಷ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೀವಿ. ಅಭಿನಂದನೆ ಸಲ್ಲಿಸಿದ್ದೀವಿ. ಅವರ ಪಾತ್ರದ ಬಗ್ಗೆ ಸಾಕಷ್ಟು ಮಾತನಾಡಿದ್ದೀವಿ. ಆದ್ರೆ ಈಗ ಇದೇ ವೇದಿಕೆ ಮೇಲೆ ಅವರಿಲ್ಲದೇ ಮಾತನಾಡಬೇಕಾಗಿದೆ ಎಂದು ಮುನಿರತ್ನ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಆರೋಗ್ಯ ಸರಿ ಇಲ್ಲದಿದ್ದರೂ ಈ ಚಿತ್ರಕ್ಕೆ ಪ್ರಾಮಾಣಿಕವಾಗಿ, ಭೀಷ್ಮನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದ್ರೆ ಈಗ ಭೀಷ್ಮನ ಪಾತ್ರಧಾರಿ ಅಂಬರೀಷ್ ನಮ್ಮ ಮುಂದೆ ಇಲ್ಲವೆಂಬುದನ್ನ ಊಹಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದರು.

‘ರವಿಚಂದ್ರನ್‌ಗೆ ಕೃಷ್ಣನ ಪಾತ್ರ ನೀಡಲು ಇದೇ ಕಾರಣ’
ಇನ್ನು ಕುರುಕ್ಷೇತ್ರ ಸೂತ್ರಧಾರ ಶ್ರೀಕೃಷ್ಣನ ಪಾತ್ರದಲ್ಲಿ ಮಿಂಚಿರುವ ಕ್ರೇಜಿಸ್ಟಾರ್ ಬಗ್ಗೆ ಮುನಿರತ್ನ ಮಾತನಾಡಿದ್ದು, ಮೊದಲು ನಾನು ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಸೆಲೆಕ್ಟ್ ಮಾಡಿದಾಗ ಹಲವರು ನಕ್ಕಿದ್ರು, ಈ ಕಾರಣಕ್ಕಾಗಿಯೇ ನಾನು ರವಿಚಂದ್ರನ್‌ರೇ ಕೃಷ್ಣನ ಪಾತ್ರ ಮಾಡಬೇಕೆಂದು ನಿರ್ಧರಿಸಿದೇ. ಆಮೇಲೆ ನನಗೆ ನಾನು ಸೂಕ್ತ ವ್ಯಕ್ತಿಯನ್ನೇ ಕೃಷ್ಣನ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ದೇನೆನ್ನಿಸಿತು. ಅಷ್ಟು ಚೆನ್ನಾಗಿ ಪಾತ್ರ ಮೂಡಿಬಂದಿದೆ ಎಂದು ಹೇಳಿದ್ದಾರೆ.

ನಮ್ಮವರನ್ನ ತೆಗೆದುಕೊಂಡಿದ್ದಕ್ಕೆ ಅಭಿಮನ್ಯುವಿನ ಪಾತ್ರ ಚೆನ್ನಾಗಿ ಮೂಡಿಬಂದಿದೆ
ಇನ್ನು ನಿಖಿಲ್ ಅಭಿನಯಿಸಿರುವ ಅಭಿಮನ್ಯು ಪಾತ್ರದ ಬಗ್ಗೆ ಹಾಡಿಹೊಗಳಿದ ಮುನಿರತ್ನ, ಕುರುಕ್ಷೇತ್ರದಲ್ಲಿ ಬರುವ ಅಭಿಮನ್ಯು ಪಾತ್ರ ತುಂಬಾ ಮುಖ್ಯವಾಗಿದ್ದು, ಅದನ್ನ ನಿಖಿಲ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಈ ಥರದ ಪಾತ್ರಕ್ಕೆ ನಮ್ಮವರನ್ನೇ ಆಯ್ಕೆ ಮಾಡಬೇಕು. ಆಗಲೇ ಪಾತ್ರ ಚೆನ್ನಾಗಿರುತ್ತದೆ. ಹೊರಗಿನವರಿಗೆ ತಂದು ಈ ರೀತಿಯ ಪಾತ್ರ ಕೊಟ್ಟರೆ, ಅದು ನಮ್ಮವರು ಮಾಡಿದ ಹಾಗೇ ಆಗುವುದಿಲ್ಲವೆಂದು ಅಭಿಮನ್ಯು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here