ಬಾಯಲ್ಲಿ ನೀರೂರಿಸುವ ‘ತೊಂಡೆಕಾಯಿ ಉಪ್ಪಿನಕಾಯಿ’

0
103
Loading...

ಉಪ್ಪಿನಕಾಯಿ ಹೆಸರು ಕೇಳಿದೊಡನೆ, ಅಥವಾ ಉಪ್ಪಿನಕಾಯಿ ನೋಡುತ್ತಿದ್ದಂತೆ ಪ್ರತಿಯೊಬ್ಬರ ಬಾಯಲ್ಲಿ ನೀರೂರುತ್ತದೆ. ಉಪ್ಪಿನಕಾಯಿ ರುಚಿಯೇ ಹಾಗೆ. ಇನ್ನು ಮಾವಿನಕಾಯಿ, ನಿಂಬೆಕಾಯಿ, ಹುರುಳಿಕಾಯಿ ಸೇರಿ ಎಷ್ಟೋ ವಿಧವಾದ ಉಪ್ಪಿನಕಾಯಿ ರುಚಿ ನೋಡಿರುತ್ತೀರ. ತೊಂಡೆಕಾಯಿ ಉಪ್ಪಿನಕಾಯಿ ಕೂಡಾ ಬಹಳ ರುಚಿಯಿರುತ್ತದೆ. ಮುಂದಿನ ಬಾರಿ ಮನೆಗೆ ತೊಂಡೆಕಾಯಿ ತಂದಾಗ ಉಪ್ಪಿನಕಾಯಿ ಮಾಡುವುದನ್ನು ಮರೆಯಬೇಡಿ.

 

 

 

ಬೇಕಾಗುವ ಸಾಮಗ್ರಿಗಳು

ತೊಂಡೆಕಾಯಿ – 1/2 ಕಿಲೋ
ಕಾಶ್ಮೀರಿ ಕೆಂಪು ಮೆಣಸಿನಕಾಯಿ – 25
ಅರಿಶಿನ -1 ಸ್ಪೂನ್
ಬೆಳ್ಳುಳ್ಳಿ – 1/2ಕಪ್
ವಿನಿಗರ್ – 3 ಸ್ಪೂನ್


ಎಣ್ಣೆ – 2 ಕಪ್
ಶುಂಠಿ – 2 ಚಿಕ್ಕತುಂಡು
ಕಾಳುಮೆಣಸು – 1 ಸ್ಪೂನ್
ಜೀರ್ಗೆ – 1 ಸ್ಪೂನ್
ಚೆಕ್ಕೆ – 1 ತುಂಡು


ಬೆಲ್ಲದ ಪುಡಿ – 3 ಸ್ಪೂನ್
ಮೆಂತ್ಯ – 1 ಸ್ಪೂನ್
ಕರಿಬೇವಿನ ಸೊಪ್ಪು – 6 ಎಸಳು
ಹಿಂಗು – ಅಗತ್ಯವಿದ್ದಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

 

1. ತೊಂಡೆಕಾಯಿಯನ್ನು ತೊಳೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
2. ಒಂದು ಜಾಡಿಗೆ ತೊಂಡೆಕಾಯಿ, ಉಪ್ಪು ಸೇರಿಸಿ ಎರಡನ್ನೂ ಬೆರೆಸಿ 2 ಗಂಟೆಗಳ ಕಾಲ ಬಿಸಿಲಿನಲ್ಲಿಡಿ. ನಂತರ ಜಾಡಿಯಲ್ಲಿ ಸಂಗ್ರಹವಾದ ನೀರನ್ನು ಹೊರಚೆಲ್ಲಿ.
3. ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಮೆಂತ್ಯ, ಅರಿಶಿನ, ಕರಿಮೆಣಸು, ಲವಂಗ, ಬೆಲ್ಲ, ವಿನಿಗರ್, ಉಪ್ಪು ಹಾಗೂ ಉಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿಕೊಳ್ಳಿ.

 

4. ರುಬ್ಬಿಕೊಂಡ ಮಿಶ್ರಣವನ್ನು ತೊಂಡೆಕಾಯಿಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ 4-5 ಗಂಟೆಗಳ ಕಾಲ ಬಿಡಿ.
5. ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕರಿಬೇವು, ಹಿಂಗು, ತೊಂಡೆಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಹುರಿದು ಸ್ಟೌ ಆಫ್ ಮಾಡಿ.
6 ಮಿಶ್ರಣ ತಣ್ಣಗಾದಾಗ ಉಪ್ಪಿನಕಾಯಿಯನ್ನು ಜಾಡಿಗೆ ಸೇರಿಸಿ ಉಳಿದ ಎಣ್ಣೆ, ವಿನಿಗರ್ ಸೇರಿಸಿ 2-3 ದಿನಗಳ ನಂತರ ಬಿಟ್ಟು ರೆಫ್ರಿಜರೇಟರ್‍ನಲ್ಲಿ ಸ್ಟೋರ್ ಮಾಡಬಹುದು.

 

 

ಗೋವಾದಲ್ಲಿ ಹೆಚ್ಚಾಗಿ ತೊಂಡೆಕಾಯಿ ಬಳಸುತ್ತಾರೆ. ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತೊಂಡೆಕಾಯಿ ಬೆಳೆಯುತ್ತಾರೆ. ಇಲ್ಲಿ ಬಹುತೇಕ ಎಲ್ಲಾ ಅಡುಗೆಯಲ್ಲೂ ತೊಂಡೆಕಾಯಿ ಇದ್ದೇ ಇರುತ್ತದೆ.

Loading...

LEAVE A REPLY

Please enter your comment!
Please enter your name here