ಯುವತಿಯರ ಪ್ರೇರಕ ಚೈತನ್ಯ: ಸುಧಾಮೂರ್ತಿ ಅಮ್ಮ

0
464

ಸಹಾಯ ಮಾಡಲು ದುಡ್ಡಿಗಿಂತ ಮಾಡಬೇಕೆಂಬ ಮನಸ್ಸು ಮುಖ್ಯ. ಕೆಲವರಿಗೆ ಮಾಡುವ ಮನಸ್ಸಿದ್ದರೂ ದುಡ್ಡಿನ ಕೊರತೆ,ಇನ್ನೂ ಕೆಲವರ ಕಡೆ ಎಷ್ಟೇ ದುಡ್ಡಿದ್ದರೂ ಸಹಾಯ ಮಾಡಬೇಕೆಂಬ ಮನಸ್ಸಿರುವುದಿಲ್ಲ.

ದುಡ್ಡು ಹಾಗೂ ಒಳ್ಳೆಯ ವ್ಯಕ್ತಿತ್ವ ಎರಡೂ ಇರುವವರು ಸಿಗುವುದು ತುಂಬಾ ವಿರಳ,ಇಂತಹ ವಿರಳ ವ್ಯಕ್ತಿತ್ವದಲ್ಲಿ ಸುಧಾ ಮೂರ್ತಿ ಕೂಡ ಒಬ್ಬರು.

ನಾವು ತುಂಬಾ ಶ್ರೀಮಂತರನ್ನ ನೋಡಿರುತ್ತೇವೆ ಆದರೆ ತುಂಬಾ ಶ್ರೀಮಂತರಾದರೂ ಸರಳತೆಯಿಂದ ಬದುಕುವವರನ್ನ ನೋಡುವುದು ಕಡಿಮೆ,ಇಂತಹ ಸರಳ ಜೀವನಕ್ಕೆ ‌ಒಂದು ಉದಾಹರಣೆ ಸುಧಾಮೂರ್ತಿ.

ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಜಡೆಗೆ ಮಲ್ಲಿಗೆ ಹೂವು ಎಂಬ ಗಾದೆಯಂತೆ ಸದಾ ಶೋಕಿಯಲ್ಲಿ ಮೆರೆಯುವವರ ಮಧ್ಯೆ ಸುಧಾಮೂರ್ತಿ ಅವರ ಸರಳತೆ ಅನೇಕ ಯುವ ಮನಸ್ಸುಗಳನ್ನ ಗೆಲ್ಲಲು ಕಾರಣವಾಯಿತು,ಎಷ್ಟೋ ಯುವಕರಿಗೆ ಅವರ ಸರಳ ಜೀವನ ಆದರ್ಶವಾಗಿದೆ.

ಇನ್ಫೋಸಿಸ್ ಇಂದು ಜಗತ್ತಿನ ಐಟಿ ಲೋಕದ ಐಕಾನ್. ಸುಧಾಮೂರ್ತಿ ಅಮ್ಮ ಅದರ ಸಾಂಸ್ಕೃತಿಕ ಬ್ರಾಂಡ್ ಅಂಬಾಸಿಡರ್. ‌ತಮ್ಮ ಫೌಂಡೇಶನ್ ಮೂಲಕ ನೂರಾರು ಕೋಟಿ ದಾನ ಮಾಡಿದ್ದಾರೆ. ಮಾಡಿದನೆಂಬ ಭಾವನೆ ಸುಳಿಯದ ನಿರ್ಲಿಪ್ತ ಜೀವ.
ಪ್ರವಾಹ ಪೀಡಿತರಿಗೆ ತಕ್ಷಣ ಸ್ಪಂದಿಸಿ ಲೋಕದ ಗಮನ ಸೆಳೆದರು.

ಅವರ ಸರಳತೆ,ಕಷ್ಟದಲ್ಲಿ ಕಣ್ಣೀರು ಹಾಕುವವರಿಗೆ ಮಿಡಿಯುವ ಮನ, ವಿನಯತೆ ಎಲ್ಲರ ಮನಗೆದ್ದಿದೆ.
ತಮ್ಮ ಕ್ಷೇತ್ರ ಅಷ್ಷೇ ಅಲ್ಲದೆ ಸಾಹಿತ್ಯ ಲೋಕದಲ್ಲೂ ಸುಧಾಮೂರ್ತಿ ಅವರ ಸಾಧನೆ ದೊಡ್ಡದು.
ಕೋಟ್ಯಾಂತರ ಓದುಗರ ಮನ ಮುಟ್ಟಿ ಸಾಹಿತ್ಯ ಕ್ಷೇತ್ರದಲ್ಲೂ ಸೈ ಅನಿಸಿಕೊಂಡಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಸಾಮಾನುಗಳ ಕಳಿಸಲು ಖುದ್ದಾಗಿ ಅವರೇ ನಿಂತ ಫೋಟೋ ವೈರಲ್ ಆಗಿ ಇತರರಿಗೆ ಮಾದರಿಯಾಯಿತು.
ಹಣ,ಕೀರ್ತಿ, ಅಧಿಕಾರ ಬಿಗ್ ಸೆಲೆಬ್ರಿಟಿ ಸ್ಟೇಟಸ್ ಇದ್ದರೂ ಕೊಂಚವೂ ಅಹಂಕಾರ ಅವರ ಹತ್ತಿರ ಸುಳಿದಿಲ್ಲ, ಸುಳಿಯುವದೂ ಇಲ್ಲ.

ಸದಾ ನಗು ಮುಖದ ಅವರು ಕರ್ನಾಟಕದ ಹೆಮ್ಮೆ.
ಹೀಗೆ ಸದಾ ನಗುತ ನೂರಾರು ಕಾಲ ಬಾಳಿ ನಮಗೆಲ್ಲ ಮಾರ್ಗದರ್ಶಕರಾಗಿರಲಿ ಸುಧಾ ಅಮ್ಮಾ.

ಮುನ್ನುಡಿ_ಯಾಪಲಪರವಿ

LEAVE A REPLY

Please enter your comment!
Please enter your name here