ಪ್ರಭುದೇವ ಡ್ಯಾನ್ಸ್ ಮಾಡಿರುವ ‘ಮುಕ್ಕಾಲಾ..ಮುಕ್ಕಾಬುಲಾ’ ಹಾಡು ಹುಟ್ಟಿದ್ದು ಹೀಗೆ…!

0
460

ತಮಿಳಿನ ‘ಕಾದಲನ್’ ಸಿನಿಮಾದ ‘ಮುಕ್ಕಾಲಾ…ಮುಕ್ಕಾಬುಲಾ..ಲೈಲಾ’ ಹಾಡು ಕೇಳಿದರೆ ಯಾರಿಗಾದರೂ ಒಂದು ಸ್ಟೆಪ್ ಹಾಕಬೇಕು ಎನಿಸದೆ ಇರದು. ಈ ಹಾಡು ಎಲ್ಲರನ್ನೂ ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ. ಕನ್ನಡಿಗ ಪ್ರಭುದೇವ ಸೂಪರ್ ಡ್ಯಾನ್ಸರ್ ಎಂದು ಎಲ್ಲರಿಗೂ ತಿಳಿದದ್ದೇ ಈ ಚಿತ್ರ ಬಿಡುಗಡೆಯಾದ ನಂತರ.

 

 

ಈ ಸಿನಿಮಾವನ್ನು ನಂತರ ತೆಲುಗಿನಲ್ಲಿ ‘ಪ್ರೇಮಿಕುಡು’ ಹಾಗೂ ಹಿಂದಿಯಲ್ಲಿ ‘ಹಮ್ ಸೆ ಹೆ ಮುಕಾಬುಲಾ’ ಹೆಸರಿನಲ್ಲಿ ಡಬ್ಬಿಂಗ್ ಮಾಡಲಾಯಿತು. ಈ ಚಿತ್ರದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಇತರ ಎಲ್ಲಾ ಹಾಡುಗಳಿಗಿಂತ ಮನೋ ಹಾಗೂ ಸ್ವರ್ಣಲತಾ ಹಾಡಿದ ‘ಮುಕ್ಕಾಲಾ…ಮುಕ್ಕಾಬುಲಾ..ಲೈಲಾ’ ಹಾಡು ಇಂದಿಗೂ ಬಹಳ ಫೇಮಸ್. ರೆಹಮಾನ್ ಸಂಗೀತ, ಮನೋ ಧ್ವನಿ, ಪ್ರಭುದೇವ ಡ್ಯಾನ್ಸ್ ಎಲ್ಲಾ ಸೇರಿರುವ ಈ ಹಾಡು ಬಹಳ ಅದ್ಭುತವಾಗಿ ಮೂಡಿಬಂದಿದೆ.

 

 

ಈ ಹಾಡಿನ ಹಿಂದಿರುವ ಸ್ವಾರಸ್ಯಕರ ಸಂಗತಿಯನ್ನು ಮನೋ ಹೇಳಿಕೊಂಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ಗಾಗಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮನೋ ಅವರನ್ನು ಮುಂಜಾನೆ 3 ಗಂಟೆಗೆ ರೆಕಾರ್ಡಿಂಗ್ ಸ್ಟುಡಿಯೋಗೆ ಬರಹೇಳಿದ್ದಾರೆ. ಈ ಹಾಡು ವಿಭಿನ್ನವಾಗಿ ಮೂಡಿಬರಬೇಕು ಎಂದು ರೆಹಮಾನ್, ಮನೋ ಬಳಿ ಹೇಳಿದ್ದಾರೆ.

 

 

ಹಾಡಿನ ಟ್ಯೂನ್ ಕೇಳಿದ ಮನೋ, 3-4 ಶೈಲಿಯಲ್ಲಿ ಹಾಡು ಹೇಳಿದರೂ ಅದು ರೆಹಮಾನ್ ಅವರಿಗೆ ಹಿಡಿಸಿಲ್ಲ, ಅಯ್ಯೋ, ಬೆಳಂಬೆಳಗ್ಗೆ ಈ ಚಾಲೆಂಜ್ ಬೇಕಿತ್ತಾ ಎಂದುಕೊಂಡು ಮನೋ ಟೀ ಕುಡಿಯಲು ಹೊರಹೋಗಿದ್ದಾರೆ. ಅಲ್ಲಿ ವಾಚ್ಮ್ಯಾನ್ ಒಬ್ಬರು ಹಿಂದಿ ಹಾಡೊಂದನ್ನು ಏರುಧ್ವನಿಯಲ್ಲಿ ವಿಭಿನ್ನವಾಗಿ ಹಾಡುತ್ತಿದ್ದರಂತೆ. ಅದನ್ನು ಕೇಳಿದೊಡನೆ ಮನೋ ಈ ರೀತಿ ಹಾಡಿದರೆ ಹೇಗೆ ಎಂದು ರೆಹಮಾನ್ ಬಳಿ ಹಾಡಿ ತೋರಿಸಿದ್ದಾರೆ. ಅದನ್ನು ಕೇಳಿದೊಡನೆ ರೆಹಮಾನ್ ಕೂಡಾ ಅದನ್ನೇ ಮುಂದುವರೆಸುವಂತೆ ಹೇಳಿದ್ದಾರೆ. ಇದಾದ ಕೇವಲ 15 ನಿಮಿಷಗಳಲ್ಲಿ ಹಾಡಿನ ರೆಕಾರ್ಡಿಂಗ್ ಪೂರ್ಣಗೊಂಡಿದೆ. ಮುಂದೆ ಜರುಗಿದ್ದು ಇತಿಹಾಸ .

LEAVE A REPLY

Please enter your comment!
Please enter your name here